ಕರ್ನಾಟಕ

karnataka

ETV Bharat / state

ಬೆಂಗಳೂರು: ಅತ್ಯಾಧುನಿಕ ಸೈಕಲ್ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್‌ - DCP Dharmendra Kumar Meena

ಖದೀಮ ಕಳ್ಳತನ ಮಾಡಿರುವ ಒಂದೊಂದು ಸೈಕಲ್ 20 ಸಾವಿರದಿಂದ 40 ಸಾವಿರದಷ್ಟು ಬೆಲೆ ಬಾಳುತ್ತೆ. ಈತ ಸೈಕಲ್ ಕಳವು ಮಾಡುವಾಗ ಆಟೋ ಬಳಸುತ್ತಿದ್ದನಂತೆ. ನಂತರ ಮಿಲಿಟರಿ ಸಿಬ್ಬಂದಿಗೆ ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

cycle-robbery-accused-arrested-in-bangalore
ಹೈಎಂಡ್ ಸೈಕಲ್ ಕಳ್ಳತನ

By

Published : Sep 22, 2021, 7:05 PM IST

Updated : Sep 22, 2021, 7:26 PM IST

ಬೆಂಗಳೂರು: ನಗರದಲ್ಲಿ ಬೆಲೆಬಾಳುವ ಸೈಕಲ್ ಕಳ್ಳತನ ಮಾಡುತ್ತಿದ್ದ ಆರೋಪಿ ರಫಿಕ್‌ ಹಾಗೂ ಆದಿಲ್ ಪಾಷಾ ಎಂಬುವವರನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಫಿಕ್‌ನಿಂದ ಒಟ್ಟು 40 ಸೈಕಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಖದೀಮ ಕಳ್ಳತನ ಮಾಡಿರೋ ಒಂದೊಂದು ಸೈಕಲ್ ಕೂಡ 20 ಸಾವಿರದಿಂದ 40 ಸಾವಿರದಷ್ಟು ಬೆಲೆ ಬಾಳುತ್ತೆ. ಈತ ಸೈಕಲ್ ಕಳವು ಮಾಡುವಾಗ ಆಟೋವನ್ನು ಬಳಸುತ್ತಿದ್ದನಂತೆ. ನಂತರ ಮಿಲಿಟರಿ ಸಿಬ್ಬಂದಿಗೆ ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ

ಪ್ರಕರಣದ ಬಗ್ಗೆ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಮಾತನಾಡಿ, ಹೈಎಂಡ್ ಬೈಸಿಕಲ್‌ ಕಳ್ಳತನ ಪ್ರಕರಣ ಸಂಜಯ್ ನಗರದಲ್ಲಿ ದಾಖಲಾಗಿತ್ತು. ಸೆ. 13 ರಂದು ಏರ್​ಪೋರ್ಸ್​ ಸಿಬ್ಬಂದಿ ಈ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಡಾಬಾ, ಬೀಡಾ ಇನ್ನಿತರ ಪ್ರದೇಶಗಳಲ್ಲಿ ಓಡಾಡುತ್ತಿದ್ದ ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆದು ವಿಚಾರಣೆ ನಡೆಸಲಾಗಿತ್ತು ಎಂದರು.

ಈ ಪ್ರಕರಣದ ವಿಚಾರಣೆ ವೇಳೆ ವೈರ್​ ಕಟ್ಟರ್ ಬಳಸುತ್ತಿದ್ದ ವ್ಯಕ್ತಿಯನ್ನು ಗುರುತಿಸಲಾಗಿತ್ತು. ಆರೋಪಿಗಳಾದ ಮಹಮ್ಮದ್ ರಫೀಕ್, ಆದಿಲ್ ಪಾಷಾ ಎಂಬುವವರನ್ನು ವಿಚಾರಣೆ ನಡೆಸಲಾಗಿದೆ. ಇವರಿಬ್ಬರನ್ನೂ ವಿಚಾರಣೆ ನಡೆಸಿದ ವೇಳೆ ತಾವೇ ಸೈಕಲ್ ಕಳ್ಳತನ ಮಾಡ್ತಿರುವ ಬಗ್ಗೆ ಬಾಯ್ಬಿಟ್ಟಿದ್ದರು. ಈ ಆರೋಪಿಗಳು ರೆಸಿಡೆನ್ಸಿ ಏರಿಯಾದಲ್ಲಿ ಎಲ್ಲೆಲ್ಲಿ ಸೈಕಲ್‌ಗಳಿವೆ ಎಂದು ಮೊದಲಿಗೆ ಗುರುತಿಸುತ್ತಿದ್ದರು. ನಂತರ ಹರ್ಕ್ಯುಲಸ್, ಅಟ್ಲಾಸ್, ಬಿಎಂಡಬ್ಲ್ಯು ರೀತಿಯ ಹೈ ಎಂಡ್ ಸೈಕಲ್‌ಗಳನ್ನೇ ಕಳ್ಳತನ ಮಾಡ್ತಿದ್ರು ಎಂದು ತಿಳಿಸಿದರು.

ಇಷ್ಟೆ ಅಲ್ಲದೇ, ವಿಚಾರಣೆ ವೇಳೆ ಈ ಆರೋಪಿಗಳು ಇಲ್ಲಿಯವರೆಗೆ 60 ಅಫೆನ್ಸ್ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಸಂಜಯ್ ನಗರ, ಯಲಹಂಕ ನ್ಯೂಟೌನ್, ಹೈಗ್ರೌಂಡ್ ಸೇರಿದಂತೆ 15 ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾರೆ. ಆರೋಪಿಗಳು 80-90 ಸಾವಿರ ಬೆಲೆ ಬಾಳುವ ಬೈಸಿಕಲ್ಸ್ ಕೂಡ ಕಳ್ಳತನ ಮಾಡಿದ್ದಾರೆ.

ಇದೀಗ ಆರೋಪಿಗಳಿಂದ ಒಟ್ಟು 45 ಹೈಎಂಡ್ ಸೈಕಲ್‌ಗಳನ್ನು ರಿಕವರಿ ಮಾಡಿದ್ದೇವೆ. 15 ಬೇರೆ ಬೇರೆ ಠಾಣೆಯಲ್ಲಿ 19 ಸೈಕಲ್ ರಿಕವರಿ ಮಾಡಿದ್ದೇವೆ. ಉಳಿದ ಸೈಕಲ್ ಕಳುವಾದ ಬಗ್ಗೆ ಮಾಹಿತಿಗಳು ಲಭಿಸಿಲ್ಲ. ಯಾರಾದ್ರು ಸೈಕಲ್ ಕಳೆದುಕೊಂಡಿದ್ರೆ ಸಂಜಯ್ ನಗರ ಠಾಣೆಗೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಚಿರತೆಯನ್ನು ನೀವೇ ಹಿಡಿಯಬಹುದು: ಸಚಿವ ಕಾರಜೋಳಗೆ ಸಿದ್ದರಾಮಯ್ಯ ಸಲಹೆ

Last Updated : Sep 22, 2021, 7:26 PM IST

ABOUT THE AUTHOR

...view details