ಬೆಂಗಳೂರು: ದೇಶದ ಅನೇಕ ನಗರ, ಪಟ್ಟಣಗಳನ್ನು ತಲುಪುವ ಭಾರತೀಯ ರೈಲ್ವೆ ಸೇವೆ, ಇದೇ ಮೊದಲ ಬಾರಿಗೆ ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿತ್ತು. ಮಾರ್ಚ್ನಲ್ಲಿ ಸ್ಥಗಿತವಾದ ಪ್ರಯಾಣಿಕ ರೈಲ್ವೆ ಸೇವೆಗಳು ಆರು ತಿಂಗಳಾದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ವಿಶೇಷ ರೈಲುಗಳು, ವಲಸೆ ಕಾರ್ಮಿಕರನ್ನು ಊರುಗಳಿಗೆ ತಲುಪಿಸುವ ಶ್ರಮಿಕ ರೈಲುಗಳ ಓಡಾಟ ಮಾತ್ರ ನಡೆಯುತ್ತಿದೆ.
ಇದರಿಂದ ರೈಲ್ವೆ ಪ್ರಯಾಣಿಕರನ್ನೇ ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದ ರಾಜ್ಯದ ಸಾವಿರಾರು ಕೂಲಿಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಹಮಾಲಿ ಕಾರ್ಮಿಕರು, ಟೀ ಮಾರುವವರ ಬದುಕು ಹಳಿ ತಪ್ಪಿದಂತಾಗಿದೆ. ಪ್ರತಿನಿತ್ಯ ಓಡಾಡುವ ಪ್ರಯಾಣಿಕರ ಭಾರವಾದ ಲಗೇಜು, ಇತರ ಸರಕು ಹೊರಲೆಂದೇ ಕೆಂಪು ಶರ್ಟ್ ಧರಿಸಿ ಹಮಾಲಿ ಮಾಡುತ್ತಿದ್ದ ಕಾರ್ಮಿಕರಿಗೆ ಈಗ ಕೆಲಸ ವಿಲ್ಲದಂತಾಗಿದೆ. ಇತರರ ಭಾರ ಹೊತ್ತು ತಮ್ಮ ಜೀವನದ ಬಂಡಿ ಸಾಗಿಸುತ್ತಿರುತ್ತಾರೆ. ಆದರೆ ಏಕಾಏಕಿ ಬಂದ ಕೊರೊನಾ ಇವರ ಜೀವನದ ದಿಕ್ಕನ್ನೇ ಬದಲಿಸಿದೆ. ಕೆಲಸವಿಲ್ಲದ ಕಾರಣ ಒಂದು ಹೊತ್ತು ಊಟದ ಸಂಪಾದನೆಯೂ ಆಗದೆ, ಬಿಸ್ಕೇಟ್, ನೀರು ಕುಡಿದು ಜೀವನ ಸಾಗಿಸುವಂತಾಗಿದೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಯಶವಂತಪುರ ರೈಲ್ವೆ ನಿಲ್ದಾಣದ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, 12 ವರ್ಷದಿಂದ ಹಮಾಲಿಯಾಗಿ ದುಡಿಯುತ್ತಿದ್ದೇನೆ. ರೈಲ್ವೆ ಇಲಾಖೆಯ ಅಧಿಕಾರಿಗಳೇ ಒಂದೆರಡು ಬಾರಿ ರೇಷನ್ ಕಿಟ್ ಕೊಟ್ಟು ಸಹಾಯ ಮಾಡಿದ್ರು. ಲಾಕ್ಡೌನ್ ನಂತರ ಕೇವಲ ಒಂದೇ ಒಂದು ಟ್ರೈನ್ ಬಿಟ್ಟಿದ್ದರು. ಕಲ್ಕತ್ತಾ, ದೆಹಲಿ, ಶಿವಮೊಗ್ಗ ಎಕ್ಸ್‌ಪ್ರೆಸ್ ಅಂತ ಬಿಟ್ಟಿದ್ರು. ಈ ಮೂರು ಗಾಡಿಯನ್ನು ನಂಬಿಕೊಂಡು ನಾವು ಜೀವನ ಸಾಗಿಸೋದಕ್ಕೆ ಆಗೋದಿಲ್ಲ. ಒಂದು ಹೊತ್ತು ಊಟವೂ ಇಲ್ಲದೆ ಮಲಗಿದ ದಿನಗಳಿವೆ. ಈಗ ಈ ತಿಂಗಳ ಏಳನೇ ತಾರೀಕಿನಿಂದ ರೈಲು ಆರಂಭ ಆಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದೇವೆ ಎಂದರು.
