ಬೆಂಗಳೂರು:ಕೆಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧ ಏನು ನಿರ್ಧಾರ ಆಗಲಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ನೋಡೋಣ ಏನಾಗಲಿದೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಅದರ ಬಗ್ಗೆ ಏನೂ ಗೊತ್ತಿಲ್ಲ. ಕೆಪಿಸಿಸಿ ಎಲ್ಲೂ ಕುಸಿದು ಬಿದ್ದಿಲ್ಲ. ನಾಡಿದ್ದು ಮಾರ್ಚ್ ಇದೆ. ಎಲ್ಲರೂ ಫ್ಲಾಗ್ ಹಿಡಿದು ಹೋಗ್ತೇವೆ. ಹೊಸಬರ, ಹಳೇ ಅಧ್ಯಕ್ಷರಾ ಗೊತ್ತಿಲ್ಲ. ದಿನೇಶ್ ಗುಂಡೂರಾವ್ ನೇತೃತ್ವದಲ್ಲೇ ಕಾರ್ಯಕ್ರಮ ನಡೆಯುತ್ತೆ ಎಂದರು. ಅಲ್ಲದೇ ದಿನೇಶ್ ಗುಂಡೂರಾವ್ ಕೆಪಿಸಿಸಿಗೆ ತಲೆಹಾಕಿಲ್ಲ ಎಂಬ ವಿಚಾರ ಮಾತನಾಡಿ, ಅದರ ಬಗ್ಗೆ ಅವರನ್ನೇ ನೀವು ಕೇಳಿ. ನಾನೂ ಏನನ್ನೂ ಹೇಳಲ್ಲ ಎಂದರು.
ಗೋಲಿಬಾರ್ಗೆ ಮೃತರಾದವರ ಪರಿಹಾರ ವಿತರಣೆ ತಡೆ ವಿಚಾರ ಮಾತನಾಡಿ, ಸರ್ಕಾರ ಪರಿಹಾರ ಘೋಷಿಸಿತ್ತು. ಈಗ ಅವರೇ ವಾಪಸ್ ಪಡೆದಿದ್ದಾರೆ. ಬಿಜೆಪಿ ಸರ್ಕಾರದ ನೀತಿ ನೀವೆ ನೋಡಿ. ಅವರು ಆರೋಪಿನೋ, ಯಾರೋ ಅನ್ನೋದು ತನಿಖೆಯಾಗಬೇಕು. ಕೋರ್ಟ್ ಇದರ ಬಗ್ಗೆ ತೀರ್ಪು ನೀಡಬೇಕು. ಅದಕ್ಕೂ ಮುನ್ನವೇ ಅವರೇ ಆರೋಪಿ ಅಂತ ಗುರುತಿಸಿದ್ದಾರೆ. ಹೀಗಾಗಿ ಕೊಟ್ಟ ಚೆಕ್ ತಡೆ ನೀಡಿದ್ದಾರೆ. ದೆಹಲಿಯಿಂದ ಯಡಿಯೂರಪ್ಪನವರಿಗೆ ಫೋನ್ ಬಂದಿದೆ. ಫೋನ್ ಬರ್ತಿದ್ದಂತೆ ಅವರು ಚೆಕ್ ತಡೆಹಿಡಿದಿದ್ದಾರೆ. ಅದಕ್ಕೆ ತರಾತುರಿಯಲ್ಲಿ ಯಡಿಯೂರಪ್ಪ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ರಾಜ್ಯದ ಜನರಿಗೆ ತಿಳಿಸಬೇಕು ಎಂದರು.
ಕಾಂಗ್ರೆಸ್ನಲ್ಲಿ ಟೋಪಿ 5 ನಿಮಿಷಕ್ಕೆ ಚೇಂಜ್ ಆಗುತ್ತೆ. ಬ್ಲಾಕ್ ಮೇಲ್ ನಡೆಯಲ್ಲ. ಯಾರಾದ್ರೂ ಬ್ಲಾಕ್ ಮೇಲ್ ಮಾಡ್ತಾರೆ ಅಂದ್ರೆ ಆಗಲ್ಲ. ಅಂತಹ ಮೂರ್ಖರು ಸಿಗಲ್ಲ. ನಾನು ಹೇಳಿದಂತೆಯೇ ನಡೆಯಬೇಕು ಅಂದ್ರೆ ಆಗಲ್ಲ. ನನ್ನದೂ ನಡೆಯಲಿಲ್ಲ, ಯಾರದ್ದೂ ನಡೆಯಲ್ಲ. ಶಿಸ್ತಿನ ಸಿಪಾಯಿ ಆಗಿದ್ದರೆ ಮಾತ್ರ ಗೌರವ ಸಿಗುತ್ತೆ. ಕಂಡೀಷನ್ ಗಿಂಡೀಷನ್ ಏನೂ ನಡೆಯಲ್ಲ ಎಂದು ಹೇಳಿದರು.