ಕರ್ನಾಟಕ

karnataka

ETV Bharat / state

ಬೆಂಗಳೂರಿನ ನೂತನ ಪೊಲೀಸ್‌ ಕಮಿಷನರ್​ಗೆ ಸೈಬರ್ ಸವಾಲು: ತಜ್ಞರು ಏನಂತಾರೆ? - ಸೈಬರ್ ಎಕ್ಸ್​ಪರ್ಟ್ ಶುಭಮಂಗಳ

ಕೊರೊನಾ ಭೀತಿಯ ನಡುವೆ ಸೈಬರ್​ ವಂಚಕರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಜನ ಲಾಕ್​ಡೌನ್​ ಸಮಯದಲ್ಲಿ ಇಂಟರ್​ನೆಟ್​ ಬಳಕೆಯನ್ನು ಹೆಚ್ಚಿಸಿಕೊಂಡಿದ್ದೇ ಕ್ರಿಮಿನಲ್ಸ್‌ಗೆ ವರದಾನವಾಗಿಬಿಟ್ಟಿದೆ. ಇದು ನೂತನವಾಗಿ ಆಗಮಿಸಿದ ಬೆಂಗಳೂರು ನಗರ ಪೊಲೀಸ್ ಕಮಿಷನರ್​ಗೆ ಸವಾಲಾಗಿ ಪರಿಣಮಿಸಿದೆ.

Cyber
ಸೈಬರ್ ಕ್ರೈಂ

By

Published : Aug 2, 2020, 6:44 PM IST

ಬೆಂಗಳೂರು: ಕೊರೊನಾ ವೈರಸ್ ಸೋಂಕು ನಿಯಂತ್ರಣದ ಜೊತೆಗೆ ಬಹಳಷ್ಟು ಸವಾಲುಗಳನ್ನು ನೂತನ ನಗರ ಪೊಲೀಸ್ ಕಮಿಷನರ್ ಕಮಲ್ ಪಂಥ್ ಎದುರಿಸಲಿದ್ದಾರೆ.

ಸೈಬರ್ ಕ್ರೈಂ ತಡೆಗಟ್ಟುವ ಸಲುವಾಗಿ ಸಿಇಎನ್ ಠಾಣೆಗಳನ್ನು ನಿರ್ಮಿಸಲಾಗಿತ್ತು. ಸದ್ಯ ತಲಾ ಒಂದೊಂದು ಠಾಣೆಯಲ್ಲಿ 600 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಬಗೆಹರಿದಿರುವ ಕೇಸ್​ಗಳು ತೀರಾ ಕಡಿಮೆ. ಒಂದು ಆಯಾಮದಲ್ಲಿ ಪ್ರಕರಣಗಳ ತನಿಖೆ ನಡಿಯುತ್ತಿದ್ರೆ, ಮತ್ತೊಂದು ರೀತಿಯಲ್ಲಿ ಖದೀಮರು ಜನರಿಗೆ ಮೋಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೈಬರ್ ಕ್ರೈಂ ತಡೆಗಟ್ಟಲು ಮೊದಲ ಆದ್ಯತೆ ನೀಡುತ್ತೇನೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಸೈಬರ್ ಕ್ರೈಂ ಕುರಿತಾದ ಮಾಹಿತಿ ನೀಡಿದ ಸೈಬರ್ ತಜ್ಞೆ

ಸದ್ಯ ಇರುವ ಕೇಸ್​ಗಳೇ ಪೊಲೀಸರಿಗೆ ದೊಡ್ಡ ಸವಾಲುಗಳನ್ನು ಹೊತ್ತು ತಂದಿವೆ. ಈ ಕುರಿತಾಗಿ ಸರ್ಕಾರ ಕೂಡ ತಜ್ಞರ ಬಳಿ ಸಲಹೆ ತೆಗೆದುಕೊಳಲು ಮುಂದಾಗಿದೆ. ಆದ್ರೆ ಅಂದುಕೊಂಡಷ್ಟು ಸುಲಭವಾಗಿ ಸೈಬರ್ ಅಪರಾಧಗಳನ್ನು ಸುಲಭವಾಗಿ ಹೋಗಲಾಡಿಸಬಹುದೇ? ಇಂತಹ ಪ್ರಶ್ನೆಗೆ ಸೈಬರ್ ಎಕ್ಸ್​ಪರ್ಟ್ ಶುಭಮಂಗಳ ಉತ್ತರಿಸಿದ್ದಾರೆ.

ಶುಭಮಂಗಳ ಅವರು ಹೇಳುವ ಪ್ರಕಾರ, ಕೊರೊನಾ ವೈರಸ್ ಸಮಯ ಸೈಬರ್ ಕ್ರೈಂ ಕ್ರಿಮಿನಲ್ಸ್‌ಗೆ ವರದಾನವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಶಾಪಿಂಗ್ ಪ್ರತಿಯೊಂದನ್ನೂ ಇಂಟರ್ನೆಟ್ ಮೂಲಕ ಉಪಯೋಗಿಸುತ್ತಿದ್ದೇವೆ. ಆದ್ರೆ ಬಹುತೇಕ ಜನರಿಗೆ ಜಾಗರೂತಕತೆಯ ಇಂಟರ್​ನೆಟ್‌ ಬಳಕೆ ತಿಳಿದಿಲ್ಲ. ಹೀಗಾಗಿ ಇದನ್ನು ಕಳ್ಳರು ದಾಳವಾಗಿ ಬಳಸಿಕೊಂಡು ಸೈಬರ್ ಬಲೆ ಬೀಸುತ್ತಿದ್ದಾರೆ.

ಜನರ ವೀಕ್ನೆಸ್ ಅಪರಾಧಿಗಳಿಗೆ ಅವಕಾಶವಾಗಿದೆ. ಇದರಿಂದ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಕಮಿಷನರ್ ಮೂರು ವಿಚಾರದಿಂದ ಸೈಬರ್ ಕ್ರೈಂ ತಡೆಗಟ್ಟಬಹುದು. ಸಾಮಾನ್ಯ ಜನಕ್ಕೆ ಇಂಟರ್ನೆಟ್​ನ ಆಗು-ಹೋಗುಗಳನ್ನು ತಿಳಿ ಹೇಳಬೇಕು, ಜನರಲ್ಲಿ ತಿಳುವಳಿಕೆ ಮೂಡಿಸಬೇಕು, ಪಾಂಪ್ಲೆಟ್ ಅಥವಾ ಮಾಧ್ಯಮಗಳ ಮೂಲಕ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಐಟಿ ಆ್ಯಕ್ಟ್​ ಅನ್ನು ಇಫೆಕ್ಟಿವ್ ಆಗಿ ಬಲಪಡಿಸಬೇಕು, ಪ್ರತಿಯೊಂದು ಸೈಬರ್ ಕ್ರೈಂಗೂ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆಯಾಗಬೇಕು. ಸೈಬರ್ ಭದ್ರತೆ ಬಗ್ಗೆ ಎಲ್ಲಾ ಸಿಬ್ಬಂದಿಗೆ ಅರಿವು ಮೂಡಿಸಲೇಬೇಕು. ಇದರಿಂದ ಸೈಬರ್ ಕ್ರೈಂ ಕೊಂಚ ಮಟ್ಟಿಗೆ ಕಡಿಮೆಯಾಗುತ್ತೆ ಅಂತಾರೆ ತಜ್ಞೆ ಶುಭಮಂಗಳ.

ABOUT THE AUTHOR

...view details