ಬೆಂಗಳೂರು: ಮೀಸಲಾತಿ ಹೆಚ್ಚಳ ವಿಚಾರವಾಗಿ ಒಕ್ಕಲಿಗ ಸಂಘದ ನಮ್ಮ ಎಲ್ಲಾ ಸಂಘಟನೆಗಳು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ವಿಚಾರವಾಗಿ ಒಕ್ಕಲಿಗರ ಸಭೆ ನಡೆಯುತ್ತಿದೆ. ಇದು ಬಹಳ ತಾಂತ್ರಿಕವಾದ ವಿಚಾರ. ನಮ್ಮೆಲ್ಲಾ ಸಂಘಟನೆಯವರು ಸಭೆ ಕರೆದಿದ್ದಾರೆ. ಮೊದಲು ಏನು ಅಂತ ನೋಡೋಣ. ಈಗ ನಾನು ಯಾವುದೇ ಅಭಿಪ್ರಾಯಕ್ಕೂ ಬರುವುದಿಲ್ಲ. ಈ ಕುರಿತಾಗಿ ಸಂಘಟನೆಯವರು, ಮಠದವರು, ಅಧಿಕಾರಿಗಳು ಸಂಶೋಧನೆ ಮಾಡಿದ್ದಾರೆ ಎಂದರು.
ಸರ್ವಪಕ್ಷಗಳ ಸಭೆ ವಿಚಾರವಾಗಿ ಮಾತನಾಡಿ, ಈಗ ಕರೆಯುತ್ತಿದ್ದಾರೆ. ಎಲ್ಲಾ ಸ್ಟೇಟ್ಮೆಂಟ್ ಕೊಟ್ಟ ಮೇಲೆ ಕರೆದ್ರೆ ಏನ್ ಸುಖ?. ಕರ್ನಾಟಕದಲ್ಲಿ ಇರುವವರೆಲ್ಲಾ ಕರ್ನಾಟಕದಲ್ಲಿ ಇರುತ್ತಾರೆ. ಮಹಾರಾಷ್ಟ್ರದಲ್ಲಿ ಇರುವವರು ಮಹಾರಾಷ್ಟ್ರದಲ್ಲಿ ಇರುತ್ತಾರೆ. ಯಾವುದೇ ಸಮಸ್ಯೆ ಇಲ್ಲ. ಯಾರೇ ಸ್ಟೇಟ್ಮೆಂಟ್ ಕೊಟ್ರೂ ಅದಕ್ಕೆ ಏನ್ ಉತ್ತರ ಕೊಡಬೇಕು ಕೊಟ್ಟು ಮುಗಿಸಬೇಕು. ಸುಮ್ಮನೆ ಅದೆಲ್ಲಾ ವಿಷಯಾಂತರ ಮಾಡಲು ಹೋಗಬಾರದು ಎಂದು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನನ್ನು ಸೋಲಿಸಿದ್ದಾರೆ: ಸಚಿವ ಎಂಟಿಬಿ
ಇದಾದ ಬಳಿಕ ಡಿ ಕೆ ಶಿವಕುಮಾರ್, 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಜತೆ ಝೂಮ್ ಮೂಲಕ ಸಭೆ ನಡೆಸುವರು. ಸಂಜೆ 3 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಈ ಸಭೆ ನಡೆಯಲಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಭಾಗಿಯಾಗುತ್ತಿದ್ದಾರೆ.