ಬೆಂಗಳೂರು: ಸದ್ಯ ಸೈಬರ್ ಖದೀಮರ ಹಾವಳಿ ಹೆಚ್ಚಾಗಿದ್ದು, ವಿವಿಧ ರೀತಿಯಲ್ಲಿ ಜನರಿಗೆ ಟೋಪಿ ಹಾಕುತ್ತಿದ್ದಾರೆ. ಫೇಸ್ಬುಕ್ನಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿ ಒಳ್ಳೆಯ ತಳಿಯ ನಾಯಿ ಮಾರಾಟ ಮಾಡಲಾಗುವುದು ಎಂದು ಪೋಸ್ಟ್ ಹಾಕಿದ್ದರು. ನಗರದ ನಿಖಿಲ್ ಕುಮಾರ್ ಎಂಬುವರು ಪೋಸ್ಟ್ ನೋಡುತ್ತಿದ್ದಂತೆ ಸೈಬರ್ ಖದೀಮರಿಗೆ ಮೆಸ್ಸೇಜ್ ಮಾಡಿ ಈ ಶ್ವಾನದ ಬಗ್ಗೆ ವಿಚಾರಿಸಿದ್ದಾರೆ.
ನಾಯಿಯನ್ನು ಖರೀದಿಸಲು ಮುಂದಾದ ನಿಖಿಲ್, ವಂಚಕರ ಬಳಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸೈಬರ್ ಖದೀಮರು ನಾವು ಅನ್ಯ ರಾಜ್ಯದವರು, ನಿಮಗೆ ಶ್ವಾನ ನೀಡುತ್ತೇವೆ. ನಮ್ಮ ಬಳಿ ಗೋಲ್ಡನ್ ರಿಟ್ರೀವರ್ ನಾಯಿ ಇದೆ ಎಂದಿದ್ದಾರೆ. ಅನ್ಯ ರಾಜ್ಯ ಎಂದು ಹೇಳಿದ ಕಾರಣ ನಿಖಿಲ್ ಆಧಾರ್ ಕಾರ್ಡ್ ಕಳುಹಿಸಲು ಹೇಳಿದ್ದಾರೆ. ಅದನ್ನೂ ಫೇಕ್ ಮಾಡಿದ್ದ ಕಳ್ಳರು, ನಕಲಿ ದಾಖಲೆಯನ್ನು ಕಳುಹಿಸಿದ್ದಾರೆ.