ಕರ್ನಾಟಕ

karnataka

ETV Bharat / state

ಡಿ.ಜೆ. ಹಳ್ಳಿ‌, ಕೆ.ಜಿ.‌ ಹಳ್ಳಿ‌ ಗಲಭೆ ಪ್ರಕರಣ: ಫೈರಿಂಗ್​​ಗೆ ಬಳಸಿದ್ದ ಗನ್, ಪಿಸ್ತೂಲ್ ಸಿಸಿಬಿ ವಶಕ್ಕೆ

ಡಿ.ಜೆ ಹಳ್ಳಿ ಠಾಣಾ ಪೊಲೀಸರು ಬಳಸಿದ್ದ 17 ಎಸ್ಎಲ್ಆರ್ ಗನ್​ಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ‌. ಈಗಾಗಲೇ ಫೈರಿಂಗ್ ಸ್ಥಳ ಪರಿಶೀಲನೆ ನಡೆಸಿರುವ ಎಫ್.ಎಸ್.ಎಲ್ ಸಿಬ್ಬಂದಿ ಇನ್ನೂ ಹಲವು ಪೊಲೀಸ್ ಇನ್​ಸ್ಪೆಕ್ಟರ್ ಗಳ ಪಿಸ್ತೂಲ್​​ಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

By

Published : Aug 23, 2020, 9:58 AM IST

ಡಿ.ಜೆ ಹಳ್ಳಿ‌ - ಕೆ.ಜಿ‌ ಹಳ್ಳಿ‌ ಗಲಭೆ ಪ್ರಕರಣ
ಡಿ.ಜೆ ಹಳ್ಳಿ‌ - ಕೆ.ಜಿ‌ ಹಳ್ಳಿ‌ ಗಲಭೆ ಪ್ರಕರಣ

ಬೆಂಗಳೂರು: ಡಿ.ಜೆ. ಹಳ್ಳಿ‌, ಕೆ.ಜಿ.‌ ಹಳ್ಳಿ‌ ಗಲಭೆ ವೇಳೆ ಪೊಲೀಸರು ಫೈರಿಂಗ್ ಗೆ ಬಳಸಿದ್ದ ಗನ್​ಗಳನ್ನ ಸಿಸಿಬಿ ವಶಕ್ಕೆ ಪಡೆದುಕೊಂಡಿದ್ದಾರೆ. ಗಲಭೆಕೋರರನ್ನು ಹತ್ತಿಕ್ಕಲು ಪೊಲೀಸರು ಫೈರಿಂಗ್ ಮಾಡಿದ್ದರು.

ಡಿ.ಜೆ. ಹಳ್ಳಿ ಠಾಣಾ ಪೊಲೀಸರು ಬಳಸಿದ್ದ 17 ಎಸ್ಎಲ್ಆರ್ ಗನ್ ಗಳು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ‌. ಈಗಾಗಲೇ ಫೈರಿಂಗ್ ಸ್ಥಳ ಪರಿಶೀಲನೆ ನಡೆಸಿರುವ ಎಫ್.ಎಸ್.ಎಲ್ ಸಿಬ್ಬಂದಿ ಇನ್ನು ಹಲವು ಪೊಲೀಸ್ ಇನ್​ಸ್ಪೆಕ್ಟರ್ ಗಳ ಪಿಸ್ತೂಲ್​​ಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಕೆಎಸ್ ಆರ್ ಪಿ ಸಿಎಆರ್ ಮತ್ತು ಡಿ.ಜೆ. ಹಳ್ಳಿ ಪೊಲೀಸರು ಬಳಸಿದ್ದ ಬಂದೂಕುಗಳು ಸಿಸಿಬಿ ತಾಂತ್ರಿಕ ತಂಡ ಪರಿಶೀಲನೆ ನಡೆಸಿದೆ. ಪಿಸ್ತೂಲ್ ಮತ್ತು ಗನ್ ಗಳನ್ನು ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗುತ್ತೆ. ಒಂದು ಮಾಹಿತಿ ಪ್ರಕಾರ 117 ಗುಂಡುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ‌.

ಮುಂದಿನ ತನಿಖಾ ಹಂತದಲ್ಲಿ ಈ ಬಂದೂಕುಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ. ಪ್ರಕರಣ ಸಂಬಂಧ ನಿನ್ನೆ ತಡರಾತ್ರಿ ನಾಲ್ವರನ್ನು ಬಂಧಿಸಿ ಡಿ.ಜೆ. ಹಳ್ಳಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ‌‌.

ABOUT THE AUTHOR

...view details