ಕರ್ನಾಟಕ

karnataka

ETV Bharat / state

ದೇವೇಗೌಡರ ನಿವಾಸಕ್ಕೆ ಭೇಟಿ: ಜನ್ಮದಿನಕ್ಕೆ ಶುಭ ಕೋರಿದ ಡಿಕೆಶಿ - ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಇಂದು ಮನೆಯಲ್ಲೇ ತಮ್ಮ 88ನೇ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.

D K Shivakumar wishes Devegowda birthday
ಗೌಡರ ಜನ್ಮದಿನಕ್ಕೆ ಶುಭ ಕೋರಿದ ಡಿ.ಕೆ.ಶಿವಕುಮಾರ್

By

Published : May 18, 2020, 4:14 PM IST

ಬೆಂಗಳೂರು:ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿ ಹುಟ್ಟುಹಬ್ಬಕ್ಕೆ ಶುಭ ಕೋರಿ, ಕುಶಲೋಪರಿ ವಿಚಾರಿಸಿದರು.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಇಂದು ಮನೆಯಲ್ಲೇ ತಮ್ಮ 88ನೇ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.

ಡಿಕೆಶಿ ಹಾಗೂ ದೇವೇಗೌಡ

ಕೊರೊನಾ ಸೋಂಕು ಹಿನ್ನೆಲೆ ಮನೆ ಬಳಿ ಗುಂಪು ಸೇರುವುದು ಬೇಡ. ತಾವಿರುವಲ್ಲಿಂದಲೇ ಶುಭಾಶಯ ಕೋರುವಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಇಂದು ಗೌಡರ ಜನ್ಮದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರು ರಕ್ತದಾನ ಶಿಬಿರ ಏರ್ಪಡಿಸಿದ್ದರು.

For All Latest Updates

ABOUT THE AUTHOR

...view details