ಬೆಂಗಳೂರು:ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಬಹು ಬೇಡಿಕೆ ಇರುವ ಪ್ಲಾಸ್ಮಾ ಸಂಗ್ರಹ ಘಟಕಕ್ಕೆ ಝೆಕ್ ರಿಪಬ್ಲಿಕ್ ಸಹಕಾರ ನೀಡುತ್ತಿದ್ದು, ರಾಜ್ಯಕ್ಕೆ 500 ಪ್ಲಾಸ್ಮಾ ಘಟಕಗಳನ್ನು ದೇಣಿಗೆಯಾಗಿ ನೀಡಲು ಮುಂದಾಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದ ಬೆಂಗಳೂರಿನ ಕಾನ್ಸುಲೇಟ್ ಕಚೇರಿಯ ಕೌನ್ಸಲ್ ಸಿ.ಎಸ್.ಪ್ರಕಾಶ್ ಈ ವಿಷಯವನ್ನು ತಿಳಿಸಿದ್ದಾರೆ. ಪ್ರಾಗ್ನ ಸೆಂಟ್ರಲ್ ಮಿಲಿಟರಿ ಆಸ್ಪತ್ರೆಯಲ್ಲಿ ಈಗಾಗಲೇ ಪ್ಲಾಸ್ಮಾವನ್ನು ಸಂಗ್ರಹಿಸಿಡಲಾಗಿದ್ದು, ಭಾರತ ತಲುಪುವವರೆಗೆ ಎಲ್ಲಾ ವೆಚ್ಚವನ್ನು ಝೆಕ್ ರಿಪಬ್ಲಿಕ್ ಭರಿಸಲಿದೆ ಎಂದು ವಿವರಿಸಿದರು. 500 ಪ್ಲಾಸ್ಮಾ ಘಟಕ ದೇಣಿಗೆ ನೀಡುವ ಝೆಕ್ ರಿಪಬ್ಲಿಕ್ ಸಹಕಾರಕ್ಕೆ ಸಿಎಂ ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದು, ಧನ್ಯವಾದ ತಿಳಿಸಿದ್ದಾರೆ.