ಬೆಂಗಳೂರು :ಐಟಿಬಿಟಿ ಹಾಗೆ ತಂತ್ರಜ್ಞಾನ ಬೆಳೆಯುತ್ತಿದ್ದ ಹಾಗೆ ರಾಜ್ಯದಲ್ಲಿ ಸೈಬರ್ ವಂಚಕರ ಹಾವಳಿಗಳು ಕೂಡ ಹೆಚ್ಚಾಗಿ ಶುರುವಾಗ್ತಿದೆ. ಸೈಬರ್ ಅಪರಾಧ ದಾಖಲು ಮಾಡಲು ಮತ್ತು ತನಿಖೆಯ ಉದ್ದೇಶದಿಂದ ಸೈಬರ್ ಅಪರಾಧವನ್ನು ಕಟ್ಟಿ ಹಾಕಲು ಭಾರತ ಮಾಹಿತಿ ತಂತ್ರಜ್ಞಾನ ಅಧಿನಿಯಮ 2000 ಜಾರಿ ತಂದಿದೆ. ಆದರೂ ಕೂಡ ಸೈಬರ್ ಕಳ್ಳರು ತಂತ್ರಜ್ಞಾನ ಬೆಳವಣಿಗೆ ಜೊತೆಗೆ ವಿಧ ವಿಧವಾಗಿ ಜನರನ್ನು ಮೋಸ ಮಾಡುತ್ತಿದ್ದಾರೆ.
ಪ್ರಮುಖ ಸೈಬರ್ ಅಪರಾಧ ಪ್ರಕರಣ?:ತಂತ್ರಜ್ಞಾನ ಬೆಳವಣಿಗೆಯಾಗ್ತಿದ್ದ ಹಾಗೆ ಒಂದಲ್ಲ ಒಂದು ರೀತಿ ಸೈಬರ್ ಅಪರಾಧ ಬೆಳವಣಿಗೆಯನ್ನು ಕಂಡಿದೆ. ಪ್ರಮುಖವಾಗಿ ಸಾಫ್ಟ್ವೇರ್ಗಳು, ಸ್ಟ್ಯಾಮ್ ಜಾಹೀರಾತು ಮಾದರಿ, ವೈಯಕ್ತಿಕ ಮಾಹಿತಿಗಳುಳ್ಳ ಕ್ರೆಡಿಟ್ ಕಾರ್ಡ್ ಅಥವಾ ಡೇಟಾ ನಕಲಿಕರಿಸಿಕೊಳ್ಳುವುದು, (Phishing) ಇನ್ನೊಬ್ಬರ ಬಗ್ಗೆ ತಪ್ಪು ಭಾವನೆ ಬರುವಂತೆ ಮಾಡುವುದು (SpooFiNg) ಬೆದರಿಕೆ ಮೂಲಕ ಭಯೋತ್ಪಾದನೆ, ಮೋಸದ ಇಮೇಲ್ ಮುಖಾಂತಾರ ದೋಖಾ ಮಾಡ್ತಾರೆ.
ಬ್ಯಾಂಕ್ ಖಾತೆ ಹೆಸರಿನಲ್ಲಿ ದೋಖಾ:ಪ್ರತಿಯೊಬ್ಬರ ಬಳಿ ಅಕೌಂಟ್ ಇದ್ದೇ ಇರುತ್ತದೆ. ಇದನ್ನ ಬಂಡವಾಳವಾಗಿಟ್ಟಕೊಂಡು ದೂರವಾಣಿ ಕರೆ ಮಾಡಿ ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಮಾಹಿತಿ ಕಲೆ ಹಾಕಿ ಹಣ ಲಪಾಟಯಿಸುವ ಪ್ರಕರಣ ಬಹುತೇಕವಾಗಿ ಸೆನ್ ಹಾಗೂ ನಗರ ಆಯುಕ್ತರ ಕಚೇರಿಯ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿದೆ.
