ಬೆಂಗಳೂರು:ದಿನೇ ದಿನೇ ಹೆಚ್ಚಾಗುತ್ತಿರುವ ಇಂದಿನ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಹಾಗೂ ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ವ್ಯಾಪಕವಾಗುತ್ತಿರುವ ಹರಡುತ್ತಿರುವ ಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿಂಗಾಪುರದ ಮೂಲದ ಸೈಫರ್ಮಾ ಕಂಪನಿಯೂ ಟೆಕ್ ಮಾರ್ಕ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಸೈಬರ್ ಸೆಕ್ಯೂರಿಟಿ ಕುರಿತಂತೆ ಎರಡು ಕಂಪನಿಗಳು ಪರಸ್ಪರ ಒಪ್ಪಂದ ಮಾಡಿಕೊಂಡವು. ಇಂದಿನ ಹೈಟೆಕ್ ಯುಗದಲ್ಲಿ ಆನ್ ಲೈನ್ನಲ್ಲೇ ಹಣಕಾಸಿನ ವ್ಯವಹಾರ ಅಧಿಕಗೊಂಡಂತೆ ಸೈಬರ್ ಖದೀಮರು ತಮ್ಮ ಕೈಚಳಕ ತೋರುತ್ತಿದ್ದಾರೆ. ಕೋವಿಡ್ ನಂತರ ಕಾಲದಲ್ಲಿ ಆನ್ ಲೈನ್ ಖದೀಮರು ವಂಚಿಸುವವರ ಸಂಖ್ಯೆ ಅಧಿಕವಾಗಿದೆ. ಅಧ್ಯಯನವೊಂದರ ಪ್ರಕಾರ ಕೋವಿಡ್ ಬಳಿಕ ದೇಶದಲ್ಲಿ ಶೇ.170 ರಷ್ಟು ಸೈಬರ್ ಅಪರಾಧಗಳು ಹೆಚ್ಚಾಗಿವೆ.
2022ರ ಮೊದಲ ಆರು ತಿಂಗಳಲ್ಲಿ 70 ಸಾವಿರ ಕೇಸ್ ಗಳು ದಾಖಲಾಗಿದ್ದು 2025ರ ವೇಳೆಗೆ ಸೈಬರ್ ಅಪರಾಧ ತಡೆಯುವುದರ ಬಗ್ಗೆ ಯೋಚಿಸಬೇಕಾದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಸೈಫರ್ಮಾ ಹಾಗೂ ಟೆಕ್‌ಮಾರ್ಕ್ ಕಂಪನಿಯೂ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ಎದುರಾಗುವ ಸೈಬರ್ ಭದ್ರತೆಗಳನ್ನು ಕಾಪಾಡಲು ಸಹಕಾರಿಯಾಗಲಿದೆ.
ಈ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸೈಫರ್ಮಾ ಕಂಪನಿಯ ಗ್ಲೋಬಲ್ ಹೆಡ್ ಅಮಿತ್ ಠಾಕೂರ್ 'ಸೈಬರ್ ಭದ್ರತೆ ಹಾಗೂ ಸುರಕ್ಷತೆ ಕುರಿತಂತೆ ಕಾರ್ಯನಿರ್ವಹಿಸುವ ಕಂಪನಿ ಇದಾಗಿದ್ದು, ಪ್ರಧಾನ ಕಚೇರಿ ಸಿಂಗಾಪುರದಲ್ಲಿದೆ. ಕಳೆದ ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಫಿಲಿಫೆನ್ಸ್ ನ ಸೈಬರ್ ಇಂಟಿಲಿಜೆನ್ಸ್ ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ಭಾರತದಲ್ಲಿ ಸೈಬರ್ ಸೆಕ್ಯೂರಿಟಿ ಬಗ್ಗೆ ಕಾರ್ಯನಿರ್ವಹಿಸಲು ಮುಂದಾಗಿದ್ದು ಈ ಸಂಬಂಧ ಆಂಧ್ರಪ್ರದೇಶ, ಒಡಿಶಾ ಹಾಗೂ ಗುಜರಾತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈಗ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಲು ಸನ್ನದ್ದವಾಗಿದೆ.