ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಬರ್ ಖದೀಮರ ಹಾವಳಿ ದಿನೆ ದಿನೇ ಮಿತಿ ಮಿರುತ್ತಿದೆ. ಸದ್ಯ ಗೂಗಲ್ ಪೇ ಆ್ಯಪ್ ಬಳಕೆ ಮಾಡೋರನ್ನ ಸೈಬರ್ ಖದೀಮರು ಟಾರ್ಗೆಟ್ ಮಾಡಿದ್ದಾರೆ.
ನಗರದ ಗವಿಪುರಂ ನಿವಾಸಿ ಹರೀಶ್ಗೆ ಗೂಗಲ್ ಪೇ ಸಮಸ್ಯೆಯಾಗಿದೆ. ಹೀಗಾಗಿ ಗೂಗಲ್ ಪೇ ನಲ್ಲಿರುವ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿ ಸಿಕ್ಕ ನಂಬರ್ 9901771222ಕ್ಕೆ ಕರೆ ಮಾಡಿದ್ದಾರೆ. ಆದರೆ, ಹರೀಶ್ಗೆ ಆ ನಂಬರ್ನಿಂದ ಸರಿಯಾದ ಮಾಹಿತಿ ಸಿಕ್ಕಿಲ್ಲ.
ಆದರೆ, ತಕ್ಷಣ 06291766339 ನಂಬರ್ ನಿಂದ ಅಪರಿಚಿತನೊಬ್ಬ ಹರೀಶ್ಗೆ ಕರೆ ಮಾಡಿದ್ದು, ನಿಮಗೆ ಗೂಗಲ್ ಪೇ ಸಮಸ್ಯೆ ಆಗಿದೆ ಅಲ್ವಾ. ನಾವು ಕೇಳುವ ಡಿಟೇಲ್ಸ್ ಹಾಕಿದರೆ ಸಮಸ್ಯೆ ಬಗೆಹರಿಯುತ್ತೆ ಎಂದು ಹೇಳಿದ್ದಾನೆ. ಅಪರಿಚಿತ ವ್ಯಕ್ತಿ ಕೇಳಿದ ಡೆಬಿಟ್ ಕಾರ್ಡ್ ನಂಬರ್, ಪಿನ್ ಕೋಡ್, ಒಟಿಪಿ, ನೀಡಿದ್ದಾರೆ. ನಂತರ ಅಪರಿಚಿತ ವ್ಯಕ್ತಿ ಮತ್ತೆ ಕರೆ ಮಾಡಿ ನಿಮ್ಮ ಗೂಗಲ್ ಪೇ ಸರಿಯಾಗಿದೆ. ಈಗ ಓಪನ್ ಮಾಡಿ ಎಂದು ಕಾಲ್ ಮಾಡಿ ಕಟ್ ಮಾಡಿದ್ದಾನೆ. ಕಾಲ್ ಕಟ್ ಆಗಿ ನೋಡುತ್ತಿದ್ದಂತೆ ಅಕೌಂಟ್ನಲ್ಲಿರುವ 24,500 ರೂ ಮಾಯವಾಗಿದೆ.
ಅಕೌಂಟ್ ಹಣ ಖಾಲಿಯಾಗಿದ್ದನ್ನ ನೋಡಿ ಅದೇ ನಂಬರ್ಗೆ ಕರೆ ಮಾಡಿದರೆ ನಂಬರ್ ಸ್ವಿಚ್ಡ್ ಆಪ್ ಆಗಿದೆ. ತಕ್ಷಣ ದಕ್ಷಿಣ ವಿಭಾಗದ ಸಿಇಎನ್ ಠಾಣೆಗೆ ಹರೀಶ್ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.