ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 40% ಭ್ರಷ್ಟಾಚಾರ ತಾಂಡವ ಆಡುತ್ತಿದೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ - Paresh Mesta murder probe

ರಾಜ್ಯದಲ್ಲಿ ಮುಖ್ಯಮಂತ್ರಿ ಕಾರ್ಯಾಲಯವು ಮಾಧ್ಯಮ ಪ್ರತಿನಿಧಿಗಳಿಗೆ ಹಣದ ಆಮಿಷವೊಡ್ಡುವ ಕಾರ್ಯ ಮಾಡಿದೆ. ಆದರೆ ಪತ್ರಕರ್ತರು ಹಣವನ್ನು ಪಡೆಯದೆ ಮಾಧ್ಯಮ ಧರ್ಮ ಕಾಪಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​

By

Published : Oct 30, 2022, 6:19 PM IST

Updated : Oct 30, 2022, 7:59 PM IST

ಬೆಂಗಳೂರು: ರಾಜ್ಯದಲ್ಲಿ 40% ಭ್ರಷ್ಟಾಚಾರ ತಾಂಡವ ಆಡುತ್ತಿದೆ. ದಿನೇ ದಿನೆ ಸಾಕ್ಷಿಗಳು ಹೊರಬರುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ಮಾತನಾಡಿದರು

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ಒಂದಲ್ಲ ಒಂದು ವಿಚಾರ ಬಹಿರಂಗವಾಗುತ್ತಿವೆ. ನೊಂದ ಜನರು, ಶಾಸಕರು, ಸಚಿವರು, ಬಿಜೆಪಿ ಕಾರ್ಯಕರ್ತರು ಬಾಯಿ ಬಿಡುತ್ತಿದ್ದಾರೆ. ಇನ್ಸ್​ಪೆಕ್ಟರ್​​ ನಂದೀಶ್ ಹೃದಯಾಘಾತದಿಂದ ಸತ್ರು. ಇದು ಹೃದಯಾಘಾತ ಅಲ್ಲ, ಸರ್ಕಾರ ಮಾಡಿದ ಕೊಲೆ ಎಂದು ಆರೋಪಿಸಿದರು. ಅಲ್ಲದೆ, ಈ ವಿಷಯವನ್ನು ಸಚಿವ ಎಂಟಿಬಿ ನಾಗರಾಜ್ ಕೂಡ ಹೇಳಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ಮಾತನಾಡಿದರು

70-80 ಲಕ್ಷ ಕೊಟ್ಟು ವರ್ಗಾವಣೆ ಆಗ್ತಾರೆ. ಅದನ್ನು ಎಲ್ಲಿಂದ ಹೊಂದಿಸಬೇಕು ಅಂತ ಸಚಿವರು ಹೇಳಿದ್ದಾರೆ. ಇಂತಹ ಅನೇಕ ಸಾಕ್ಷಿಗಳು ಹೊರಗೆ ಬರುತ್ತಿವೆ. ಬಸವರಾಜ್ ಅಮರಗೋಳ ಎಂಬುವರು ಈ ಕುರಿತು ಪತ್ರ ಬರೆದಿದ್ದಾರೆ. 30% ಕಮಿಷನ್ ಗೆ ಬೇಡಿಕೆ ಇಟ್ಟಿದ್ದಾರೆ ಅಂತ ಪತ್ರ ಬರೆದಿದ್ದಾರೆ. ಈ ಭ್ರಷ್ಟಾಚಾರ ಹಣ ಯಾರಿಗೆ ತಲುಪಿತು. ಅದು ಹೊರಗೆ ಬರಬೇಕು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ಮಾತನಾಡಿದರು

ಸಚಿವರೇ ನೋವು ಹೇಳಿಕೊಂಡ್ರು, ಯಾರು‌ ಕೂಡ ಅಲ್ಲ ಅನ್ನುತ್ತಿಲ್ಲ. ಸಿಎಂ, ಗೃಹ ಸಚಿವ ಇಲ್ಲ ಎಂಟಿಬಿ ಯಾರಾದರೂ ಜವಾಬ್ದಾರಿ ಹೊರಬೇಕು. ಮೂವರಲ್ಲಿ ಒಬ್ಬರು ರಾಜೀನಾಮೆ ನೀಡಬೇಕು ಎಂದು ಹೇಳಿದರು.

