ಕರ್ನಾಟಕ

karnataka

ETV Bharat / state

ಪಕ್ಷದ ಪರವಲ್ಲ, ವ್ಯಕ್ತಿಯ ಪರ ಪ್ರಚಾರ ಮಾಡಿದ್ದೇನೆ: ದರ್ಶನ್ - ದರ್ಶನ್​ ಪ್ರಚಾರ

ನನಗೆ ವ್ಯಕ್ತಿ ಮುಖ್ಯ, ಮುನಿರತ್ನ ಮಾನವೀಯತೆ ಗುಣವುಳ್ಳವರು ಹಾಗಾಗಿ ಮುನಿರತ್ನ ಪರ ಮತ ಕೇಳಲು ಬಂದಿದ್ದೇನೆ ಎಂದು ಮುನಿರತ್ನ ಪರ ಪ್ರಚಾರಕ್ಕೆ ಸ್ಪಷ್ಟೀಕರಣ ನೀಡಿದರು.

Darshan
ದರ್ಶನ್

By

Published : Oct 30, 2020, 8:59 PM IST

ಬೆಂಗಳೂರು:ವ್ಯಕ್ತಿ ಯಾವ ಪಕ್ಷದಲ್ಲಿದ್ದಾರೆ ಎನ್ನುವುದು ಮುಖ್ಯವಲ್ಲ, ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದು ಮುಖ್ಯ. ಮಾಡಿದ ಕೆಲಸ ನೋಡಿ ಮುನಿರತ್ನಗೆ ಮತ ನೀಡಿ ಎಂದು ಆರ್.ಆರ್.ನಗರದ ಮತದಾರರಿಗೆ ಡಿ ಬಾಸ್ ದರ್ಶನ್ ಕರೆ ನೀಡಿದ್ದಾರೆ.

ಆರ್.ಆರ್.ನಗರದಲ್ಲಿ ಮುನಿರತ್ನ ಪರ ಚುನಾವಣಾ ರ‌್ಯಾಲಿ ನಡೆಸಿದ ದರ್ಶನ್, ನಾನು ಒಂದು ಪಕ್ಷದ ಪರ ಪ್ರಚಾರ ಮಾಡಿಲ್ಲ ವ್ಯಕ್ತಿಯ ಪರ ಪ್ರಚಾರ ಮಾಡಿದ್ದೇನೆ, ಅವರು ಯಾವ ಪಕ್ಷದಲ್ಲಿದ್ದಾರೆ ಎನ್ನುವುದು ಮುಖ್ಯವಲ್ಲ ಅವರು ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದು ಮುಖ್ಯ. ನಂಬಿದ ಜನರನ್ನು ಅವರು ಕೈಬಿಡಲಿಲ್ಲ, ಕೊರೊನಾ ಸಂಕಷ್ಟದಲ್ಲಿ ಮನೆಯಲ್ಲಿ ಕೂರದೇ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿದ್ದರು, ಅವರಿಗೆ ನಿಮ್ಮ ಪ್ರೋತ್ಸಾಹ ಬೆಂಬಲ ಅಗತ್ಯವಿದೆ. ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಗಮನ ಸೆಳೆದ ಕುರುಕ್ಷೇತ್ರ ಡೈಲಾಗ್:ತೆರೆದ ವಾಹನದಲ್ಲಿ ಪ್ರಚಾರ ಕಾರ್ಯ ನಡೆಸಿ ಅಲ್ಲಲ್ಲಿ ದರ್ಶನ್ ಭಾಷಣ ಮಾಡುತ್ತಾ ಮತ ಯಾಚನೆ ಮಾಡಿದರು. ಈ ವೇಳೆ, ಅಭಿಮಾನಿಗಳು ಕುರುಕ್ಷೇತ್ರ ಚಿತ್ರದ ಡೈಲಾಗ್​ಗೆ ಬೇಡಿಕೆ ಇಡುತ್ತಿದ್ದರು, ಅಭಿಮಾನಿಗಳಿಗೆ ನಿರಾಸೆ ಮಾಡದ ದಚ್ಚು ಅಲ್ಲಲ್ಲಿ ಡೈಲಾಗ್​ಗಳನ್ನು ಹೊಡೆಯುತ್ತಾ ಅಭಿಮಾನಿಗಳನ್ನು ರಂಜಿಸಿದರು.

ಅಭಿವೃದ್ಧಿಗೆ ಅವಕಾಶ ನೀಡಿ:ಆರ್.ಆರ್.ನಗರ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡುವಂತೆ ಅಭ್ಯರ್ಥಿ ಮುನಿರತ್ನ ಮನವಿ ಮಾಡಿದರು. ಕ್ರಮ ಸಂಖ್ಯೆ 3 ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ನನ್ನನ್ನು ಆಯ್ಕೆ ಮಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಈ ಸರ್ಕಾರದ ಅವಧಿ ಇನ್ನೂ ಎರಡು ವರ್ಷ ಇದೆ, ಅಭಿವೃದ್ಧಿ ಕೆಲಸ ಮಾಡಲು ಸಾಕಷ್ಟು ಸಮಯವಿದೆ ನನಗೆ ಅವಕಾಶ ನೀಡಿದರೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು ಎಂದು ಮನವಿ ಮಾಡಿದರು.

ABOUT THE AUTHOR

...view details