ಕರ್ನಾಟಕ

karnataka

ETV Bharat / state

ಅನರ್ಹರನ್ನು ಸೋಲಿಸುವುದೇ ನಮ್ಮ ಗುರಿ: ಡಿಕೆಶಿ ಶಪಥ - By- election news

ಬೇರೆ ಯಾವ ರಾಜ್ಯದಲ್ಲೂ ಆಪರೇಷನ್ ಕಮಲ ನಡೆಯಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ಸಿಎಂ ಆದಾಗ ಆಪರೇಷನ್ ಸಾಮಾನ್ಯ. ಅಲ್ಲದೆ, ನನಗೆ ನೆಮ್ಮದಿಯಿಂದ ಅಧಿಕಾರ ನಡೆಸಲು ಬಿಡಲಿಲ್ಲ ಎಂದು ಸಿಎಂ ಬಿಎಸ್​ವೈ ವಿರುದ್ಧ ಡಿಕೆಶಿ ಕಿಡಿಕಾರಿದರು. ಅಲ್ಲದೆ, ಈ ಉಪಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಡಿಕೆಶಿ ಹೇಳಿದ್ರು.

D K Shivakumar
ಅನರ್ಹರನ್ನು ಸೋಲಿಸುವುದೇ ನಮ್ಮ ಗುರಿ: ಡಿಕೆಶಿ

By

Published : Dec 3, 2019, 3:44 PM IST

ಬೆಂಗಳೂರು: ಅನರ್ಹರನ್ನ ಸೋಲಿಸುವುದೇ ನಮ್ಮ ಗುರಿ. ಪಕ್ಷ ಮತ್ತು ಮತದಾರರಿಗೆ ಮೋಸ ಮಾಡಿದವರನ್ನ ಜನರು ಪುನರಾಯ್ಕೆ ಮಾಡಲ್ಲವೆಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಸದಾಶಿವ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಸಕೋಟೆ ಮತ್ತು ಯಶವಂತಪುರದಲ್ಲಿ ಇಂದು ಪ್ರಚಾರ ಮಾಡುತ್ತಿದ್ದೇನೆ. ಈಗಾಗಲೇ ಬಹುತೇಕ ಎಲ್ಲಾ ಕಡೆ ಒಂದು ಸುತ್ತು ಪ್ರಚಾರ ಮಾಡಿ ಬಂದಿದ್ದೇನೆ. ಹೋದ ಕಡೆಯಲ್ಲೆಲ್ಲ ಜನ ಅನರ್ಹರನ್ನು ಈ ಬಾರಿ ಸೋಲಿಸಿ ಬುದ್ಧಿ ಕಲಿಸುವ ಬಗ್ಗೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಹಿರಿಯರಾದ ದೊರೆಸ್ವಾಮಿ, ಸಂತೋಷ ಹೆಗ್ಡೆ, ಗೋಪಾಲಗೌಡರು ಹೇಳಿರುವುದನ್ನ ನಾನು ನೋಡಿದ್ದೇನೆ. ಜನ ಅನರ್ಹರ ವಿರುದ್ಧ ನಿಂತು ಪ್ರಜಾಪ್ರಭುತ್ವ ಉಳಿಸಲಿ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಹಿರಿಯ ನಾಯಕರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಅದನ್ನ ನಿಭಾಯಿಸುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದರು.

ಬೇರೆ ಯಾವ ರಾಜ್ಯದಲ್ಲೂ ಆಪರೇಷನ್ ಕಮಲ ನಡೆಯಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ಸಿಎಂ ಆದಾಗ ಆಪರೇಷನ್ ಸಾಮಾನ್ಯ. ಅಲ್ಲದೆ, ನನಗೆ ನೆಮ್ಮದಿಯಿಂದ ಅಧಿಕಾರ ನಡೆಸಲು ಬಿಡಲಿಲ್ಲ ಎಂದು ಸಿಎಂ ಬಿಎಸ್​ವೈ ವಿರುದ್ಧ ಡಿಕೆಶಿ ಕಿಡಿಕಾರಿದರು.

ಚುನಾವಣಾ ಕ್ಷೇತ್ರಗಳಲ್ಲಿ ಬಿಜೆಪಿ ಪದ್ಮವ್ಯೂಹ ರಚನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಯಾವುದ್ಯಾವುದೋ ವ್ಯೂಹ ರಚನೆ ಮಾಡ್ತಾರೆ. ಏನೇನೋ ಮಾತನಾಡ್ತಾರೆ. ನಮ್ಮ ತಂತ್ರಗಾರಿಕೆಯನ್ನು ನಾವು ಮಾಡುತ್ತಿದ್ದೇವೆ. 15 ಕ್ಷೇತ್ರಗಳಲ್ಲಿ ಅನರ್ಹರಿಗೆ ಸೋಲು ಖಚಿತ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರು.

ಇನ್ನು, ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಹಾಕದಿರುವ ವಿಚಾರ ಪ್ರಸ್ತಾಪಿಸಿದ ಡಿಕೆಶಿ, ಅದು ಪಕ್ಷದ ನಿರ್ಧಾರ. ಅದರ ಬಗ್ಗೆ ನನಗೇನು ಗೊತ್ತಿಲ್ಲ. ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ನಾನು ಬದ್ಧ ಎಂದು ಸ್ಪಷ್ಟಪಡಿಸಿದರು.

For All Latest Updates

ABOUT THE AUTHOR

...view details