ಕರ್ನಾಟಕ

karnataka

ETV Bharat / state

ಅಕ್ರಮ ಸಿಲಿಂಡರ್​ ರೀಫಿಲ್ಲಿಂಗ್​ ವೇಳೆ ಗ್ಯಾಸ್​ ಸ್ಫೋಟ.. ಮೂವರಿಗೆ ಗಾಯ, ಹೊತ್ತಿ ಉರಿದ ಗೋದಾಮು.. - ಬೆಂಗಳೂರು ಸಿಲಿಂಡರ್​ ಬ್ಲಾಸ್ಟ್​ ಸುದ್ದಿ

ದೊಡ್ಡ ಸಿಲಿಂಡರ್​ಗಳಿಂದ ಸಣ್ಣ-ಸಣ್ಣ ಸಿಲಿಂಡರ್​ಗಳಿಗೆ ಏಜೆನ್ಸಿ ಅಕ್ರಮವಾಗಿ ರೀಫಿಲಿಂಗ್ ಮಾಡುತ್ತಿತ್ತು. ಈ ವೇಳೆ ಎರಡು ಸಿಲಿಂಡರ್​ಗಳು ಸ್ಫೋಟಗೊಂಡಿದ್ದು, ಮೂವರಿಗೆ ಗಾಯಗಳಾಗಿವೆ..

Bengaluru fire incident, Cylinder blast in Bengaluru, blast in Cylinder refilling godown, Bangalore Cylinder blast news, ಬೆಂಗಳೂರಿನಲ್ಲಿ ಬೆಂಕಿ ಅವಘಡ, ಬೆಂಗಳೂರಿನಲ್ಲಿ ಸಿಲಿಂಡರ್​ ಬ್ಲಾಸ್ಟ್​, ರೀಫಿಲ್ಲಿಂಗ್​ ಮಾಡುತ್ತಿದ್ದ ಗೋದಾಮುವಿನಲ್ಲಿ ಬ್ಲಾಸ್ಟ್​, ಬೆಂಗಳೂರು ಸಿಲಿಂಡರ್​ ಬ್ಲಾಸ್ಟ್​ ಸುದ್ದಿ,
ಬೆಂಗಳೂರಿನಲ್ಲಿ ಮತ್ತೊಂದು ಸಿಲಿಂಡರ್ ಸ್ಪೋಟ ಪ್ರಕರಣ

By

Published : Jan 8, 2022, 1:53 PM IST

Updated : Jan 8, 2022, 2:23 PM IST

ಬೆಂಗಳೂರು :ನಗರದಲ್ಲಿಮತ್ತೊಂದು ಸಿಲಿಂಡರ್ ಸ್ಫೋಟ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಮೂಡಲುಪಾಳ್ಯದ ಪಂಚಶೀಲ ನಗರದಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡಿರುವುದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಮತ್ತೊಂದು ಸಿಲಿಂಡರ್ ಸ್ಪೋಟ ಪ್ರಕರಣ

ಬೆಟ್ಟಯ್ಯ ಎಂಬುವರ ಮಾಲೀಕತ್ವದ ಭರತ್ ಭವಾನಿ ಗ್ಯಾಸ್ ಏಜೆನ್ಸಿಯಲ್ಲಿ ಅಕ್ರಮವಾಗಿ ರೀಫಿಲಿಂಗ್ ಮಾಡುತ್ತಿದ್ದ ವೇಳೆ ಸಿಲಿಂಡರ್​ ಬ್ಲಾಸ್ಟ್​ ಆಗಿದೆ. ಈ ವೇಳೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಓದಿ:'ಅವರನ್ನು ಹುಚ್ಚರಂತೆ ಬೀದಿ ಮೆರವಣಿಗೆ ಮಾಡಿಸುವೆ': ಕೊರಗಜ್ಜ ದೈವದ ನುಡಿ

ದೊಡ್ಡ ಸಿಲಿಂಡರ್​ಗಳಿಂದ ಸಣ್ಣ-ಸಣ್ಣ ಸಿಲಿಂಡರ್​ಗಳಿಗೆ ಏಜೆನ್ಸಿ ಅಕ್ರಮವಾಗಿ ರೀಫಿಲಿಂಗ್ ಮಾಡುತ್ತಿತ್ತು. ಈ ವೇಳೆ ಎರಡು ಸಿಲಿಂಡರ್​ಗಳು ಸ್ಫೋಟಗೊಂಡಿದ್ದು, ಮೂವರಿಗೆ ಗಾಯಗಳಾಗಿವೆ.

ಬೆಂಗಳೂರಿನಲ್ಲಿ ಮತ್ತೊಂದು ಸಿಲಿಂಡರ್ ಸ್ಪೋಟ ಪ್ರಕರಣ

ಇನ್ನು ಸಿಲಿಂಡರ್​ ಸ್ಫೋಟದಿಂದಾಗಿ ಗೋದಾಮುವಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಎರಡು ಅಗ್ನಿಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿವೆ.

ಈ ವೇಳೆ ಗೋದಾಮುವಿನಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಿಲಿಂಡರ್​ಗಳ ಶೇಖರಣೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಗೋವಿಂದರಾಜನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬೆಂಗಳೂರಿನಲ್ಲಿ ಮತ್ತೊಂದು ಸಿಲಿಂಡರ್ ಸ್ಪೋಟ ಪ್ರಕರಣ

ಈ ಘಟನೆ ಕುರಿತು ಭರತ್ ಭವಾನಿ ಗ್ಯಾಸ್ ಏಜೆನ್ಸಿ ಮಾಲೀಕ ಬೆಟ್ಟಯ್ಯ ಮೇಲೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Last Updated : Jan 8, 2022, 2:23 PM IST

ABOUT THE AUTHOR

...view details