ಕರ್ನಾಟಕ

karnataka

ETV Bharat / state

ಕಾರಿನ ಹಿಂಭಾಗಕ್ಕೆ ಸೈಕಲ್ ಅಳವಡಿಸಿಕೊಂಡಿದ್ದೀರಾ? ಕಾದಿಗೆ ನಿಮಗೆ ಶಾಕ್​ - ಕಾರಿನ ಹಿಂಭಾಗಕ್ಕೆ ಸೈಕಲ್‌

ರಾಜ್ಯ ಆಂತರಿಕ ಭದ್ರತಾ ಇಲಾಖೆಯ ಎಡಿಜಿಪಿ ಭಾಸ್ಕರ್ ರಾವ್, ಕಾರಿನ ಮೇಲೆ ಅಥವಾ ಹಿಂಭಾಗದಲ್ಲಿ ಸೈಕಲ್ ಇಟ್ಟುಕೊಂಡರೆ ಏನು ಸಮಸ್ಯೆಯಾಗುವುದಿಲ್ಲ. ಆದರೆ ಕಾರಿನ ಗಾತ್ರಕ್ಕಿಂತ ಸೈಕಲ್ ಹೊರಬಂದರೆ ಅದು ನಿಯಮಬಾಹಿರ ಎನಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

cycle-back-of-the-car-without-permission-pay-the-fine-news
ಅನುಮತಿ ಇಲ್ಲದೆ ಕಾರಿನ ಹಿಂಭಾಗಕ್ಕೆ ಸೈಕಲ್ ಅಳವಡಿಸಿಕೊಂಡರೆ ದಂಡ ಕಟ್ಟಬೇಕಾದಿತು ಎಚ್ಚರ..

By

Published : Oct 15, 2020, 11:06 PM IST

ಬೆಂಗಳೂರು:ಕೊರೊನಾ ಲಾಕ್ ಡೌನ್ ಶುರುವಾದಾಗಿನಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಗರದಲ್ಲಿ ಸಾರ್ವಜನಿಕರು ಹೆಚ್ಚೆಚ್ಚು ಸೈಕಲ್ ಬಳಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಹೀಗಾಗಿಯೇ ಸೈಕಲ್ ಪ್ರಿಯರು ಕಾರಿನ ಹಿಂಭಾಗಕ್ಕೆ ರಾಕ್ ಅಳವಡಿಸಿ ಸೈಕಲ್ ಇಟ್ಟುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾರಿಗೆ ಇಲಾಖೆಯಿಂದ ಅನುಮತಿ ಪಡೆದುಕೊಳ್ಳದೆ ಕಾರಿನ ಹಿಂಭಾಗದಲ್ಲಿ ಸೈಕಲ್ ಅಳವಡಿಸಿಕೊಂಡರೆ ಐದು ಸಾವಿರ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ.

ನಿಯಮಾನುಸಾರ ಸಾರಿಗೆ ಇಲಾಖೆಯಿಂದ ಅನುಮತಿ ಪಡೆದುಕೊಂಡರೆ ಯಾವುದೇ ಸಮಸ್ಯೆಯಿಲ್ಲ. ಕಳೆದ ಭಾನುವಾರ ಎಲೆಕ್ಟ್ರಾನಿಕ್ ಸಿಟಿಯ ಸುಕುಮಾರ್ ಎಂಬುವರು ಕಾರಿನ ಹಿಂಭಾಗ ರಾಕ್ ನಲ್ಲಿ ಎರಡು ಸೈಕಲ್ ಇಟ್ಟುಕೊಂಡು ಹೋಗುವಾಗ ಸ್ಥಳೀಯ ಸಂಚಾರ ಪೊಲೀಸರು ತಡೆದು ದಂಡ ಕಟ್ಟುವಂತೆ ಹೇಳಿದ್ದಾರೆ.

ದಂಡದ ಬಗ್ಗೆ ಸುಕುಮಾರ್ ಪ್ರಶ್ನಿಸಿದರೆ, ಕಾರಿನ ಮೇಲೆ ಅಥವಾ ಹಿಂಭಾಗದಲ್ಲಿ‌ ಒಂದು ಸೈಕಲ್ ಇಟ್ಟುಕೊಂಡರೆ ಏನು‌ ಸಮಸ್ಯೆಯಿಲ್ಲ. ಎರಡು ಸೈಕಲ್ ಇಟ್ಟುಕೊಂಡರೆ ಅದು ನಿಯಮ ಬಾಹಿರವಾಗಲಿದೆ ಎಂದು‌ ಪೊಲೀಸರು ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ರಾಜ್ಯ ಆಂತರಿಕ ಭದ್ರತಾ ಇಲಾಖೆಯ ಎಡಿಜಿಪಿ ಭಾಸ್ಕರ್ ರಾವ್, ಕಾರಿನ ಮೇಲೆ ಅಥವಾ ಹಿಂಭಾಗದಲ್ಲಿ ಸೈಕಲ್ ಇಟ್ಟುಕೊಂಡರೆ ಏನು ಸಮಸ್ಯೆಯಾಗುವುದಿಲ್ಲ. ಆದರೆ ಕಾರಿನ ಗಾತ್ರಕ್ಕಿಂತ ಸೈಕಲ್ ಹೊರಬಂದರೆ ಅದು ನಿಯಮಬಾಹಿರ ಎನಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಸಾರಿಗೆ ಇಲಾಖೆ ಅನುಮತಿಇಲ್ಲದೆ ಕಾರಿಗೆ ಹೆಚ್ಚುವರಿಯಾಗಿ ಫಿಟ್ಟಿಂಗ್ ಮಾಡಿಕೊಂಡರೆ 5 ಸಾವಿರ ದಂಡ ವಿಧಿಸಬಹುದು. ಕಾರಿನ ಹಿಂಭಾಗಕ್ಕೆ ಸೈಕಲ್‌ ಇಟ್ಟುಕೊಂಡಾಗ ಕಾರಿನ ನೋಂದಣಿ ಸಂಖ್ಯೆ ಕಾಣಿಸುವುದಿಲ್ಲ. ಅಲ್ಲದೆ ಕಾರಿನ ಬಾಗಿಲು ತೆಗೆದಾಗ ಬೇರೆ ವಾಹನ ಸವಾರರ ಜೀವಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸಾರಿಗೆ ಇಲಾಖೆಯಿಂದ ಅನುಮತಿ ಪಡೆದುಕೊಂಡು ನಾಮಿನಲ್ ಶುಲ್ಕ ಕಟ್ಟಿ ಕಾರಿಗೆ ರಾಕ್ ಅಳವಡಿಸಿಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ABOUT THE AUTHOR

...view details