ತೆಲಂಗಾಣದಲ್ಲೂ ಶಾಸಕರ ಖರೀದಿಗೆ ಮುಂದಾಗಿದ್ದಾರೆ. 100 ಕೋಟಿ ಆಮಿಷ ತೋರಿಸಿ ಶಾಸಕರ ಖರೀದಿಗೆ ಬಿಜೆಪಿ ಮುಂದಾಗಿದ್ದಾರೆ. ಕರ್ನಾಟಕವೇ ಇದಕ್ಕೆಲ್ಲ ಮೂಲ. ಈ ಅಕ್ರಮದ ನ್ಯಾಯಾಂಗ ತನಿಖೆ ಆಗಲಿ ಎಂದು ಒತ್ತಾಯಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿದರು

ರಾಜ್ಯದಲ್ಲಿ ಮುಖ್ಯಮಂತ್ರಿ ಕಾರ್ಯಾಲಯವು ಮಾಧ್ಯಮ ಪ್ರತಿನಿಧಿಗಳಿಗೆ ಹಣದ ಆಮಿಷವೊಡ್ಡುವ ಕಾರ್ಯ ಮಾಡಿದೆ. ಆದರೆ ಪತ್ರಕರ್ತರು ಹಣವನ್ನು ಪಡೆಯದೆ ಮಾಧ್ಯಮ ಧರ್ಮ ಕಾಪಾಡಿದ್ದಾರೆ. ಇಂತಹ ಪತ್ರಕರ್ತರನ್ನು ಅಭಿನಂದಿಸುತ್ತೇನೆ. ಸರ್ಕಾರ ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಮಾಧ್ಯಮವನ್ನು ಖರೀದಿಸುವ ಪ್ರಯತ್ನ ನಡೆಸಿದೆ. ಇದು ಅಕ್ಷಮ್ಯ. ಇಂತಹ ಪ್ರಯತ್ನಕ್ಕೆ ಸರ್ಕಾರ ಮುಂದಾಗಬಾರದು ಎಂದು ಎಚ್ಚರಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸರ್ಕಾರ ಒಂದು ಪ್ರತ್ಯೇಕ ಸಮಿತಿಯನ್ನು ರಚಿಸಿ ಈಗಿನ ಹಾಗೂ ಹಿಂದಿನ ಸರ್ಕಾರಗಳಲ್ಲಿ ನಡೆದಿರುವ ಅಕ್ರಮಗಳ ತನಿಖೆ ಮಾಡಿಸಲಿ. ನಾವು ಅವರ ಮೇಲೆ ಅವರು ನಮ್ಮ ಮೇಲೆ ಆರೋಪ ಪ್ರತ್ಯಾರೋಪ ಮಾಡುವುದು ನಡೆದೇ ಇದೆ. ಸತ್ಯಾಸತ್ಯತೆಯ ದರ್ಶನ ಜನರಿಗೆ ಆಗಲಿ. ಈ ಫೋಟೋ ಸರ್ಕಾರದಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿದರು

