ಕರ್ನಾಟಕ

karnataka

ETV Bharat / state

’ಭ್ರಷ್ಟಾಚಾರ ಇದೆ, ಇಲ್ಲ ಎಂದರೆ ನನ್ನಂತಹ ಮೂರ್ಖ ಇನ್ನೊಬ್ಬನಿಲ್ಲ‘: ಡಿ.ಕೆಂಪಣ್ಣ - ಡಿಕೆಶಿ ಭೇಟಿ ಮಾಡಿದ ಕೆಂಪಣ್ಣ

ಭ್ರಷ್ಟಾಚಾರ ಇದೆ. ಆದರೇ ಅದು ಅಷ್ಟಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಹೇಳಿದ್ದಾರೆ.

ಡಿ ಕೆಂಪಣ್ಣ
ಡಿ ಕೆಂಪಣ್ಣ

By ETV Bharat Karnataka Team

Published : Oct 17, 2023, 6:13 PM IST

ಡಿ ಕೆಂಪಣ್ಣ ಹೇಳಿಕೆ

ಬೆಂಗಳೂರು: ಭ್ರಷ್ಟಾಚಾರ ಇದೆ. ಭ್ರಷ್ಟಾಚಾರ ಇಲ್ಲ ಎಂದರೆ, ನನ್ನಂತಹ ಮೂರ್ಖ ಯಾರೂ ಇರೋದಿಲ್ಲ.. ಭ್ರಷ್ಟಾಚಾರ ಇಲ್ಲ ಎಂದು ನಾನೆಲ್ಲೂ ಹೇಳಿಲ್ಲ. ಭ್ರಷ್ಟಾಚಾರ ನಡೀತಿದೆ, ಅದನ್ನು ತಡೆಗಟ್ಟಬೇಕು ಎಂದು ಹೇಳಿದ್ದೇನೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ. ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ಸರ್ಕಾರದಲ್ಲಿ ಭ್ರಷ್ಟಾಚಾರ ಇದೆ. ಆದರೆ, ಅದು ಅಷ್ಟಾಗಿ ಕಂಡುಬರುತ್ತಿಲ್ಲ ಎಂದರು.

ಬಿಬಿಎಂಪಿಯ ಬಾಕಿ ಬಿಲ್ ವಿಚಾರ ಮಾತ್ರ ಇಂದು ಮಾತನಾಡಿದ್ದೇವೆ. ಶೇ 75ರಷ್ಟು ಬಿಲ್​ ಬಾಕಿ ಬಿಡುಗಡೆ ಮಾಡಲು ಹೇಳಿದ್ದೇವೆ. ಡಿಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಮಿಷನ್​ ವಿಚಾರ ತನಿಖೆ ಮಾಡಿ ಎಂದಿದ್ದೇವೆ. ಶೇ 80ಕ್ಕಿಂತ ಹೆಚ್ಚು ಸಿನಿಯಾರಿಟಿ ಮೇಲೆ ಪೇಮೆಂಟ್ ಮಾಡುವ ಭರವಸೆ ಕೊಟ್ಟಿದ್ದಾರೆ. ಅಧಿಕಾರಿಗಳ ಮೇಲಿನ ಕಮಿಷನ್ ಆರೋಪದ ವಿಚಾರವಾಗಿ ಇವತ್ತಿಗೂ ನಾನು, ಈ ಹಿಂದಿನ ಮಾತಿನ ಮೇಲೆ ನಿಂತಿದ್ದೇನೆ. ದೊಡ್ಡ ಪ್ರಮಾಣದ ಕೆಲಸ ಗುತ್ತಿಗೆ ಪಡೆದಿಲ್ಲ. ಹೀಗಾಗಿ ಭ್ರಷ್ಟಾಚಾರ ಬೆಳಕಿಗೆ ಬರ್ತಿಲ್ಲ ಎಂದು ಹೇಳಿದರು.

ಆರೋಪ ಸಾಬೀತು ಮಾಡಿದರೆ ಅವರ ಕಾಲಡಿ ಇರ್ತೇನಿ:ಸದಾನಂದ ಗೌಡರ ಆರೋಪ ವಿಚಾರವಾಗಿ ಮಾತನಾಡಿದ ಅವರು, ನಾನು ಹಾಗೂ ಅಂಬಿಕಾಪತಿ 45 ವರ್ಷದಿಂದ ಸ್ನೇಹಿತರು. ಅಂಬಿಕಾಪತಿ ಮೇಲಿನ‌ ಆರೋಪ ಸುಳ್ಳು. ಸಿಎಂ ಮನೆಯಿಂದ ನಾನು ನೇರವಾಗಿ ನಮ್ಮ ಮನೆಗೆ ಹೋಗಿದ್ದೇನೆ. ಅಂಬಿಕಾಪತಿ‌ ಮನೆಗೆ ನಾನು ಹೋಗಿಲ್ಲ. ಆರೋಪ ಸಾಬೀತು ಮಾಡಿದರೆ ಅವರ ಕಾಲಡಿ ಇರ್ತೇನೆ. ನಾನು ಅಂಬಿಕಾಪತಿ ಪರ ನಿಲ್ಲುತ್ತೇನೆ. ಅಂಬಿಕಾಪತಿ ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ ಎಂದರು.

