ಬೆಂಗಳೂರು: ಸಿದ್ಧಾರ್ಥ್ ನಾಪತ್ತೆ ಬಗ್ಗೆ ನನಗೆ ಅನುಮಾನವಿದೆ. ಅವರನ್ನು ಯಾರಾದ್ರು ಅಲ್ಲಿಗೆ ಕರೆದುಕೊಂಡು ಹೋದ್ರಾ ಅಥವಾ ಈ ಘಟನೆ ಹಿಂದೆ ಯಾರದಾದ್ರು ಕೈವಾಡ ಇದೆಯಾ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿದ್ದಾರ್ಥ್ ನಾಪತ್ತೆ ಆಗಿರೋದು ನಂಬಲು ಸಾಧ್ಯವಾಗುತ್ತಿಲ್ಲ: ಡಿಕೆಶಿ - cafe coffee day
ಸಿದ್ದರ್ಥ್ ನಾಪತ್ತೆ ಬಗ್ಗೆ ನನಗೆ ಅನುಮಾನವಿದೆ. ಅವರನ್ನು ಯಾರಾದ್ರು ಅಲ್ಲಿಗೆ ಕರೆದುಕೊಂಡು ಹೋದ್ರಾ ಅಥವಾ ಈ ಘಟನೆ ಹಿಂದೆ ಯಾರದಾದ್ರು ಕೈವಾಡ ಇದೆಯಾ ಎಂದು ಡಿ.ಕೆ.ಶಿವಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿದ್ದಾರ್ಥ್ ನಾಪತ್ತೆ ನಂಬಲು ಸಾಧ್ಯವಾಗುತ್ತಿಲ್ಲ : ಡಿಕೆ ಶಿವಕುಮಾರ್
ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಈ ಘಟನೆ ನಂಬಲು ಸಾಧ್ಯಾಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಿದ್ಧಾರ್ಥ್ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್, ಸಿದ್ಧಾರ್ಥ್ ಏನನ್ನೂ ಆಸೆ ಪಡದ ಸರಳ ವ್ಯಕ್ತಿತ್ವದವರು. ಭಾನುವಾರ ಸಿದ್ಧಾರ್ಥ್ ನನಗೆ ಕರೆ ಮಾಡಿದ್ರು. ನಾನು ಆಗ ಕಂಚಿಯಲ್ಲಿದ್ದೆ. ನಾಳೆ ಭೇಟಿ ಮಾಡ್ತೇನೆ ಅಂತ ಹೇಳಿದ್ದೆ ಅಂತ ಡಿಕೆಶಿ ಹೇಳಿದ್ರು.
ಸಿದ್ಧಾರ್ಥ್ ರಾಜ್ಯದ 50000 ಕುಟುಂಬಗಳಿಗೆ ಉದ್ಯೋಗ ನೀಡಿದ್ದಾರೆ. ಅವರ ಹುಡುಕಾಟದಲ್ಲಿ ಸರ್ಕಾರ ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡ್ತಿದೆ. ಭಗವಂತನ ಮೇಲೆ ಭಾರ ಹಾಕಿದ್ದೇವೆ ಎಂದು ಭಾವುಕರಾದ್ರು.
Last Updated : Jul 30, 2019, 2:51 PM IST