ನಗ್ನ ಚಿತ್ರದ ಮೂಲಕ ಲಾಭ :ದೇಶ ಬೆಳವಣಿಗೆಯಾಗ್ತಿದ್ದ ಹಾಗೆ ಜನರ ಜೀವನ ಶೈಲಿ ಬದಲಾಗುತ್ತ ಹೋಗುತ್ತಾ ಇದೆ. ಇತ್ತೀಚೆಗಿನ ಫ್ಯಾಷನ್ ಲೈಫ್‌ನಲ್ಲಿ ಬಹಳಷ್ಟು ಮಂದಿ ಮೊಬೈಲ್ ಬಳಕೆ ಮಾಡ್ತಿದ್ದು, ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳದ ಇನ್ಸ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟರ್, ಟಿಕ್ಟಾಕ್ನಲ್ಲಿ ಫೋಟೊ, ವಿಡಿಯೋ ಅಪ್ಲೋಡ್ ಮಾಡ್ತಾರೆ. ಇದನ್ನು ಬಂಡವಾಳ ಮಾಡಿಕೊಂಡು ಹ್ಯಾಕರ್ಗಳು ಫೋಟೋ ಎಡಿಟ್ ಮಾಡಿ ನಗ್ನ ದೇಹ ಹಾಕಿ ದುಡ್ಡಿಗೆ ಡಿಮ್ಯಾಂಡ್ ಮಾಡ್ತಾರೆ.
ಇಮೇಲ್ ದೋಖಾ: ಸಾಮಾನ್ಯವಾಗಿಂದು ಎಲ್ಲರ ಬಳಿಯೂ ಒಂದೊಂದು ಇಮೇಲ್ ಐಡಿಗಳು ಇದ್ದೇ ಇರುತ್ತವೆ. ಸೈಬರ್ ಖದೀಮರು ಇಮೇಲ್ ಹ್ಯಾಕ್ ಮಾಡಿ ವೈಯಕ್ತಿಕ ಡಿಟೇಲ್ಸ್ ಪಡೆದು ಇಮೇಲ್ಗೆ ಅಟ್ಯಾಚ್ ಆಗಿರುವ ಬ್ಯಾಂಕ್ ಮೊತ್ತವನ್ನು ಲಪಾಟಾಯಿಸಿರುವ ಘಟನೆಗಳು ನಡೆದಿದೆ.
ಎಟಿಎಂ ಬಳಿ ಡೆಬಿಟ್ ಕ್ರೆಡಿಟ್ ಕಾರ್ಡ್ ಫ್ರಾಡ್ :ಇಂದಿನ ಯುಗದಲ್ಲಿ ನಗದುಗಿಂತ ಹೆಚ್ಚಾಗಿ ಕಾರ್ಡ್ಗಳ ಬಳಕೆಯೇ ಹೆಚ್ಚಾಗಿದೆ. ಎಟಿಎಂ ಬಳಿ ಸೈಬರ್ ಖದೀಮರು ಮಿಷನ್ ಅಳವಡಿಕೆ ಮಾಡಿ ಎಟಿಎಂನ ವೈಯಕ್ತಿಕ ಪಿನ್ ಸಂಖ್ಯೆ ಪಡೆದು ಹಣ ಎಗರಿಸುತ್ತಾರೆ. ಹಾಗೆ ಶಾಪಿಂಗ್ ಮಾಡಲು ಮಾಲ್ ಬಳಿ ತೆರಳಿದಾಗ ಗ್ರಾಹಕರ ಪಾಸ್ ವರ್ಡ್ಗಳನ್ನ ತಿಳಿದು ಲಕ್ಷ ಲಕ್ಷ ಹಣ ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಿಟ್ ಕಾಯಿನ್ ದೋಖಾ :ಇದು ಡಿಜಿಟಲ್ ಹಣಕಾಸು ಆಗಿದ್ದು, ನಿಜವಾದ ನಾಣ್ಯವನ್ನ ಇಲ್ಲಿ ನೀಡಬೇಕಿಲ್ಲ. ದೊಡ್ಡ ಸಂಸ್ಥೆಗಳು, ಷೇರು ಮಾರುಕಟ್ಟೆಯಲ್ಲಿ ಹೂಡುವ ಹೂಡಿಕೆದಾರರು, ಉದ್ಯಮಿಗಳು ಇದರ ಬಗ್ಗೆ ಹೆಚ್ಚಾಗಿ ಗಮನ ಹರಿಸ್ತಾರೆ. ಸದ್ಯ ಇದರ ಮೂಲಕ ವ್ಯವಹಾರ ಮಾಡುವಾಗ ಬಹುತೇಕ ಮಂದಿ ವಿದೇಶಿಯರ ಹೆಸರಿನಲ್ಲಿ ಮೋಸ ಮಾಡುವ ಜಾಲ ಇದೆ.
