ಬೆಂಗಳೂರು : ಇಷ್ಟು ದಿನ ಡೆಬಿಟ್ ಕಾರ್ಡ್, ಒಎಲ್ ಎಕ್ಸ್, ಒಟಿಪಿ, ಮ್ಯಾಟ್ರಿಮೊನಿಯಲ್ ಹೀಗೆ ಹಲವು ರೀತಿಯ ಮೂಲಕ ಸೈಬರ್ ಖದೀಮರು ಮೋಸ ಮಾಡೋದನ್ನ ನೋಡ್ತಿದ್ವಿ. ಆದ್ರೆ, ಇದೀಗ ವರ್ಕ್ ಫ್ರಂ ಹೋಂ ಮಾಡುತ್ತಿರುವವರ ನೆಟ್ವರ್ಕ್ ಮೇಲೂ ಸೈಬರ್ ಹ್ಯಾಕರ್ಸ್ಗಳ ಕಣ್ಣು ಬಿದ್ದಿದೆ. ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಒಂದೊಂದೇ ಪ್ರಕರಣ ದಾಖಲಾಗ್ತಿವೆ.
ಲಾಕ್ಡೌನ್ ಪರಿಣಾಮ ಈಗಲೂ ಹಲವಾರು ಮಂದಿ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೂಡ ಕೆಲ ಖಾಸಗಿ ಕಂಪನಿಗಳು ತಮ್ಮ ಎಲ್ಲಾ ಕೆಲಸಗಾರರಿಗೆ ವರ್ಕ್ ಫ್ರಂ ಹೋಮ್ ಮುಂದುವರೆಸಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಸೈಬರ್ ಹ್ಯಾಕರ್ಸ್‌ಗಳು, ಡಾಟಾ ಹ್ಯಾಕ್ ಮಾಡೋಕೆ ಮುಂದಾಗಿದ್ದಾರೆ. ವೈಫೈ ನೆಟ್ವರ್ಕ್ ಹ್ಯಾಕ್ ಮಾಡುವ ಮೂಲಕ ಅವರ ಡಾಟಾ ಅಂದರೆ ಅಕೌಂಟ್ ಮಾಹಿತಿ ಪಡೆದು ಹಣ ದೋಚುತ್ತಿದ್ದಾರೆ.
ವರ್ಕ್ ಫ್ರಂ ಹೋಮ್ ಸೈಬರ್ ಹ್ಯಾಕರ್ಸ್ಗೆ ಅಡ್ವಾಂಟೇಜ್ ಹೇಗೆ? :ಸಾಮಾನ್ಯವಾಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ರಿಸ್ಟ್ರಿಕ್ಟೆಟ್ ಹಾಗೂ ಸೆಕ್ಯೂರ್ಡ್ ವೈಫೈ ಇರುತ್ತೆ. ಹಾಗೂ ಸೈಬರ್ ಸೆಕ್ಯೂರಿಟಿ ಫಯರ್ ವಾಲ್ ಇರುತ್ತೆ. ಆದ್ರೆ, ಮನೆಯಲ್ಲಿ ಕೂತು ಕೆಲಸ ಮಾಡುವಾಗ ಕಂಪನಿಯಲ್ಲಿದ್ದಷ್ಟು ಸೆಕ್ಯೂರಿಟಿ ಇರಲ್ಲ. ವರ್ಕ್ ಮಾಡುವಾಗ ಎಷ್ಟು ನೆಟ್ವರ್ಕ್ ಬೇಕು ಅಷ್ಟಿರುತ್ತೆ.