ಕರ್ನಾಟಕ

karnataka

ETV Bharat / state

ರೈತರು ಕರೆ ನೀಡಿರುವ ಬಂದ್​ಗೆ ಕಾಂಗ್ರೆಸ್ ಬೆಂಬಲ: ಡಿಕೆಶಿ

ಗೋಹತ್ಯೆ ನಿಷೇಧ ಕಾನೂನಿನ ಜತೆ ಹಲವು ಬಿಲ್ ತರಲು ಸರ್ಕಾರ ಹೊರಟಿದೆ. ಇದರ ಬಗ್ಗೆ ಚರ್ಚೆ ‌ಮಾಡಿದ್ದೇವೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಅಗತ್ಯವಿಲ್ಲ. ನಾವು ಸರ್ಕಾರದ ವಿರುದ್ಧದ ಹೋರಾಟಕ್ಕೆ ರೂಪುರೇಷೆ ಹೆಣೆಯುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

D K Shivakumar
ಡಿಕೆಶಿ

By

Published : Dec 7, 2020, 3:27 PM IST

ಬೆಂಗಳೂರು: ನಾಳೆ ರೈತರು ಕರೆ ನೀಡಿರುವ ಬಂದ್​ಗೆ ಕಾಂಗ್ರೆಸ್ ಬೆಂಬಲ ಸೂಚಿಸಲಿದೆ. ಬಂದ್ ಯಶಸ್ವಿಗೊಳಿಸುವಂತೆ ಜಿಲ್ಲೆ, ತಾಲೂಕು ಬ್ಲಾಕ್ ಮಟ್ಟದ ನಾಯಕರಿಗೆ ಸೂಚಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದ್ಯ ಹೋರಾಟ ಬೆಂಬಲಿಸಿದ್ದೇವೆ. ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ ಇರಲಿದೆ. ನಾವು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುವಂತೆ ಹಾಗೂ ಎಲ್ಲಿಯೂ ಅಹಿತಕರ ಘಟನೆ ನಡೆಯಲು ಅವಕಾಶ ನೀಡಬೇಡಿ ಎಂದು ಸೂಚಿಸಿದ್ದೇವೆ. ರೈತರ ಪ್ರತಿಭಟನೆ ಯಶಸ್ವಿಗೊಳಿಸುತ್ತೇವೆ ಎಂದರು.

ಓದಿ:ನಾಳೆ ಭಾರತ್​ ಬಂದ್ ಹಿನ್ನೆಲೆ​: ಕನ್ನಡಪರ ಸಂಘಟನೆಗಳಿಂದ ಬೆಂಬಲ

ಗೋ ಹತ್ಯೆ ನಿಷೇಧ ಕಾನೂನಿನ ಜತೆ ಹಲವು ಬಿಲ್ ತರಲು ಸರ್ಕಾರ ಹೊರಟಿದೆ. ಇದರ ಬಗ್ಗೆ ಚರ್ಚೆ ‌ಮಾಡಿದ್ದೇವೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಅಗತ್ಯವಿಲ್ಲ. ನಾವು ಸರ್ಕಾರದ ವಿರುದ್ಧದ ಹೋರಾಟಕ್ಕೆ ರೂಪುರೇಷೆ ಹೆಣೆಯುತ್ತಿದ್ದೇವೆ ಎಂದು ವಿವರಿಸಿದರು.

ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಯಾರೋ ತಲೆ ಕೆಟ್ಟವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಕ್ರಾಸ್ ಬ್ರೀಡ್ ಸಂಬಂಧ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಅವರೇ ಪ್ರತಿಕ್ರಿಯೆ ನೀಡುತ್ತಾರೆ ಎಂದರು.

2.8 ಕೋಟಿ ಮಂದಿ ರೈತರ ಸಹಿ ಸಂಗ್ರಹ ಮಾಡಿದ್ದೇವೆ. ಇದನ್ನು ನಮ್ಮ ಎಐಸಿಸಿ ವರಿಷ್ಠರಿಗೆ ಕಳುಹಿಸಿ ಕೊಡುತ್ತೇವೆ. ಅಲ್ಲಿಂದ ಪಕ್ಷದ ವರಿಷ್ಠರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ರೈತರ ಸಹಿ ಸಂಗ್ರಹದ ದಾಖಲೆ ತಲುಪಿಸಲಿದ್ದಾರೆ. ರೈತರ ಹೋರಾಟ ಬೆಂಬಲಿಸಿ ಸಹಿ ಸಂಗ್ರಹ ಮಾಡಿದ್ದೇವೆ. ಅದನ್ನು ಕೊರಿಯರ್ ಮೂಲಕ ಕಳುಹಿಸುತ್ತಿದ್ದೇವೆ. ಕಾರ್ಮಿಕ ಕಾನೂನು, ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಕಾನೂನಿನ ವಿರುದ್ಧ ದನಿ ಎತ್ತಬೇಕಿದೆ. ನಾವು ಸದಾ ರೈತರ ಬೆಂಬಲಕ್ಕೆ ಇರುತ್ತೇವೆ ಎಂದರು.

9ರಂದು ಜೀವಿಜಯ ಸೇರ್ಪಡೆ

ಡಿ. 9ರಂದು ಸೋಮವಾರಪೇಟೆ ಭಾಗದ ಜೆಡಿಎಸ್ ನಾಯಕ ಹಾಗೂ ಮಾಜಿ ಸಚಿವ ಜೀವಿಜಯ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಇವರು ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಪಕ್ಷ ಬಲವರ್ಧನೆಗೆ ಇವರ ಕೊಡುಗೆ ಲಭಿಸಲಿದೆ. ಇಂದು ದೇವನಹಳ್ಳಿ ಭಾಗದ ನಾಯಕ ಬಿ.ರಾಜಣ್ಣ ಸೇರ್ಪಡೆ ಆಗಿದ್ದಾರೆ ಎಂದರು.

ABOUT THE AUTHOR

...view details