ಬೆಂಗಳೂರು/ಆನೇಕಲ್ :'ದಲಿತ ನಾಯಕ ಸಿಎಂ ಆಗ್ತಾನೆ ಎಂಬ ಕನಸು ಕಾಣುವವನು ಹುಚ್ಚ' ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದ್ದಾರೆ. ಆನೇಕಲ್ ಪಟ್ಟಣದ ಗುಡ್ನಹಳ್ಳಿ ಗ್ರಾಮದ ಸಾಯಿರಾಮ್ ಕಾಲೇಜಿನ 21ನೇ ಘಟಿಕೋತ್ಸವ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರೀತಿಯ ಹೇಳಿಕೆ ನೀಡಿದ್ದಾರೆ.
ದಲಿತ ಮುಖ್ಯಮಂತ್ರಿ ಕನಸು ಕಾಣುವವನು ಹುಚ್ಚ. ಅದಕ್ಕೆ ಇತಿಹಾಸದಲ್ಲಿ ಹಲವು ಉದಾಹರಣೆಗಳಿವೆ. ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಐದು ವರ್ಷ ಮಂತ್ರಿಯಾಗಲು ಯಾವ ರಾಜಕೀಯ ಪಕ್ಷಗಳು ಬೆಂಬಲ ನೀಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು 9 ಬಾರಿ ಲೋಕಸಭಾ ಸದಸ್ಯರಾಗಿದ್ದರು. ಹಲವು ಬಾರಿ ಶಾಸಕರಾಗಿದ್ದರು.