ಬೆಂಗಳೂರು: ಮತದಾರರ ಮಾಹಿತಿ ಕಳ್ಳತನ, ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್ ಮಾಡಲು ಬಿಜೆಪಿ ಸರ್ಕಾರ ಕುಕ್ಕರ್ ಬ್ಲಾಸ್ಟ್ ಮಾಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪ ಮಾಡಿದರು. ಪ್ರೆಸ್ಕ್ಲಬ್ನಲ್ಲಿ ಮಾಧ್ಯಮ ಸಂವಾದದ ವೇಳೆ ಮಾತನಾಡುತ್ತಾ, ಭಯೋತ್ಪಾದಕ ಎಲ್ಲಿಂದ ಬಂದ?. ಡಿಜಿ ಸ್ಫೋಟದ ಬಗ್ಗೆ ಕೂಡಲೇ ಟ್ವೀಟ್ ಮಾಡುತ್ತಾರೆ. ಬಿಜೆಪಿ ಸರ್ಕಾರ ಜನರ ದಿಕ್ಕು ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ ಎಂದರು.
ಆಪರೇಷನ್ ಕಮಲಕ್ಕೆ ಒಳಗಾದ ಶಾಸಕರು ಮರಳಿ ಕಾಂಗ್ರೆಸ್ ಸೇರ್ತಾರಾ ಎಂಬ ಪ್ರಶ್ನೆಗೆ ಡಿಕೆಶಿ ಆಶ್ಚರ್ಯಕರ ಹೇಳಿಕೆ ಕೊಟ್ಟರು. ಸಂಕ್ರಾಂತಿ ಬಳಿಕ ಎಲ್ಲಾ ಗೊತ್ತಾಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದ ಅವರು, ಗುಟ್ಟು ಗುಟ್ಟಾಗಿಯೇ ಇರುತ್ತದೆ ಎಂದು ತಿಳಿಸಿದರು. ಆ ಮೂಲಕ ಮರಳಿ ಆಪರೇಷನ್ ಆಗುತ್ತೆ ಎಂಬ ಚರ್ಚೆಗೆ ಪುಷ್ಟಿ ನೀಡುವ ಹೇಳಿಕೆ ಕೊಟ್ಟರು.
ಸಂವಿಧಾನ ಬಿಟ್ಟು ನಾವು ಯಾರೂ ಬದುಕಲು ಸಾಧ್ಯವಿಲ್ಲ. ನಾವು ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಬಿಜೆಪಿ ಭಾವನೆ ಮೇಲೆ ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.