ಓಎಲ್ಎಕ್ಸ್ :ಜನ ಹೆಚ್ಚಾಗಿ ಬೈಕ್, ಕಾರು, ಮನೆಯ ವಸ್ತುಗಳನ್ನ ಓಎಲ್ಎಕ್ಸ್ನಲ್ಲಿ ಮಾರಾಟಕ್ಕೆ ಹಾಕ್ತಾರೆ. ಸೈಬರ್ ಖದೀಮರು ಓಎಲ್ಎಕ್ಸ್ಗಳಲ್ಲಿ ಫೇಕ್ ವಸ್ತುಗಳ ಫೋಟೊ, ಹಾಕಿ ಜಾಹಿರಾತು ನೀಡುತ್ತಾರೆ. ಕೆಲವರು ಇದನ್ನು ನಂಬಿ ಪೋಟೊ ಹಾಕಿದ ವ್ಯಕ್ತಿಗಳನ್ನ ಸಂಪರ್ಕ ಮಾಡ್ತಾರೆ. ಮೊದಲು ಆರೋಪಿಗಳು ಹಣ ಹಾಕುವಂತೆ ತಿಳಿಸಿ ನಂತರ ವಸ್ತು ನೀಡದೆ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗ್ತಾರೆ.
ಆನ್ಲೈನ್ ಶಾಪಿಂಗ್ :ಮನೆಯಲ್ಲಿ ಕಚೇರಿಯಲ್ಲಿ ಅದು ಕೂಡ ಈಗಿನ ಯುವ ಪೀಳಿಗೆಯ ಯುವಕ ಯುವತಿಯರು ತಮಗೆ ಇಷ್ಟವಾದ ಬಟ್ಟೆ, ಶೂ, ಅಗತ್ಯ ವಸ್ತುಗಳನ್ನು ಆನ್ಲೈನ್ನಲ್ಲಿ ನೋಡಿ ಖರೀದಿ ಮಾಡೊದಕ್ಕೆ ಮುಂದಾಗುತ್ತಾರೆ. ಆದರೆ ಸೈಬರ್ ಖದೀಮರು ಇಲ್ಲಿ ಕೂಡ ವಸ್ತುಗಳನ್ನು ಡೆಲಿವರಿ ಮಾಡುವುದಾಗಿ ತಿಳಿಸಿ ಹಣ ಲಪಾಟಯಿಸಿ ಮೋಸ ಮಾಡ್ತಿದ್ದಾರೆ.
ಕ್ಯೂ ಆರ್ ಕೋಡ್ ಮುಖಾಂತರ ದೋಖಾ :ಆನ್ಲೈನ್ ವಹಿವಾಟು ಆದ ಕ್ಯೂ ಆರ್ ಕೋಡ್ನಲ್ಲಿ ನಾವು ರೈಲ್ವೆ ಟಿಕೆಟ್ ಬುಕ್ಕಿಂಗ್, ಬಸ್ ಬುಕ್ಕಿಂಗ್, ವಸ್ತುಗಳ ಖರೀದಿಗಾಗಿ ಕ್ಯೂ ಆರ್ ಕೊಡ್ ಆ್ಯಪ್ ಅನ್ನು ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಬಹುದು. ಸೈಬರ್ ಖದೀಮರು ಕೆಲ ವಸ್ತುಗಳನ್ನು ನೀಡುವುದಾಗಿ ಹೇಳಿ ಒಂದು ಕ್ಯೂ ಆರ್‌ಕೋಡ್ ಲಿಂಕ್ ಕಳುಹಿಸಿ ಅಕೌಂಟ್ನಿಂದ ಎಷ್ಟೋ ಹಣ ಎಗರಿಸಿರುವ ಪ್ರಕರಣಗಳು ಬಯಲಾಗಿದೆ.
