ಕರ್ನಾಟಕ

karnataka

ETV Bharat / state

ಸುಧಾಕರ್ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ ನಾಲಾಯಕ್ ಮಂತ್ರಿ: ಡಿ.ಕೆ.ಸುರೇಶ್ - ಸುಧಾಕರ್ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ ನಾಲಾಯಕ್ ಮಂತ್ರಿ: ಸುರೇಶ್

ರಾಜ್ಯ ಸರ್ಕಾರ ಜನರ ದಾರಿ ತಪ್ಪಿಸೋ ಕೆಲಸ ಮಾಡ್ತಿದೆ. ಸುಧಾಕರ್ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ ನಾಲಾಯಕ್ ಮಂತ್ರಿ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

D_K_SURESH
ಸುರೇಶ್

By

Published : Dec 24, 2020, 7:45 PM IST

Updated : Dec 24, 2020, 8:11 PM IST

ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ಪ್ರತಿಪಕ್ಷಗಳ ಜೊತೆಗೆ ಯಾವ ಥರ ಸಹಕಾರ ಕೇಳಬೇಕು ಅನ್ನೋದೇ ಗೊತ್ತಿಲ್ಲ. ಏಕ ಚಕ್ರಾಧಿಪತ್ಯ ಆಡಳಿತ ನಡೆಸುತ್ತಿದ್ದಾರೆ ಇವರು ಎಂದು ಸಚಿವ ಸುಧಾಕರ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನಾವು ನೀಡಿದ್ದೇವೆ. ಇವರ ಹಗರಣಗಳನ್ನು ಎತ್ತಿರಲಿಲ್ಲ ಅಂದ್ರೆ ಇವರಿಗೆ ನಾವು ಒಳ್ಳೆಯವರು. ಹಗರಣ ವಿಚಾರ ತೆಗೆದರೆ ಇವರಿಗೆ ನಾವು ಒಳ್ಳೆಯವರಲ್ಲ. ಚರ್ಚೆಗೆ ಬರಲಿ ಬೇಕಿದ್ರೆ ಸಹಕಾರ ಕೊಟ್ಟಿದ್ದೀವಾ ಇಲ್ವಾ ಅಂತ. ಸರ್ವಪಕ್ಷ ಸಭೆ ಕರಿತಾರೆ, ಸಲಹೆ ಕೊಟ್ಟರೆ ಅದನ್ನು ಪಾಲನೆ ಮಾಡಲ್ಲ. ಬರೀ ಫೋಟೋಗೆ ಪೋಸ್ ಕೊಡೋಕೆ ಸಭೆ ಕರಿತಾರೆ. ಇವರ ಒಳ ರಾಜಕೀಯ ನೋಡ್ಕೊಂಡು ಕೂರಬೇಕಾ ಪ್ರತಿಪಕ್ಷಗಳು. ನೈತಿಕತೆಯೇ ಇಲ್ಲ ಬಿಜೆಪಿಯವರಿಗೆ. ಮಾನಸಿಕ ಅಸ್ತಿತ್ವ ಕಳೆದುಕೊಂಡಿದ್ದಾರೆ ಎಂದು‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಧಾಕರ್ ಯಾರು ಇವರು? ಅವರು ರಾಜರು, ನಾವು ಪ್ರಜೆಗಳು ಅನ್ನೋ ಥರ ಆಗಿದೆ. ಸುಧಾಕರ್​ಗೆ ಮೊದಲು ಶ್ರೀರಾಮುಲು ಜೊತೆ ಹೊಂದಾಣಿಕೆ ಇರಲಿಲ್ಲ, ಸಿಎಂ ಜೊತೆ ಹೊಂದಾಣಿಕೆ ಇರಲಿಲ್ಲ, ಉಸ್ತುವಾರಿ ಸಚಿವರ ಜೊತೆಗೆ ಹೊಂದಾಣಿಕೆ ಇರಲಿಲ್ಲ. ಆಮೇಲೆ ಖಾತೆ ಮರ್ಜ್ ಮಾಡಿಕೊಂಡು ಸುಮ್ನೆ ಕೂತಿದ್ದಾರೆ. ಮೋಜಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಏನು ನಿರ್ಧಾರ ತೆಗೆದುಕೊಳ್ತಾರೆ ಅವರಿಗೇ ಗೊತ್ತಿಲ್ಲ. ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯಲ್ಲ, ಜನರ ಬಗ್ಗೆಯೂ ಕಾಳಜಿ ಇಲ್ಲ. ಸರ್ಕಾರ, ಶಾಸಕರು ವ್ಯಾಪಾರಕ್ಕೆ ಕೂತಿದ್ದಾರೆ. ನಾವು ನೋಡ್ತಿದ್ದೇವೆ. ಇವರು ಮಾತ್ರ ರಾತ್ರಿ ಓಡಾಡಿ ರೂಢಿ ಎಂದು ಹರಿಹಾಯ್ದರು.

ನಾಲಾಯಕ್ ಮಂತ್ರಿ: ರಾಜ್ಯ ಸರ್ಕಾರ ದಿಢೀರ್ ನೈಟ್ ಕರ್ಫ್ಯೂ ಜಾರಿ ಮಾಡಿದೆ. ರಾತ್ರಿ ಎಷ್ಟು ಜನ ಓಡಾಡ್ತಾರೆ ಅನ್ನೋ ಲೆಕ್ಕ ಸರ್ಕಾರಕ್ಕೆ ಇದೆಯಾ ಇಲ್ವಾ ಗೊತ್ತಿಲ್ಲ. ಶೇ. 1ರಷ್ಟು ಜನ ಕೂಡ ರಾತ್ರಿ ಓಡಾಡಲ್ಲ. ಸರ್ಕಾರ ಯಾಕೆ ನೈಟ್ ಕರ್ಫ್ಯೂ ಜಾರಿ ಮಾಡಲು ಮುಂದಾಗಿತ್ತು ಅಂತ ಗೊತ್ತಿಲ್ಲ. ರಾಜ್ಯ ಸರ್ಕಾರ ಜನರ ದಾರಿ ತಪ್ಪಿಸೋ ಕೆಲಸ ಮಾಡ್ತಿದೆ. ಸುಧಾಕರ್ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ ನಾಲಾಯಕ್ ಮಂತ್ರಿ ಎಂದು ಆರೋಪಿಸಿದರು.

Last Updated : Dec 24, 2020, 8:11 PM IST

ABOUT THE AUTHOR

...view details