ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಲ್ಲಿ ನಾಯಕರ ನಡುವೆ ಯಾವುದೇ ಗಲಾಟೆ ಆಗಿಲ್ಲ: ಡಿ. ಕೆ ಶಿವಕುಮಾರ್ ಸ್ಪಷ್ಟನೆ - ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಸಿಎಂ ಮನೆ ಮುಂದೆ ಪ್ರತಿಭಟನೆ ವಿಚಾರ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​, ನಾನು ಸಿಎಂಗೆ ಪತ್ರ ಬರೆದಿದ್ದೆ. ಇಂದು ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯವರು ಕೋವಿಡ್​ ನಿಯಮ ಉಲ್ಲಂಘಿಸಿದ್ದರೆ ಕ್ರಮ ತೆಗೆದುಕೊಳ್ತೀವಿ‌ ಅಂತ ಹೇಳಿದ್ದಾರೆ. ಅವರ ಮೇಲೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಬರೀ ನಮ್ಮ ಮೇಲೆ ಕೇಸ್ ಹಾಕಿದ್ದಾರೆ ಎಂದರು.

d-k-shivakumar
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್

By

Published : Jan 20, 2022, 6:46 PM IST

Updated : Jan 20, 2022, 7:03 PM IST

ಬೆಂಗಳೂರು:ಯೂತ್ ಕಾಂಗ್ರೆಸ್ ಸದಸ್ಯರ ನಡುವೆ ಯಾವುದೇ ಗಲಾಟೆ ಆಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.

ಹೈದರಾಬಾದ್​ನಿಂದ ವಾಪಸಾದ ಬಳಿಕ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ನಾನೇ ಅವರ ಜತೆ ಮಾತನಾಡಿದ್ದೇನೆ. ಯಾವುದೇ ಗಲಾಟೆ ಆಗಿಲ್ಲ ಎಂದು ಹೇಳಿದರು.

ನಲಪಾಡ್ ಇಲ್ಲ, ಏನೂ ಇಲ್ಲ. ನ್ಯೂಸ್ ಬೇಕು ಅಂದಾಗ ಕೆಲವರು ಕ್ರಿಯೇಟ್ ಮಾಡಿದ್ದಾರೆ. ಅವರ ವೈಯಕ್ತಿಕ ಪಾರ್ಟಿ ವಿಚಾರಗಳಿಗೆ ಕೆಪಿಸಿಸಿ ಅಧ್ಯಕ್ಷನಾಗಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಪರ್ಸನಲ್ ಲೈಫ್​ ಅದು. ಯಾರೇ ಪಕ್ಷದಲ್ಲಿ ಶಿಸ್ತು ಮೀರಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮಾತನಾಡಿದರು

ಸಿಎಂ ಮನೆ ಮುಂದೆ ಪ್ರತಿಭಟನೆ ವಿಚಾರ ಮಾತನಾಡಿ, ನಾನು ಸಿಎಸ್​ಗೆ ಪತ್ರ ಬರೆದಿದ್ದೆ. ಇಂದು ಸಿಎಂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಮ ತೆಗೆದುಕೊಳ್ತೀವಿ‌ ಅಂತ ಹೇಳಿದ್ದಾರೆ. ಅವರ ಮೇಲೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಬರೀ ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಅವರ ಮೇಲೆ ಯಾಕೆ ಕೇಸ್ ಇಲ್ಲ. ನಾವು ಸುಮ್ಮನೇ ಕೂರಲ್ಲ. ಸಿದ್ದರಾಮಯ್ಯ ಜೊತೆ ಫೋನ್​ನಲ್ಲಿ ಮಾತನಾಡಿದ್ದೇನೆ ಎಂದರು.