ಪೊಲೀಸ್​ ನೇಮಕ ಕಾರ್ಯದಲ್ಲಿ ಅಕ್ರಮ ಆಗಿಲ್ಲವೇ? 40 ಪರ್ಸೆಂಟ್ ಗ್ರಾಮ ನಡೆದಿದೆ ಎಂದು ಆರೋಪಿಸಿದ್ದ ಸಂತೋಷ ಆತ್ಮಹತ್ಯೆ ಹಿಂದೆ ಯಾರ ಕೈವಾಡ ಇದೆ? ತಮ್ಮ ಸಾವಿಗೆ ಈಶ್ವರಪ್ಪ ಕಾರಣ ಎಂದು ನೇರವಾಗಿ ಹೇಳಿದ್ದರು. ಅದಕ್ಕಾಗಿ ರಾಜೀನಾಮೆಯನ್ನು ಸಹ ಸಲ್ಲಿಸಬೇಕಾಗಿ ಬಂತು. ಪೂರಕ ಸಾಕ್ಷಿಗಳು ಇಲ್ಲ ಎಂದು ಬಿ ರಿಪೋರ್ಟ್​ ನೀಡಿ ಪ್ರಕರಣವನ್ನು ಖಲಾಸೆಗೊಳಿಸಲಾಗಿದೆ. ಪರೇಶ್ ಮೇಸ್ತ ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಿದ್ದೆ. ಒಂದು ಬಿಜೆಪಿ ಸಿಬಿಐ ತನಿಖೆಗೆ ಒತ್ತಾಯಿಸಿತ್ತು ನಾನು ವಹಿಸಿದ್ದೆ. ಆದರೆ ಈಗ ಬಿ ರಿಪೋರ್ಟ್ ಸಲ್ಲಿಕೆ ಬಳಿಕ ಸಿದ್ದರಾಮಯ್ಯ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೀಪಾವಳಿ ಗಿಫ್ಟ್​ನ್ನು ಮಾಧ್ಯಮಗಳಿಗೆ ಕಳುಹಿಸಿದ್ದಾರೆ. ಅದರಲ್ಲಿ ಒಂದರಿಂದ ಮೂರು ಲಕ್ಷ ರೂಪಾಯಿವರೆಗೂ ಹಣ ಇಟ್ಟು ಕಳುಹಿಸಲಾಗಿದೆ. ಸಾಕಷ್ಟು ಪತ್ರಕರ್ತರು ಹಣ ವಾಪಸ್ ಕಳಿಸಿದ್ದೀರಿ ಅದಕ್ಕಾಗಿ ಧನ್ಯವಾದ. ತಮ್ಮ ಭ್ರಷ್ಟಾಚಾರಗಳ ಬಗ್ಗೆ ಯಾವುದೇ ವರದಿ ಮಾಡಬೇಡಿ ಎಂದು ಆಮಿಷವೊಡ್ಡಲು ಈ ಹಣವನ್ನು ಸರ್ಕಾರದ ವತಿಯಿಂದ ಕಳುಹಿಸಲಾಗಿದೆ. ಮಾಧ್ಯಮಗಳಿಗೆ ನೀಡಿದ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ಇನ್ಸ್​ಪೆಕ್ಟರ್​ ನಂದೀಶ್ ಸಾವಿನ ಬಳಿಕ ಸಚಿವ ಎಂಟಿಬಿ ನಾಗರಾಜ್ ನೀಡಿರುವ ಹೇಳಿಕೆ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ ಅಲ್ಲವೇ? 70, 80 ಲಕ್ಷ ಕೊಟ್ಟು ಬಂದರೆ ಹೃದಯಾಘಾತ ಆಗದೆ ಇರುತ್ತದೆಯೇ ಎಂದು ಅವರು ಕೇಳಿದ್ದು ಇದಕ್ಕಿಂತ ಬಲವಾದ ಸಾಕ್ಷಿ ಭ್ರಷ್ಟಾಚಾರಕ್ಕೆ ಬೇಕೆ? ಸಂತೋಷ, ನಂದೀಶ್ ಸಾವಿಗೆ ಸರ್ಕಾರವೇ ನೇರ ಹೊಣೆ. ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಅವರೇ ಇದಕ್ಕೆ ನೇರ ಹೊಣೆ. ಇನ್ನು ಮಾಧ್ಯಮಗಳಿಗೆ ಹಣದ ಆಮಿಷ ಹುಟ್ಟಿರುವ ಮುಖ್ಯಮಂತ್ರಿ ತಮ್ಮ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ.

ಆಸ್ಥಾನದಲ್ಲಿ ಅವರು ಮುಂದುವರೆಯುವುದು ಸರಿಯಲ್ಲ. ರಾಜ್ಯದ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು. ನಂದೀಶ್ ಒಂದೊಮ್ಮೆ ಸಚಿವರು ಹೇಳಿದಂತೆ ಹಣಕೊಟ್ಟು ವರ್ಗಾವಣೆ ಮಾಡಿಕೊಂಡಿದ್ದರೆ ಅದನ್ನು ಯಾರಿಗೆ ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗ ಆಗಬೇಕು. ಎಂಟಿಬಿ ನಾಗರಾಜ್ ಗೆ ಹಣ ನೀಡಿದ ಮಾಹಿತಿ ಹೇಗೆ ತಿಳಿಯುತ್ತದೆ. ಸ್ವತಃ ನಂದೀಶ್ ಅವರೇ ಎಂಟಿಬಿ ನಾಗರಾಜ್ ಅವರಿಗೆ ಈ ಮಾಹಿತಿ ತಿಳಿಸಿರಬೇಕು. ಸಾವು ವೀಕ್ಷಣೆಗೆ ಎಂಟಿಬಿ ಯಾಕೆ ತೆರಳಿದ್ದರು. ಎಲ್ಲವೂ ಅನುಮಾನಾಸ್ಪದವಾಗಿದೆ ಎಂದು ಹೇಳಿದರು.

