ಬೆಂಗಳೂರು:ಹೆಚ್ಚಾಗುತ್ತಿರುವ ಸೈಬರ್ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ನಗರದಲ್ಲಿ 4 ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ಶೀಘ್ರದಲ್ಲಿಯೇ ಆರಂಭವಾಗಲಿವೆ.
ನಗರದಲ್ಲಿ 4 ಸೈಬರ್ ಕ್ರೈಂ ಠಾಣೆ ನಗರದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಮಾತ್ರ ಸೈಬರ್ ಕ್ರೈಂ ಠಾಣೆ ಇದ್ದು, ಪ್ರತಿನಿತ್ಯ 40ರಿಂದ 50 ಸೈಬರ್ ಕ್ರೈಂ ದೂರುಗಳು ದಾಖಲಾಗುತ್ತಿವೆ. ಅಲ್ಲದೆ ಸಿಬ್ಬಂದಿ ಕೊರತೆ ಎದುರಿಸಲಾಗುತ್ತಿದೆ.
ಎಲ್ಲಾ ಡಿಸಿಪಿ ವ್ಯಾಪ್ತಿಯಲ್ಲಿ 8 ಸೈಬರ್ ಕ್ರೈಂ ಠಾಣೆ ಪ್ರಾರಂಭಿಸಲು ವಿಭಾಗದ ಡಿಸಿಪಿಯಾಗಿದ್ದ ಅನುಚೇತ್, ಡಿಜಿ ನೀಲಮಣಿ ಎನ್. ರಾಜು ಅವರಿಗೆ ಪತ್ರ ಬರೆದಿದ್ದರು. ಡಿಜಿಪಿ ನೀಲಮಣಿ ಎನ್. ರಾಜು ಅವರು ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 4 ಸೈಬರ್ ಕ್ರೈಂ ಠಾಣೆ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ ಎನ್ನಲಾಗಿದೆ.
ನಿತ್ಯ ಆನ್ಲೈನ್ ವಂಚನೆ, ಎಟಿಎಂ ವಂಚನೆ ಹಾಗೆ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ವಂಚಕರಲ್ಲಿ ಆಫ್ರಿಕನ್, ನೈಜೀರಿಯಾ ಸೇರಿದಂತೆ ವಿವಿಧ ದೇಶಗಳ ಯುವಕರು ಭಾಗಿಯಾಗಿದ್ದಾರೆ. 2019ರ ಜನವರಿಯಿಂದ ಇಲ್ಲಿಯವರೆಗೆ ಬರೋಬ್ಬರಿ 7500 ಎಫ್ಐಆರ್ ದಾಖಲಾಗಿವೆ.