ಬೆಂಗಳೂರು :ನನ್ನ ಕೈಯಲ್ಲಿ ಇಡಿ ಇದೆ ಎಂದಿದ್ದು ಬಹಳ ಸಂತೋಷ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ಟಾಂಗ್ ನೀಡಿದ್ದಾರೆ.
ಆನಂದ್ ರಾವ್ ವೃತ್ತದ ಬಳಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರೇ ಇಡಿ ದಾಳಿ ಮಾಡಿಸಿದ್ದಾರೆ ಎಂಬ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಬಹಳ ಸಂತೋಷ, ನನ್ನ ಕೈಯಲ್ಲಿ ಇಡಿ ಇದೆ ಅಂತಾ ಹೇಳಿದ್ದಾರೆ. ನಮ್ಮ ಸೋಮಶೇಖರ್ ಹೇಳಿರೋದಾ?. ಅವರಿಗೆ ಒಳ್ಳೆಯದಾಗಲಿ. ಅವರು ಈಗ ಸಚಿವರಾಗಿದ್ದಾರೆ. ನನ್ನ ಹಳೆಯ ಸ್ನೇಹಿತರು ಎಂದರು.
ನಮ್ಮ ಶಾಸಕರು ನಮ್ಮ ಸ್ವಂತ ಆಸ್ತಿ ವಿಚಾರಕ್ಕೆ ಇಡಿ ಅಧಿಕಾರಿಗಳು ಬಂದಿದ್ದಾರೆ ಅಂತಾ ಹೇಳಿದ್ದಾರೆ. ಇದು ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ಅಲ್ಲ. ಐಎಂಎಗೂ ನಮಗೂ ಸಂಬಂಧ ಇಲ್ಲ ಅಂತಾ ಹೇಳಿದ್ದಾರೆ. ಮನೆ ವಿಚಾರವಾದ್ರೆ ಇಡಿ ಮಾಡಿರೋದು ನನಗೆ ನಂಬಿಕೆ ಬರುತ್ತಿಲ್ಲ. ಅದನ್ನು ಐಟಿ ಅವರು ಮಾಡಬೇಕು. ಮನಿ ಲಾಂಡ್ರಿಂಗ್ ಮಾಡಿರೋದಾದ್ರೆ ಇಡಿ ಮಾಡಬೇಕು.