ಭ್ರಷ್ಟ, ಜನವಿರೋಧಿ ಸರ್ಕಾರ ಇದುವರೆಗೂ ಹೊಂದಿರಲಿಲ್ಲ. ಇಂಥ ಸರ್ಕಾರ ವಿರುದ್ಧ ಇನ್ನಷ್ಟು ಮಾಹಿತಿ ನೀಡುವ ಕಾರ್ಯವನ್ನು ಮಾಧ್ಯಮಗಳು ಮಾಡಲಿ. ನಮ್ಮ ಕಾಲದಲ್ಲಿ ಅಕ್ರಮಗಳು ನಡೆದಿದೆ ಎಂದು ಆರೋಪಿಸಿದ್ದೀರಿ. 2006 ರಿಂದ ಇದುವರೆಗೂ ನಡೆದಿರುವ ಎಲ್ಲಾ ಅಕ್ರಮಗಳ ತನಿಖೆ ನಡೆಸಿ ಎಂದರು.

ಎನ್. ಆರ್ ರಮೇಶ್ ವಿರುದ್ಧ ಆಕ್ರೋಶ..ಬಿಜೆಪಿ ನಾಯಕ ಎನ್. ಆರ್ ರಮೇಶ್‌ ತಮ್ಮ ವಿರುದ್ಧ ನಡೆಸಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅವನು ನನ್ನ ವಿರುದ್ಧ ಆಯುಧಕ್ಕೂ ಹೆಚ್ಚು ದೂರುಗಳನ್ನು ನೀಡಿದ. ಎಲ್ಲವೂ ಖುಲಾಸೆಯಾಗಿದೆ. ಅವನು ನೀಡಿದ ದೂರುಗಳಲ್ಲಿ ಇದು ಸಹ ಒಂದು. ನಾನು ಯಾವುದೇ ವ್ಯಕ್ತಿಯಿಂದ ಲಂಚ ಸ್ವೀಕರಿಸಿರಲಿಲ್ಲ. ನಾನು ಸೈಟ್ ತೆಗೆದುಕೊಳ್ಳೋದಕ್ಕೆ ಸಾಲ ತೆಗೆದುಕೊಂಡಿದ್ದು ಸತ್ಯ. ನಾನು ಸಾಲ ತೆಗೆದುಕೊಂಡಿದ್ದು ನಿಜ.

ನಾನು ಮೈಸೂರಲ್ಲಿ ಸೈಟ್ ತೆಗೆದುಕೊಂಡಿದ್ದು ನಿಜ. ಸಾಲ ತೆಗೆದುಕೊಳ್ಳೋದು ತಪ್ಪಾ? ವಿವೇಕ ನನ್ನ ಗುಡ್ ಫ್ರೆಂಡ್, 40 ವರ್ಷದಿಂದ ಆತ ನೀಡಿದ ಸಾಲವನ್ನು ನಾನು ಇನ್ನೂ ತೀರಿಸಿಲ್ಲ. ಎನ್ ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು ಕೊಡ್ತೀನಿ ಅಂದಿದ್ದಾನಲ್ಲ ಕೊಡೋದಕ್ಕೆ ಹೇಳು. ವಿವೇಕ್ ಹಾಗೂ ಮತ್ತೊಬ್ಬರಿಗೆ ನಾನು ಸಿಎಂ ಆಗಿದ್ದ ಅವಧಿಯಲ್ಲಿ ಟರ್ಫ್ ಕ್ಲಬ್ ಸದಸ್ಯತ್ವವನ್ನು ನೀಡಿದ್ದೆ. ಲಂಚ ಸ್ವೀಕರಿಸಿ ಈ ಕಾರ್ಯ ಮಾಡಿಲ್ಲ. ಸದಸ್ಯತ್ವ ನೀಡಿಕೆಗೂ ಸಾಲ ಪಡೆದಿದ್ದಕ್ಕೂ ಸಂಬಂಧವೇ ಇಲ್ಲ. ಎನ್ ಆರ್ ರಮೇಶ್ ಆರೋಪಕ್ಕೆ ನಾನು ಸೂಕ್ತ ವೇದಿಕೆಯಲ್ಲಿ ಉತ್ತರ ನೀಡುತ್ತೇನೆ ಎಂದರು.

ಓದಿ:ಸಿಎಂ ಕಚೇರಿಯಲ್ಲಿ ಹುದ್ದೆಗಳ ದರ ಪಟ್ಟಿ ಹಾಕಿದರೆ ಒಳಿತು: ಕಾಂಗ್ರೆಸ್

Last Updated : Oct 30, 2022, 7:59 PM IST

ABOUT THE AUTHOR

...view details