ಬೆಂಗಳೂರು: ಬಿಎಂಟಿಸಿಯು ವಜ್ರ ಸೇವೆಯ ಬಸ್ಗಳ ದೈನಿಕ ಹಾಗೂ ಮಾಸಿಕ ಪಾಸಿನ ದರವನ್ನು ಏರಿಕೆ ಮಾಡಿದೆ. ಭಾನುವಾರದಿಂದ ಹೊಸ ದರಗಳು ಜಾರಿಗೆ ಬಂದಿವೆ.
ಇಂಧನ ಬೆಲೆ ಏರಿಕೆಯಿಂದ ಸಂಸ್ಥೆಯ ಆರ್ಥಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ದರ ಏರಿಕೆ ಮಾಡಲಾಗಿದೆ. ಸಾಮಾನ್ಯ ಮಾಸಿಕ ಪಾಸುದಾರರು ಮತ್ತು ಹಿರಿಯ ನಾಗರಿಕ ಸಾಮಾನ್ಯ ಮಾಸಿಕ ಪಾಸುದಾರರು ಭಾನುವಾರದಿಂದ ವಜ್ರ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಕಲ್ಪಿಸಿದ್ದ ಸೌಲಭ್ಯವನ್ನು ವಾಪಸ್ ಪಡೆಯಲಾಗಿದೆ.
ಇದನ್ನೂ ಓದಿ:ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣಿಸಿ: ಬಿಎಂಟಿಸಿ ಬಸ್ಗಳಲ್ಲಿ ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆ
ಹಿರಿಯ ನಾಗರಿಕರ ಪ್ರಯಾಣದ ಟಿಕೆಟ್ ದರ ಹೆಚ್ಚಳ: ವಜ್ರ ಮಾಸಿಕ ಪಾಸ್ ರೂ. 1,500 ರಿಂದ ರೂ.1,800ಕ್ಕೆ ಹೆಚ್ಚಿಸಲಾಗಿದೆ. ವಜ್ರ ದೈನಿಕ ಪಾಸಿನ ದರವನ್ನು ರೂ. 100 ರಿಂದ ರೂ. 120ಕ್ಕೆ, ಸಾಮಾನ್ಯ ಮಾಸಿಕ ಪಾಸುದಾರರು ವಜ್ರ ವಾಹನಗಳಲ್ಲಿ ಪ್ರತಿ ಪ್ರಯಾಣಕ್ಕೆ ನೀಡಬೇಕಿದ್ದ ಟಿಕೆಟ್ ದರವನ್ನು ರೂ. 20 ರಿಂದ ರೂ. 25ಕ್ಕೆ ಹಾಗೂ ಹಿರಿಯ ನಾಗರಿಕರ ಪ್ರತಿ ಪ್ರಯಾಣದ ಟಿಕೆಟ್ ದರವನ್ನು ರೂ 20ರಿಂದ ರೂ. 25ಕ್ಕೆ ಏರಿಸಲಾಗಿದೆ.
ಬಸ್ನಲ್ಲಿ ಮಾಸ್ಕ್ ಕಡ್ಡಾಯ:ಇತ್ತೀಚೆಗೆ ಕೊರೊನಾ ಪ್ರಕರಣಗಳು ಹೆಚ್ಚಾಗುವ ಭೀತಿ ಹಿನ್ನೆಲೆ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾಸ್ಕ್ಅನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಹಾಕಿಕೊಳ್ಳದ ಪ್ರಯಾಣಿಕರಿಗೆ ಚಾಲನಾ ಸಿಬ್ಬಂದಿ ಅರಿವು ಮೂಡಿಸಬೇಕು. ಅಲ್ಲದೇ ಎಲ್ಲ ಸಿಬ್ಬಂದಿ ಅಧಿಕಾರಿಗಳೂ ಮಾಸ್ಕ್ ಹಾಕಿಕೊಂಡೇ ಕಾರ್ಯನಿರ್ವಹಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಬಿಎಂಟಿಸಿ ಸೂಚಿಸಿದೆ.
ಇದನ್ನೂ ಓದಿ:ಮೆಟ್ರೋ, ಬಿಎಂಟಿಸಿ ಬಸ್ಗಳಲ್ಲಿ ಮಾಸ್ಕ್ ಕಡ್ಡಾಯ.. ಹಬ್ಬ, ಹೊಸ ವರ್ಷಾಚರಣೆಗೆ ಎಚ್ಚರ ವಹಿಸಲು ಸೂಚನೆ