ಕರ್ನಾಟಕ

karnataka

ETV Bharat / state

ಸೈಬರ್ ಕ್ರೈಂ ತಡೆಗೆ ಪರಿಣಿತರ ತಂಡ ಸಜ್ಜು: ಈಟಿವಿ ಭಾರತದೊಂದಿಗೆ ಅನಂತ್ ಪ್ರಭು ಮಾತು

ಸೈಬರ್​ ಎಕ್ಸ್​ಪರ್ಟ್​ ಅನಂತ್ ಪ್ರಭು ಅವರು ಗೃಹ ಸಚಿವ ಬಸವರಾಜ್ ಬೊಮ್ಮಯಿ ಅವರನ್ನ ಭೇಟಿಯಾಗಿದ್ದು, ರಾಜ್ಯದಲ್ಲಿ ನಡೆಯುವ ಸೈಬರ್ ಅಪರಾಧ ಪ್ರಕರಣಗಳನ್ನ ತಡೆಗಟ್ಟುವ ಕುರಿತು ಚರ್ಚೆ ನಡೆಸಿದ್ದಾರೆ.

By

Published : Jul 31, 2020, 8:57 AM IST

ಈಟಿವಿ ಭಾರತದೊಂದಿಗೆ ಅನಂತ್ ಪ್ರಭು ಮಾತು
ಈಟಿವಿ ಭಾರತದೊಂದಿಗೆ ಅನಂತ್ ಪ್ರಭು ಮಾತು

ಬೆಂಗಳೂರು:ರಾಜ್ಯದಲ್ಲಿ ಸೈಬರ್ ಅಪರಾಧ ‌ಪ್ರಕರಣ ದಿನೇ ದಿನೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೈಬರ್ ಪರಿಣಿತರ ತಂಡ ರಚನೆ ಮಾಡಲು ನಿರ್ಧಾರ ಮಾಡಿದ್ದಾರೆ‌. ಇನ್ನು ಈ ಕುರಿತಾಗಿ ಸೈಬರ್​ ಎಕ್ಸ್​ಪರ್ಟ್​ ಅನಂತ್ ಪ್ರಭು ಅವರು ಗೃಹ ಸಚಿವರನ್ನು ಭೇಟಿಯಾಗಿದ್ದು, ರಾಜ್ಯದಲ್ಲಿ ನಡೆಯುವ ಸೈಬರ್ ಅಪರಾಧ ಪ್ರಕರಣಗಳನ್ನ ತಡೆಗಟ್ಟುವ ಕುರಿತು ಚರ್ಚೆ ನಡೆಸಿದ್ದಾರೆ.

ಇನ್ನು ಈಟಿವಿ ಭಾರತದ ಜೊತೆ ವಿಶೇಷ ಸಂದರ್ಶನದಲ್ಲಿ ಮಾತಾನಾಡಿದ ಅನಂತ್ ಪ್ರಭು, ಸೈಬರ್ ಅಪರಾಧ ಪ್ರಕರಣ ಹೆಚ್ಚಾಗಿದೆ. ಏಕೆಂದರೆ ಲ್ಯಾಪ್​ಟಾ​ಪ್‌ ಹಿಡಿದುಕೊಂಡು ಸೈಬರ್ ಕ್ರೈಂಗಳಂತಹ ಕೆಲಸಗಳನ್ನು ಬಹಳ ಜನ ಜಾಣತನದಿಂದ ಮಾಡುತ್ತಿದ್ದಾರೆ. ಈಗಾಗಲೇ ಈ ಕುರಿತು ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಸೈಬರ್​ ಕ್ರೈಂ ತನಿಖೆಗೆ ಬೇಕಾದ ಸಹಾಯ ಮಾಡುತ್ತೇನೆ. ಈಗಾಗಲೇ ಪೊಲೀಸರಿಗೆ ತರಬೇತಿಯೂ ನೀಡಿದ್ದೇನೆ ಎಂದರು.

ಈಟಿವಿ ಭಾರತದೊಂದಿಗೆ ಅನಂತ್ ಪ್ರಭು ಮಾತು

ಸದ್ಯ ಸೈಬರ್ ಕ್ರೈಂ ಪ್ರಕರಣಗಳು ಕೊರೊನಾ ಸಂದರ್ಭದಲ್ಲೇ ಹೆಚ್ಚಾಗಿದೆ. ಪ್ರಧಾನಿ ಮೋದಿ ಆರೋಗ್ಯ ಸೇತು ಆ್ಯಪ್ ಪರಿಚಯ ಮಾಡಿದ್ದರು. ಆದರೆ, ಕೆಲ ದೇಶದ ಸೈಬರ್ ಖದೀಮರು ಇದನ್ನೇ ಬಂಡವಾಳವಾಗಿಟ್ಟುಕೊಂಡು ಭಾರತದ ಗೌಪ್ಯ ವಿಚಾರಗಳನ್ನು ಕಲೆ ಹಾಕಲು ಪ್ರಯತ್ನಿಸಿತ್ತು. ಇನ್ನು ಅಮೆರಿಕ, ಪಾಕಿಸ್ತಾನ, ಚೀನಾ ಹೀಗೆ ಅನೇಕ ದೇಶಗಳಲ್ಲಿ ಕುಳಿತುಕೊಂಡು ಸೈಬರ್​ ಖದೀಮರು ಆ್ಯಪ್​​​ ಹ್ಯಾಕ್​ ಮಾಡಿದ್ದರು. ಇನ್ನು ದೇಶದಲ್ಲಿ ಅನೇಕರು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುತ್ತಾರೆ. ಈ ಮೂಲಕ ಸೈಬರ್​ ಖದೀಮರು ಫೋಟೋಗಳನ್ನು ಕದ್ದು, ಅಶ್ಲೀಲ ವೆಬ್​ಸೈಟ್​ಗಳಿಗೆ ಅಪ್ಲೋಡ್​​ ಮಾಡುತ್ತಾರೆ ಎಂದರು.

ಇಂತಹ ಚಟುವಟಿಕೆಗಳಿಂದ ನಾವು ದೂರವಿರಬೇಕು. ಪ್ರತಿಯೊಂದು ವಿಚಾರದಲ್ಲೂ ಜಾಗರೂಕರಾಗಬೇಕು. ಇನ್ನು 13 ಭಾಷೆಯಲ್ಲಿ ಸಮಾಜಕ್ಕೆ ಮಾಹಿತಿ ನೀಡಲು ಮುಂದಾಗಿರುವ ರಾಮೋಜಿ ಗ್ರೂಪ್​ನ ಈಟಿವಿ ಭಾರತಕ್ಕೆ ಹ್ಯಾಟ್ಸ್​ಆಪ್​​​ ಎಂದಿದ್ದಾರೆ. ಈ ಮಾಧ್ಯಮದ ಮೂಲಕ ಸೈಬರ್​ ಕ್ರೈಂ ತಡೆಗಟ್ಟುವ ಕುರಿತು ಮಾಹಿತಿ ನೀಡಬಹುದು ಎಂದರು.

ABOUT THE AUTHOR

...view details