ಸೈಬರ್ ಅಪರಾಧ ಪ್ರಕರಣಗಳನ್ನು ಮಾಡೋರು ಯಾರು?:ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆಯುವ ಸೈಬರ್ ಕ್ರೈಂಗಳಲ್ಲಿ ಅತಿ ಹೆಚ್ಚು ವಿದೇಶಿ ಪ್ರಜೆಗಳ ಕೈ ಚಳಕ ಇರುತ್ತದೆ. ಯಾಕೆಂದರೆ ಆಫ್ರಿಕಾ, ಅಮೇರಿಕಾ, ನೈಜೀರಿಯಾ, ಪ್ರಜೆಗಳು ತಂತ್ರಜ್ಞಾನದಲ್ಲಿ ಬಹಳಷ್ಟು ಎಕ್ಸ್ಪರ್ಟ್ ಆಗಿರ್ತಾರೆ. ಕೆಲವರು ವೀಸಾ ಪಡೆದು ನಗರದಲ್ಲಿ ಬಂದು ವಾಸಾ ಮಾಡ್ತಾರೆ. ವಿಸಾ ಅವಧಿ ಮುಗಿದ ನಂತರ ಆನ್ಲೈನ್ ದೋಖಾ ಅಂತಹ ಕೆಲಸಕ್ಕೆ ಮುಂದಾಗುತ್ತಾರೆ. ಹಾಗೆ ಸೈಬರ್ ಖದೀಮರು ಬಹಳ ಜಾಗೃತೆಯಿಂದ ಸಣ್ಣ ಸುಳಿವು ಸಿಗದ ರೀತಿ ತಮ್ಮ ಕಾರ್ಯಮುಗಿಸುತ್ತಾರೆ. ಇಲ್ಲಿಯವರೆಗೆ ತನಿಖಾಧಿಕಾರಿಗಳಿಗೆ ಸರಿಯಾಗಿ ಮಾಹಿತಿಯನ್ನು ಕಲೆಹಾಕಲು ಸಾಧ್ಯವಾಗಿಲ್ಲ.
ಸೈಬರ್ ಠಾಣೆಯಲ್ಲಿ ಸಿಬ್ಬಂದಿ, ಎಕ್ಸ್ಪರ್ಟ್ಗಳ ಕೊರತೆ :ಬೆಂಗಳೂರು ನಗರದ ಸಿಐಡಿ ಕಚೇರಿಯ ಆವರಣದಲ್ಲಿ ಸೈಬರ್ ಕ್ರೈಂ ವಿಭಾಗ ಮಾತ್ರ ಮೊದಲು ತನಿಖೆ ನಡೆಸುತ್ತಿತ್ತು. ನಂತರ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದ ಕಾರಣ, ಪ್ರಕರಣ ಪತ್ತೆ ಹಚ್ಚಲು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತೆರೆಯಲಾಯಿತು. ಸದ್ಯ ಸರ್ಕಾರ ಸೈಬರ್ ಅಪರಾಧಗಳನ್ನ ಪತ್ತೆ ಹಚ್ಚಲು ಸಿಲಿಕಾನ್ ಸಿಟಿಯ ಎಲ್ಲಾ ಡಿಸಿಪಿಗಳ ವ್ಯಾಪ್ತಿಯಲ್ಲಿ ಒಂದೊಂದು ಸೆನ್ ಪೊಲೀಸ್ ಠಾಣೆ ಹಾಗೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳ ವ್ಯಾಪ್ತಿಯಲ್ಲಿ ಒಂದು ಠಾಣೆಗಳನ್ನು ತೆರೆಯಲಾಗಿದೆ. ಸದ್ಯ ಸೈಬರ್ ಅಪರಾಧ ಪ್ರಕರಣಗಳು ನಡೆದರೆ ಸೆನ್ ಠಾಣೆಗೆ ತೆರಳಿ ದೂರು ನೀಡಬೇಕಾಗಿದೆ.
