ಕರ್ನಾಟಕ

karnataka

ETV Bharat / state

ರೌಡಿ ಶೀಟರ್ ಸೈಕಲ್ ರವಿ ಬಳಿ ಇದ್ದದ್ದು ಬರೋಬ್ಬರಿ 25 ಲಕ್ಷ ರೂ. ಅಕ್ರಮ ಆಸ್ತಿ - undefined

ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಅಕ್ರಮವಾಗಿ ಗಳಿಕೆ ಮಾಡಿರುವ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಘೋಷಣೆ ಮಾಡಿದೆ.

ಸೈಕಲ್ ರವಿ

By

Published : Mar 31, 2019, 8:48 AM IST

ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಅಕ್ರಮವಾಗಿ ಆಸ್ತಿಗಳಿಕೆ ಆರೋಪದಡಿ ಪರಿಶೀಲನೆ ನಡೆಸಿರುವ ಜಾರಿ ನಿರ್ದೇಶನಾಲಯ(ಇಡಿ) ಮನಿ ಲ್ಯಾಂಡಿಂಗ್ ಆಕ್ಟ್ ಪ್ರಕರಣ ದಾಖಲಿಸಿಕೊಂಡು ಅಕ್ರಮ ಆಸ್ತಿ ಘೋಷಣೆ ಮಾಡಿದೆ.

ರವಿ ತನ್ನ ಪತ್ನಿ ಹಾಗೂ ತಾಯಿ ಹೆಸರಿನಲ್ಲಿ ಕೆಂಗೇರಿ, ಯಶವಂತಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಮನೆಗಳನ್ನು ಕೊಂಡುಕೊಂಡಿದ್ದನು ಎನ್ನಲಾಗುತ್ತಿದೆ. ಪಿಎಂಎಲ್ಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಇಡಿ ರವಿ ಸುಮಾರು 25 ಲಕ್ಷ 60 ಸಾವಿರ ಮೌಲ್ಯದ ಆಕ್ರಮ ಆಸ್ತಿ ಹೊಂದಿದ್ದಾನೆ ಎಂದು ಘೋಷಿಸಿದೆ.

ಇಡಿ ಆಸ್ತಿ ಘೋಷಣೆ

ಕಳೆದ ವರ್ಷ ಜುಲೈನಲ್ಲಿ ಸಿಸಿಬಿ ಪೊಲೀಸರು ಕೆಂಗೇರಿಯ ನೈಸ್ ರೋಡ್ ಬಳಿ ಗುಂಡು ಹಾರಿಸಿ ಸೈಕಲ್ ರವಿಯನ್ನ ಬಂಧಿಸಿದ್ದರು. ಸಿಸಿಬಿ ತನಿಖೆ ವೇಳೆ ಅಪಾರ ಪ್ರಮಾಣದ ಅಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಇಡಿಗೆ ಪೊಲೀಸರು ಮಾಹಿತಿ ನೀಡಿದ್ದರು. ಸದ್ಯ ತನಿಖೆ ಕೈಗೊಂಡ ಇಡಿ‌ ಸಕ್ರಮ ಆಸ್ತಿ ಘೋಷಿಸಿದೆ.

ಸೈಕಲ್ ರವಿ ಮೀಟರ್ ಬಡ್ಡಿ ದಂಧೆ, ಹಫ್ತಾ ವಸೂಲಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಅಪಹರಿಸುವವುದು ಮೊದಲಾದ ಕೃತ್ಯಗಳಲ್ಲಿ ಭಾಗಿಯಾಗಿದ್ದನು.

For All Latest Updates

TAGGED:

ABOUT THE AUTHOR

...view details