ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ಇಂದು ಬೆಂಗಳೂರಿನ ಸಿಬಿಐ ಅಧಿಕಾರಿಗಳ ಕಚೇರಿಯಲ್ಲಿ, ವಿಚಾರಣೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಜರಾಗಲಿದ್ದಾರೆ.
ಮಗಳು ಐಶ್ವರ್ಯ ನಿಶ್ಚಿತಾರ್ಥದ ದಿನ ಸಿಬಿಐ ನೋಟಿಸ್ ನೀಡಿ ನ.23 ರಂದು ಹಾಜರಾಗಲು ಸೂಚಿಸಿತ್ತು. ಆದರೆ ವಿಚಾರಣೆಗೆ ಹಾಜರಾಗಲು ಎರಡು ದಿನ ಟೈಂ ಕೇಳಿದ್ದ ಡಿಕೆಶಿ ಅದರಂತೆ 2 ದಿನ ವಕೀಲರ ಜೊತೆ ಚರ್ಚಿಸಿ ವಿಚಾರಣೆ ಎದುರಿಸಲು ತಯಾರಾಗಿದ್ದಾರೆ. ಇಂದು ಸಿಬಿಐ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಕೊಡಲು ಡಿಕೆಶಿ ಸಜ್ಜಾಗಿದ್ದಾರೆ.
ಅಕ್ಟೋಬರ್ 5 ರಂದು ಡಿ ಕೆ ಶಿವಕುಮಾರ್ ಮನೆ ಮೇಲೆ ದಾಳಿ ಮಾಡಿದ್ದ ಸಿಬಿಐ ಅಧಿಕಾರಿಗಳು, ಕೆಲವೊಂದು ದಾಖಲೆಗಳ ಜಪ್ತಿ ಮಾಡಿದ್ದರು. ತದ ನಂತರ 2013 ರ ಏಪ್ರಿಲ್ ನಿಂದ 2018 ರ ಏಪ್ರಿಲ್ ವರೆಗಿನ 74.93 ಕೋಟಿ ರೂ.ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಮತ್ತು ಇಂಧನ ಸಚಿವರಾಗಿದ್ದ ವೇಳೆ ಅಕ್ರಮ ಆಸ್ತಿ ಗಳಿಕೆ ಆರೋಪ ಡಿಕೆಶಿ ಮೇಲಿದೆ.
ಓದಿ: ಅಹ್ಮದ್ ಪಟೇಲ್ ನಿಧನ: ಪ್ರಧಾನಿ ಮೋದಿ, ಸೋನಿಯಾ ಸೇರಿ ರಾಜಕೀಯ ನಾಯಕರಿಂದ ಸಂತಾಪ
ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು ಸಿಬಿಐ ಡಿ ಕೆ ಸಹೋದರರ ಮನೆ ಸೇರಿದಂತೆ ಒಟ್ಟು 14 ಕಡೆ ದಾಳಿ ಮಾಡಿತ್ತು. ದಾಳಿ ವೇಳೆ 57 ಲಕ್ಷ ರೂಪಾಯಿ ನಗದು ಹಾಗೂ ದಾಖಲೆಗಳ ವಶಪಡಿಸಿಕೊಂಡು ಸಿಬಿಐ ದಾಖಲೆಗಳ ಪರಿಶೀಲನೆ ನಂತರ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದು, ಇಂದು ಸಿಬಿಐ ಪ್ರಶ್ನೆಗಳ ಪಟ್ಟಿ ತಯಾರಿಸಿಕೊಂಡಿದ್ದು ಇಂದು ವಿಚಾರಣೆ ನಡೆಸಲಿದ್ದಾರೆ.