ನೋಡೋಣ, ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳಿ ಅಂತ ಹೇಳಿದ್ದೇವೆ. ಎಲ್ಲೆಲ್ಲಿ ಕೋವಿಡ್ ನಿಯಮಗಳು ಉಲ್ಲಂಘನೆಯಾಗಿದೆಯೋ ಅಲ್ಲಿ ಕ್ರಮ ತೆಗೆದುಕೊಳ್ಳಬೇಕು. ಡೆಪ್ಯೂಟಿ ಕಮಿಷನರ್ ಹಾಗು ಎಸ್‌ಪಿ ಮೇಲೆ ಕ್ರಮ ತೆಗೆದುಕೊಳ್ಳಲಿ. ಬಿಜೆಪಿಯ ಯಾವುದೇ ನಾಯಕರ ಮೇಲೆ ಕೇಸ್ ಹಾಕಿಲ್ಲ‌. ಯಾರೋ ಒಬ್ಬರ ಮೇಲೆ ಹಾಕಿದ್ದಾರೆ ಅಷ್ಟೇ. ಎಲ್ಲಾ ಆಫೀಸರ್ಸ್ ವಿರುದ್ಧ ಹೋರಾಟ ಮಾಡ್ತೀವಿ ಎಂದು ಹೇಳಿದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸರ್ಕಾರದವರು ಜನರ ಪ್ರಾಣ ತೆಗೆಯುತ್ತಿದ್ದಾರೆ. ಬದುಕಿದ್ದವರನ್ನ ಸಾಯಿಸ್ತಾ ಇದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಲಂಡನ್​ನಲ್ಲಿ ಯಾವ ಲಾಕ್​ಡೌನ್​ ಕರ್ಫ್ಯೂ ಇಲ್ಲ. ನಿನ್ನೆ ಹೈದರಾಬಾದ್​ಗೆ ಹೋಗಿದ್ದೆ. ಅಲ್ಲೂ ಏನೂ ಇಲ್ಲ‌. ಇರೋದು ಎರಡು ದಿನ ಜೀವನ. ಎಲ್ಲರ ಜೀವನ ತೊಂದರೆಯಲ್ಲಿದೆ. ಯಾರೋ ಬಡ್ಡಿಗೆ ತಂದಿರ್ತಾರೆ. ಇವರು ಬಡ್ಡಿ ಕಟ್ತಾರಾ ಅಂತ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಈಗ ಡಿಸಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಡಿಸಿಗಳು ಮತ್ತು ಎಸ್​ಪಿಗಳು ಕ್ರಮ ಕೈಗೊಳ್ಳಬೇಕು. ಯಾರು ಉಲ್ಲಂಘನೆ ಮಾಡಿದ್ದರೋ ಅವರ ಮೇಲೆ ದೂರು ದಾಖಲಾಗಬೇಕು. ನಮ್ಮ ಮೇಲೆ ದೂರು ದಾಖಲಿಸಿದ್ದಾರೆ. ಬಿಜೆಪಿ ಶಾಸಕರು ಮತ್ತು ಮುಖಂಡರ ವಿರುದ್ಧ ದೂರು ದಾಖಲಾಗದಿದ್ರೆ ಪ್ರತಿಭಟನೆ ಮಾಡ್ತೀವಿ. ಇದು ಸರ್ಕಾರಕ್ಕೆ ಹೇಳ್ತಿರುವ ಮಾಹಿತಿ. ಸರ್ಕಾರ ಕ್ರಮ ಜರುಗಿಸುತ್ತಿಲ್ಲ ಅಂದ್ರೆ ನಾವು ಪ್ರತಿಭಟನೆ ಮಾಡ್ತೀವಿ. ಬಿಟ್ಟು ಹೋದ ಶಾಸಕರು ಡಿ. ಕೆ ಶಿವಕುಮಾರ್ ಸಂಪರ್ಕ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅವೆಲ್ಲವನ್ನೂ ನಿಮ್ಮ ಮುಂದೆ ಹೇಳಕ್ಕೆ ಆಗಲ್ಲ ಎಂದರು.

ಓದಿ:2021-22ನೇ ಸಾಲಿನ SSLC ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

Last Updated : Jan 20, 2022, 7:03 PM IST

For All Latest Updates

TAGGED:

ABOUT THE AUTHOR

...view details