ಕರ್ನಾಟಕ

karnataka

By

Published : Oct 22, 2020, 8:47 PM IST

ETV Bharat / state

ಕಸ ನಿರ್ವಹಣೆಗೆ ಸಿ.ವಿ ರಾಮನ್ ನಗರ ಮಾದರಿ: ರಸ್ತೆಗಳಲ್ಲಿ ರಾತ್ರಿ ಹೊತ್ತೂ ಕಸ ಸಂಗ್ರಹ

ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರಾಗಿರುವ ಜೊತೆಗೆ, ವಾರ್ಡ್ 57, ಸಿ.ವಿ ರಾಮನ್ ನಗರಕ್ಕೆ ನೋಡಲ್ ಅಧಿಕಾರಿ ಆಗಿರುವ ರಂದೀಪ್ ಅವರು ವಾರ್ಡ್​ ಕಸಮುಕ್ತ ಮಾಡುವ ಮೂಲಕ ಮಾದರಿ ವಾರ್ಡ್​​ ಆಗಿ ಪರಿವರ್ತಿಸುತ್ತಿದ್ದಾರೆ.

cv-raman-nagar
ಸಿ.ವಿ ರಾಮನ್ ನಗರ

ಬೆಂಗಳೂರು:ಮನೆಗಳಿಂದ ಬೆಳಗಿನ ಸಮಯದಲ್ಲಿ ಹಾಗೂ ವಾಣಿಜ್ಯ ರಸ್ತೆಗಳಲ್ಲಿ ರಾತ್ರಿ ಹೊತ್ತು ಕಸ ಸಂಗ್ರಹಿಸುವ ಮೂಲಕ ಸಿ.ವಿ ರಾಮನ್ ನಗರ ವಾರ್ಡ್ ​ಅನ್ನು ಕಸಮುಕ್ತವನ್ನಾಗಿ ಮಾಡಲು ಪಾಲಿಕೆ ಅಧಿಕಾರಿಗಳು ಪಣ ತೊಟ್ಟಿದ್ದಾರೆ.

ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರಾಗಿರುವ ಜೊತೆಗೆ, ವಾರ್ಡ್ 57, ಸಿ.ವಿ ರಾಮನ್ ನಗರಕ್ಕೆ ನೋಡಲ್ ಅಧಿಕಾರಿಯಾಗಿರುವ ರಂದೀಪ್ ಅವರ ವಾರ್ಡ್​ ಅನ್ನು ಕಸಮುಕ್ತ ಮಾಡುವ ಮೂಲಕ ಮಾದರಿ ವಾರ್ಡ್​​ ಆಗಿ ಪರಿವರ್ತಿಸುತ್ತಿದ್ದಾರೆ.

ವಾಣಿಜ್ಯ ಪ್ರದೇಶಗಳಲ್ಲಿ ರಾತ್ರಿ ಹೊತ್ತಿನಲ್ಲಿ ಕಸ ಸಂಗ್ರಹಿಸುವ ಮೂಲಕ ಯಾರೂ ಹೊರಗೆ ಕಸ ಎಸೆಯದಂತೆ ನೋಡಿಕೊಳ್ಳುತ್ತಿದ್ದಾರೆ. ಇದೇ ಪ್ರಯೋಗವನ್ನು ಇತರ ವಾರ್ಡ್​ಗಳಲ್ಲೂ ಮಾಡಲು ತಿಳಿಸಲಾಗಿದೆ ಎಂದು ರಂದೀಪ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಈ ಟಿವಿ ಭಾರತದೊಂದಿಗೆ ಮಾತನಾಡಿದ ನೋಡಲ್​ ಅಧಿಕಾರಿ ರಂದೀಪ್​

ಪ್ರತ್ಯೇಕ ಖರ್ಚಿಲ್ಲದೇ, ಅದೇ ಗುತ್ತಿಗೆದಾರರ ವಾಹನಗಳ ಪೈಕಿ ಎರಡು ಆಟೋಗಳನ್ನು ರಾತ್ರಿಹೊತ್ತಲ್ಲಿ ವಾಣಿಜ್ಯ ರಸ್ತೆಗಳಲ್ಲಿ ಕಸ ಸಂಗ್ರಹಿಸಲು ತಿಳಿಸಲಾಗಿದೆ. ಇದರಿಂದ ವ್ಯಾಪಾರಸ್ಥರ ರಾತ್ರಿ ವ್ಯಾಪಾರ ಮುಗಿದ ಬಳಿಕ ರಸ್ತೆ ಬದಿ ಕಸ ಎಸೆಯುವುದನ್ನು ತಡೆಯಬಹುದು. ಹಾಗೆಯೆ ಮಾರ್ಷಲ್​​​ಗಳು ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಕಟ್ಟುನಿಟ್ಟಾಗಿ ದಂಡ ವಿಧಿಸಲಾಗ್ತಿದೆ.

ಈ ವಾರ್ಡ್​ನಲ್ಲಿ ಕಸ ಎಸೆಯುತ್ತಿದ್ದ 62 ವಾಣಿಜ್ಯ ಅಂಗಡಿಗಳಿಗೆ 8.48 ಲಕ್ಷ ರೂ. ದಂಡ ವಿಧಿಸಲಾಗಿದೆ. ಜೊತೆಗೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ, ಕಸ ವಿಂಗಡಣೆ ಮಾಡದೇ ಇರುವ, ಹೋಟೆಲ್, ರೆಸ್ಟೋರೆಂಟ್, ಕಾಫಿ ಬಾರ್​ಗಳು, ಸೂಪರ್ ಮಾರ್ಕೆಟ್, ಮಾಲ್​ಗಳಿಗೂ ದಂಡ ವಿಧಿಸಲಾಗಿದೆ. ಬಿಬಿಎಂಪಿ ಸರಿಯಾಗಿ ಕಸ ಸಂಗ್ರಹ ಮಾಡುತ್ತಿಲ್ಲ ಎಂದು ಉದ್ಯಮಿಗಳು ದೂರಿದ ಹಿನ್ನಲೆ ಎರಡು ಹೊತ್ತು ಕಸದ ಗಾಡಿಗಳನ್ನು ಕಳುಹಿಸಿ ಕಸ ಸಂಗ್ರಹಿಸಲಾಗುತ್ತಿದೆ ಎಂದು ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.

ABOUT THE AUTHOR

...view details