ಬೆಂಗಳೂರು : ಹಿರಿಯ ಪತ್ರಕರ್ತ ನಾಗರಾಜ್ ದೀಕ್ಷಿತ್ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಕನ್ನಡ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳೆರಡರಲ್ಲೂ ನುರಿತ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ದೀಕ್ಷಿತ್ ಅವರೊಬ್ಬ ಸ್ನೇಹಜೀವಿ. ಮಾನವೀಯ ಮೌಲ್ಯಗಳಿಗೆ ತುಡಿಯುತ್ತಿದ್ದವರು. ಜನವಾಹಿನಿ ದಿನಪತ್ರಿಕೆ, ಜನಶ್ರೀ ಹಾಗೂ ಟಿವಿ9 ನ್ಯೂಸ್ ಚಾನೆಲ್‌ಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರದ್ದು ಬಹುಮುಖ ಪ್ರತಿಭೆ.