ಡಿಸಿಎಂ ಅವರಿಗೂ ಈ ಸರ್ಕಾರದಲ್ಲಿ ಕೂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದ್ದೇನೆ. ಆದರೆ, ಉನ್ನತ ಅಧಿಕಾರಿಗಳ ವಿರುದ್ಧ ನಾನು ದೂರು ಹೇಳಿಲ್ಲ. ಕೆಲವೊಂದು ಅಧಿಕಾರಿಗಳು ಅಂತ ಮಾತ್ರ ಹೇಳಿದ್ದೇನೆ. ಇವತ್ತು ಕೂಡ ಡಿಕೆಶಿ ಅವರಿಗೆ ಈ ಬಗ್ಗೆ ತಿಳಿಸಿದ್ದೇನೆ. ಭ್ರಷ್ಟಾಚಾರ ನಡೆಯುತ್ತಿದೆ ಸರ್ ಅಂತ. ಪ್ರಮುಖ ಕಾಮಗಾರಿಗಳು ಈ ಸರ್ಕಾರದ ಅವಧಿಯಲ್ಲಿ ಇನ್ನೂ ಯಾವುದು ಆಗಿಲ್ಲ. ಸರ್ಕಾರ ಬಂದು ಐದೂವರೆ ತಿಂಗಳು‌ಗಳು ಮಾತ್ರವೇ ಕಳೆದಿವೆ. ಬಿಲ್ ಪೇಮೆಂಟ್​ನಲ್ಲಿ ಅವ್ಯವಹಾರ ನಡೆಯುತ್ತಿದೆ. ಇದನ್ನು ಗಮನಕ್ಕೆ ತಂದಿದ್ದೇವೆ, ಸರಿ ಮಾಡುವ ಭರವಸೆಯನ್ನು ಉಪಮುಖ್ಯಮಂತ್ರಿಗಳು ನೀಡಿದ್ದಾರೆ. ಭ್ರಷ್ಟಾಚಾರ ಹಿಂದೆಯೂ ಇತ್ತು, ಈಗಲೂ ಇದೆ, ಅದನ್ನು ತಡೆಗಟ್ಟಬೇಕು. ಈ ಸರ್ಕಾರದಲ್ಲೂ ಭ್ರಷ್ಟಾಚಾರ ಇದೆ. ಈಗ ಯಾವುದೇ ಕೆಲಸ ಮಾಡಿಲ್ಲ, ಹಾಗಾಗಿ ಆರೋಪ ಮಾಡಿಲ್ಲ ಎಂದು ತಿಳಿಸಿದರು.

ಎಲ್ಲ ಅವರ ಬಳಿಯೇ ಇದೆ ತನಿಖೆ ಮಾಡಲಿ:ಬಿಜೆಪಿ ವಿರುದ್ದ ಶೇ40ರಷ್ಟು ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವೇ ಇದೆ. ಸಿಬಿಐ, ಇಡಿ ಅವರ ಬಳಿಯೇ ಇದೆ. ಅವರು ತನಿಖೆ‌ ಮಾಡಿಸಲಿ. ನಾಗಮೋಹನ್ ದಾಸ್ ಸಮಿತಿಗೆ ನಮ್ಮಲ್ಲಿರುವ ಸಾಕ್ಷಿಯನ್ನ ಕೊಡುತ್ತೇವೆ. ಶೇ 40ರಷ್ಟು ಆರೋಪಕ್ಕೆ ಸಂಬಂಧಿಸಿದ ಸಾಕ್ಷಿಯನ್ನು ಸಮಿತಿಗೆ ಕೊಡ್ತೇವೆ ಎಂದರು.

ಬಳಿಕ ಪೇಮೆಂಟ್ ವಿಚಾರವಾಗಿ ಡಿಸಿಎಂ ಅವರೊಂದಿಗೆ ಏನು ಚರ್ಚೆ ಮಾಡಲಿಲ್ಲ. ಬಿಬಿಎಂಪಿ ವಿಚಾರವಾಗಿ ‌ಮಾತ್ರ ಮಾತನಾಡಿದ್ದೇವೆ. ಜಲಸಂಪನ್ಮೂಲ ವಿಚಾರವಾಗಿ ಇನ್ನೊಂದು ಮೀಟಿಂಗ್ ಮಾಡ್ತೇವೆ ಅಂದಿದ್ದಾರೆ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ತಿಂಗಳಲ್ಲಿ ಬಿಲ್ ಕೊಡಿಸುತ್ತೇವೆ ಎಂದು ಹೇಳಿದ್ದಾರೆ. ಆದಷ್ಟು ಬೇಗ ಕ್ಲೀಯರ್ ಮಾಡುವುದಾಗಿ ಹೇಳಿದ್ದಾರೆ. ಎಸ್​ಐಟಿ ತನಿಖೆಗೆ ನಾವು ಬೇಡ ಅಂದಿಲ್ಲ. ಸಮಸ್ಯೆ ಇರುವ ಬಿಲ್ ಇಟ್ಟುಕೊಳ್ಳಿ, ಬೇರೆ ಬಿಲ್ ಬಿಡುಗಡೆ ಮಾಡಿ. ಶೇ 75ರಷ್ಟು ಹಣ ಸಾಕಾಗಲ್ಲ ಎಂದು ಹೇಳಿದ್ದೇವೆ. ಕಮಿಷನರ್ ಕರೆದು ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ ಎಂದು ಕೆಂಪಣ್ಣ ಡಿಸಿಎಂ ಜೊತೆಗಿನ ಮಾತುಕತೆಯ ವಿವರವನ್ನು ನೀಡಿದರು.

ಇದನ್ನೂ ಓದಿ:ಐಟಿ ದಾಳಿಯಲ್ಲಿ ಸಿಕ್ಕಿರುವುದು ಬಿಜೆಪಿ ಹಣ, ಬಿಜೆಪಿ ಭ್ರಷ್ಟಾಚಾರದ ಹಿಮಾಲಯ: ಡಿ.ಕೆ.ಶಿವಕುಮಾರ್

ABOUT THE AUTHOR

...view details