ಮತ್ತೆ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವ ಪೊಲೀಸ್ ಠಾಣೆಗಳಲ್ಲಿ ಇರುವ ಸಿಬ್ಬಂದಿ ಸಂಖ್ಯೆ ಸೈಬರ್ ಠಾಣೆಗಳಲ್ಲಿಲ್ಲ. ಹಾಗೆ ತಂತ್ರಜ್ಞಾನದ ಮಾಹಿತಿಯನ್ನು ಅರಿತಿರುವ ಸಿಬ್ಬಂದಿಗಳ ಕೊರತೆ ಇದೆ. ಹೀಗಾಗಿ ತಂತ್ರಜ್ಞಾನದ ಮಾಹಿತಿಯನ್ನು ಕಲೆ ಹಾಕಲು ಸೈಬರ್ ಪೊಲೀಸರಿಗೆ ಒಂದೆಡೆ ಕಷ್ಟ ಆದ್ರೆ ಮತ್ತೊಂದೆಡೆ ಸೈಬರ್ ಅಪರಾಧ ಪ್ರಕರಣಗಳು ಬೇಗ ಇತ್ಯರ್ಥಗೊಳ್ಳದೆ ಹಾಗೆ ಇದೆ. ಸೈಬರ್ ಪರಿಣಿತರ ಜೊತೆ ಮಾಹಿತಿ ಕಲೆ ಹಾಕಿದಾಗ ಅವರು ಹೇಳುವ ಪ್ರಕಾರ ಸೈಬರ್ ಅಪರಾಧದಿಂದ ನಾವು ನಮ್ಮ ಎಚ್ಚರಿಕೆಯಲ್ಲಿರಬೇಕು. ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸುವವರೆಗೆ ಕಾಯಬಾರದು ಎಂದಿದ್ದಾರೆ.
ಸೈಬರ್ ವಂಚಕರಿಂದ ದೂರವಿರಬೇಕಾದರೆ ಕೆಲವು ಕ್ರಮ ಅನುಸರಿಸಿ
- ಬ್ಯಾಂಕ್ ಖಾತೆ ವಿವರ, ಎಟಿಎಂ ಪಿನ್ ಯಾರ ಜೊತೆ ಹಂಚಿಕೊಳ್ಳಬಾರದು
- ಅನಾಮಿಕ ವ್ಯಕ್ತಿಗಳಿಗೆ ಮೊಬೈಲ್ ಸಂಖ್ಯೆ ನೀಡುವಾಗ ಬಹಳ ಜಾಗೃತಿಯಾಗಿರಬೇಕು
- ಎಟಿಎಂಗೆ ಹಣ ತೆಗೆಯಲು ತೆರಳಿದಾಗ ಮೈ ಎಲ್ಲಾ ಕಣ್ಣಾಗಿರವೇಕು
- ಎಟಿಎಂನಲ್ಲಿ ಸ್ಕಿಂಮ್ಮಿಂಗ್ ಮಿಷನ್ ಇದ್ರೆ ಪೊಲೀಸರಿಗೆ ಮಾಹಿತಿ ನೀಡಬೇಕು
- ಮಾಲ್ಗಳಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಪಾಸ್ವರ್ಡ್ ನೋಟ್ ಮಾಡದಂತೆ ಎಚ್ಚರ ವಹಿಸಬೇಕು
- ಎಟಿಎಂ, ಗೂಗಲ್ ಪೇ, ಫೋನ್ ಪೇ, ಪೇಟಿಎಂ ಪಾಸ್ ವಾರ್ಡ್ ಬಹಳ ಭದ್ರವಾಗಿಡಬೇಕು
- ಆಧಾರ್ ಕಾರ್ಡ್ ಹಾಗೂ ಪ್ಯಾನ್ ವಿವರ ನೀಡುವಾಗ ಬಹಳ ಜಾಗೃತಿಯಿಂದ ಇರಬೇಕು