ಕರ್ನಾಟಕ

karnataka

ETV Bharat / state

ಸಚಿವ ಮುನಿರತ್ನ ಗೊಡ್ಡು ಬೆದರಿಕೆಗೆ ಹೆದರಲ್ಲ, ಜೈಲಿಗೆ ಹೋಗಲೂ ಸಿದ್ಧ: ಡಿ.ಕೆ.ಸುರೇಶ್ - ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗ ರೆಡ್ಡಿ

ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ತಂದುಕೊಟ್ಟಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ಡಿ ಕೆ ಸುರೇಶ್​ ಹಾಗೂ ಸಚಿವ ಮುನಿರತ್ನ
ಡಿ ಕೆ ಸುರೇಶ್​ ಹಾಗೂ ಸಚಿವ ಮುನಿರತ್ನ

By

Published : Aug 8, 2022, 8:18 PM IST

ಬೆಂಗಳೂರು:ಮುನಿರತ್ನ ಗೊಡ್ಡು ಬೆದರಿಕೆಗೆ ಹೆದರಲ್ಲ. ಜೈಲಿಗೆ ಹೋಗಲೂ ಸಿದ್ಧ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂದರ್ಭ ಕಾಂಗ್ರೆಸ್ ಗೂಂಡಾಗಳು ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ್ದಾರೆ ಎಂಬ ಮುನಿರತ್ನ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಚಿವರು ಬಹಳ ಇತಿಹಾಸ, ಹಿನ್ನೆಲೆ ಇರುವವರು. ಅದರ ಬಗ್ಗೆ ನಾನು ಮಾತಾಡಲ್ಲ. ಕೇಸ್ ದಾಖಲೆ ಮಾಡುವುದಾದರೆ ಸ್ವಾಗತ ಎಂದರು.

ಆರ್.ಆರ್.ನಗರದಲ್ಲಿ ಎಲ್ಲಾ ಪೊಲೀಸ್ ಸ್ಟೇಷನ್​ಗಳು ಅವರು ಹೇಳಿದಂಗೆ ಕೇಳ್ತವೆ. ಯಾವ ಯಾವ ಪ್ರಕರಣ, ಯಾರ ಯಾರ ಮೇಲೆ ಹಾಕಿಸಿದ್ದಾರೆ. ಕೇಸ್ ಹಾಕಿಸುವುದರಲ್ಲಿ ಎಕ್ಸ್​ಪರ್ಟ್​ ಸಚಿವರು. ಸಚಿವರು ಹಾಕಿಸಿದ್ರೆ ತೊಂದರೆ ಇಲ್ಲ. ನಾವು ಸಿದ್ದವಾಗಿದ್ದೇವೆ ಎದುರಿಸೋಕೆ. ಜೈಲಿಗೆ ಹೋಗಲು ಸಿದ್ದವಾಗಿದ್ದೇವೆ ಎಂದು ಹೇಳಿದರು.

ಸಂವಿಧಾನ ವಿರೋಧಿ, ಅಧಿಕಾರಿಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವ ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಮೀಸಲಾತಿ ಕೇಳುತ್ತಿದ್ದೇವೆ. ಅದಕ್ಕೆ ಕಾನೂನಿನ ಚೌಕಟ್ಟು ನಿಯಮಗಳನ್ನು ಪಾಲನೆ ಮಾಡಬೇಕು. 25-30 ವರ್ಷಗಳಿಂದ ಮೀಸಲಾತಿ ಪ್ರಕಟ ಆಗುತ್ತಿದೆ. ಅದಕ್ಕೆ ಗೈಡ್​ಲೈನ್​​ ಇದೆ. ಗೈಡ್​ಲೈನ್ ಗಾಳಿಗೆ ತೂರಿದ್ದಾರೆ. ಅಧಿಕಾರಿಗಳು ಬಿಜೆಪಿ ನಾಯಕರ ಕೈಗೊಂಬೆ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಪ್ರತಿಭಟನೆ ಮಾಡಬೇಕು. ಸಿಎಂ ಕೈಚಲ್ಲಿ ಕುಳಿತಿದ್ದಾರೆ. ಅಧಿಕಾರಿಗಳನ್ನು ಭೇಟಿ ಮಾಡೋಣ ಅಂದರೆ ಓಡಿ ಹೋಗ್ತಾರೆ. ನಾವೇನು ಮಾಡಬೇಕು, ಯಾರನ್ನು ಭೇಟಿ ಮಾಡಬೇಕು? ಅವರು ಅವರ ಮನಸ್ಥಿತಿ ತೋರಿಸಿದ್ದಾರೆ. ನ್ಯಾಯಾಲಯ ಹಾಗೂ ಜನತಾ ನ್ಯಾಯಾಲಯಕ್ಕೆ ಹೋಗಲು ನಾವು ಸಿದ್ದ ಎಂದರು.

ಇದನ್ನೂ ಓದಿ:ಮಳೆಯಿಂದ ಬೀದಿಗೆ ಬಿದ್ದ ಜನ.. ಶೀಘ್ರದಲ್ಲೇ ಮನೆ ಕಟ್ಟಿಸಿಕೊಡುವುದಾಗಿ ಸಚಿವ ಅಶ್ವತ್ಥ್​ ನಾರಾಯಣ್ ಅಭಯ ​

ABOUT THE AUTHOR

...view details