ಬೆಂಗಳೂರು :ಕೆಲ ದಿನಗಳ ಹಿಂದಷ್ಟೇ ಮಹಿಳೆ ಮೇಲೆ ಸುಳ್ಳು ಕೇಸ್ ದಾಖಲಿಸಿ ಧಮ್ಕಿ ನಡೆಸಿದ್ದ ಆರೋಪ ಮಾಸುವ ಮುನ್ನವೇ ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಸಂತ ಕುಮಾರ್ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ.
ಗೆದ್ದಲಹಳ್ಳಿ ನಿವಾಸಿಯಾಗಿರುವ ಸಾವಿತ್ರಮ್ಮ ಜಾಗದ ವಿಚಾರವಾಗಿ ವಿಜಯ್ ಕುಮಾರ್ ಎಂಬಾತನ ವಿರುದ್ಧ ಕೆಲ ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನ ಸ್ವೀಕರಿಸಿದ ಇನ್ಸ್ಪೆಕ್ಟರ್ ವಸಂತ್, ಎಫ್ಐಆರ್ ಮಾಡದೇ ಆರೋಪಿ ಜೊತೆಗೆ ದೂರುದಾರರ ಮನೆಗೆ ಹೋಗಿ ದೂರು ವಾಪಸ್ ಪಡೆಯುವಂತೆ ಧಮ್ಕಿ ಹಾಕಿದ್ದಾರೆ ಎಂದು ಮಹಿಳೆ ಅರೋಪಿಸಿದ್ದಾಳೆ.
ಈ ಸಂಬಂಧ ದೂರುದಾರರಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆ ಕಾರ್ಯಕರ್ತರು ಇಂದು ಹೆಣ್ಣೂರು ಪೊಲೀಸ್ ಠಾಣೆ ಮುಂದೆ ಮುತ್ತಿಗೆ ಹಾಕಿದ್ರು. ಇನ್ಸ್ಪೆಕ್ಟರ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟಿಸಿದ್ರು.