ಬೆಂಗಳೂರು:ಮಗಳನ್ನು ಮದುವೆ ಮಾಡಿಸಿ ಕೊಡಲು ನಿರಾಕರಿಸಿದ ಕಾರಣ ತಾಯಿ-ಮಗಳ ಫೋಟೋ ಹಾಗು ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪಿಯನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಮೂಲದ ಅವಿನಾಶ್ ಬಂಧಿತ ಆರೋಪಿ. ಈತ ಮಹಿಳೆಯೊಬ್ಬರ ಜೊತೆ ಸ್ನೇಹ ಬೆಳೆಸಿ ಆಕೆಯ ಮಗಳನ್ನು ಮದುವೆ ಮಾಡಿಸಿಕೊಡುವಂತೆ ಪೀಡಿಸುತ್ತಿದ್ದನಂತೆ. ಇದಕ್ಕೆ ಮಹಿಳೆ ಒಪ್ಪದೇ ಇದ್ದಾಗ, ತಾಯಿ-ಮಗಳ ಫೋಟೋ, ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿನ ಟ್ರೋಲ್ ಪೇಜ್‌ಗೆ ಅಪ್ಲೋಡ್ ಮಾಡಿದ್ದಾನೆ.