ಕರ್ನಾಟಕ

karnataka

ETV Bharat / state

ತನ್ನೊಂದಿಗೆ ಸಲುಗೆ ಬೆಳೆಸಿದ ಯುವತಿ ಫೋಟೊ ಶೇರ್​... ಆರೋಪಿ ಅಂದರ್​ - cyber station

ಯುವತಿಯ ಖಾಸಗಿ(ಅಶ್ಲೀಲ) ಫೋಟೊಗಳನ್ನು ಬೇರೆಯವರಿಗೆ ಶೇರ್​​ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸೈಬರ್​ ಕ್ರೈಂ ಪೊಲೀಸರು ಯಾಶಸ್ವಿಯಾಗಿದ್ದಾರೆ.

ಆರೊಪಿ ಕಿರಣ್

By

Published : Aug 15, 2019, 1:45 PM IST

Updated : Aug 15, 2019, 3:51 PM IST

ಬೆಂಗಳೂರು:ಖಾಸಗಿ ಕ್ಷಣಗಳ ಫೋಟೊಗಳನ್ನು ಅನ್ಯರಿಗೆ ಕಳುಹಿಸಿದ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಕಿರಣ್​ ಎಂಬಾತ ಬಂಧಿತ. ಕಳೆದ ಎರಡು ವರ್ಷಗಳಿಂದ ಬಾಣಸವಾಡಿಯ ಹೇರ್ ಸಲೂನ್ ನಲ್ಲಿ ಯುವತಿ ಹಾಗೂ ಆರೋಪಿ ಕಿರಣ್ ಒಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದರು. ಹೀಗಾಗಿ ಕಳೆದ ಎರಡು ತಿಂಗಳಿಂದ ಕಿರಣ್​ ಹಾಗೂ ಯುವತಿ ಒಟ್ಟಾಗಿ ಸಲುಗೆಯಿಂದ ಇರುವ ಫೋಟೊಗಳನ್ನ ಮೊಬೈಲ್​ನಲ್ಲಿ ಸೆರೆಹಿಡಿದಿದ್ದರು ಎನ್ನಲಾಗ್ತಿದೆ.

ಯುವತಿಯ ಖಾಸಗಿ ಚಿತ್ರ ಶೇರ್ ಮಾಡಿದ್ದ ಆರೋಪಿ ಅಂದರ್​

ಆದ್ರೆ, ಇತ್ತೀಚೆಗೆ ಕಾರಣಾಂತರಗಳಿಂದ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಆರೋಪಿ ಜೊತೆ ಯುವತಿ ಸಂಪರ್ಕ‌ ಕಡಿತಗೊಳಿಸಿದ್ದಳು. ಇದರಿಂದ ರೊಚ್ಚಿಗೆದ್ದ ಕಿರಣ್​ ಯುವತಿಯ ಖಾಸಗಿ ಕ್ಷಣಗಳ ಫೋಟೊಗಳನ್ನ ಬೇರೆಯವರಿಗೆ ರವಾನಿಸಿದ್ದನಂತೆ. ಯುವಕನ ಈ ವರ್ತನೆಯಿಂದ ನೊಂದ ಯುವತಿ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಳು. ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Last Updated : Aug 15, 2019, 3:51 PM IST

ABOUT THE AUTHOR

...view details