ರಾಜ್ಯ ಸರ್ಕಾರ ಈವರೆಗೆ ಏನೂ ಸಹಾಯ ಮಾಡಿಲ್ಲ. ಸರ್ಕಾರದ ಡಿ ಗ್ರೂಪ್ ಕೆಲಸ ಕೊಡುತ್ತೇವೆ ಅಂತ ಹೇಳಿದ್ರು, ಆದ್ರೆ ಇನ್ನೂ ಏನೂ ಆಗಿಲ್ಲ. ಇಂತಹ ಪರಿಸ್ಥಿತಿ ಮತ್ತೆ ಬಂದರೆ ಕಷ್ಟ ಇದೆ. ನಮಗೆ ಡಿ ಗ್ರೂಪ್ ಕೆಲಸ ಕೊಟ್ಟರೆ ತುಂಬಾ ಸಹಾಯವಾಗಲಿದೆ. ಈಗ ಓಡಾಡ್ತಿರುವ ಒಂದೊಂದು ರೈಲಿನಿಂದ ಇನ್ನೂರು-ಮುನ್ನೂರು ದುಡಿಯುವುದೇ ದೊಡ್ಡ ಸಮಸ್ಯೆ ಇದೆ. ಈಗಾಗಲೇ 66 ಜನ ಕಾರ್ಮಿಕರಲ್ಲಿ ಕೇವಲ ಇಪ್ಪತ್ತು ಜನ ಮಾತ್ರ ಇದ್ದೇವೆ. ಉಳಿದವರು ಕೆಲಸ ಬಿಟ್ಟು ಊರುಗಳಿಗೆ ಹೋಗಿದ್ದಾರೆ. ಇಲ್ಲೇ ಇರುವ ಇಪ್ಪತ್ತು ಜನ ದುಡಿಮೆ ಇಲ್ಲದೆ, ಮನೆ ನಡೆಸಲು, ಮಕ್ಕಳಿಗೆ ಶಿಕ್ಷಣ ಕೊಡಿಸಲು ಪರದಾಡ್ತಿದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಬೆಂಗಳೂರು ಡಿವಿಷನ್ ಅತ್ಯಂತ ದೊಡ್ಡದಾಗಿದ್ದು, ಯಶವಂತಪುರದಲ್ಲಿ 66 ಹಮಾಲಿ ಕಾರ್ಮಿಕರು, ಸಿಟಿ ರೈಲ್ವೆ ನಿಲ್ದಾಣದಲ್ಲಿ 364 ಮಂದಿ, ಹಾಗೂ ಕಂಟೋನ್ಮೆಂಟ್, ಕೆ.ಆರ್ ಪುರಂ ಪೂರ್ವ ವಿಭಾಗದ ರೈಲ್ವೆ ನಿಲ್ದಾಣಗಳನ್ನೂ ಸೇರಿಸಿದ್ರೆ 1500 ರವರೆಗೆ ಹಮಾಲಿ ಕಾರ್ಮಿಕರು ಕೆಲಸ ಮಾಡ್ತಿದ್ದಾರೆ ಎಂದರು.
ಶಟರ್ ಎಳೆದ ಅಂಗಡಿ-ಮುಂಗಟ್ಟುಗಳು: