ಕರ್ನಾಟಕ

karnataka

ETV Bharat / state

ಲಂಚ ಸ್ವೀಕಾರ ಸಾಬೀತು.. ಕಸ್ಟಮ್ಸ್ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ - ಬೆಂಗಳೂರು ಸುದ್ದಿ 2020

ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಸಿಬಿಐ ಅಧಿಕಾರಿಗಳು 2015ರ ಅಕ್ಟೋಬರ್ ತಿಂಗಳಲ್ಲಿ ಇಬ್ಬರನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು..

ಸಿಬಿಐ ವಿಶೇಷ ಕೋರ್ಟ್​
ಸಿಬಿಐ ವಿಶೇಷ ಕೋರ್ಟ್​

By

Published : Dec 10, 2020, 8:22 PM IST

ಬೆಂಗಳೂರು :ಸಿಂಗಾಪುರದಿಂದ ತರಲಾಗಿದ್ದ 15 ಲ್ಯಾಪ್​ಟಾಪ್​ಗಳನ್ನ ಕಸ್ಟಮ್ಸ್ ಡ್ಯೂಟಿ ವಿಧಿಸದೆ ಬಿಡುಗಡೆ ಮಾಡಲು 45 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಸ್ಟಮ್ಸ್ ಅಧೀಕ್ಷಕ ಸೇರಿ ಮತ್ತೊಬ್ಬರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಪ್ರಕರಣಗಳ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಧಾನ ಕಸ್ಟಮ್ಸ್ ಕಮಿಷನರ್ ಕಚೇರಿಯಲ್ಲಿ ಕಸ್ಟಮ್ಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ ವಿ ಶ್ರೀನಿವಾಸ್ ಪ್ರಸಾದ್ ಮತ್ತು ಹವಾಲ್ದಾರ್ ಕೆಲಸ ಮಾಡುತ್ತಿದ್ದ ಎ ಲೂರ್ದ್ ಪ್ರಭು ಶಿಕ್ಷೆಗೆ ಒಳಗಾದವರು.

ಇದನ್ನು ಓದಿ: ರೈಲಿಗೆ ಸಿಲುಕಿ ಅಪರಿಚಿತ ಮಹಿಳೆ ಸಾವು

ಟಿ. ಶಿವಕುಮಾರ್ ಎಂಬುವರು ಸಿಂಗಾಪುರದಿಂದ 15 ಲ್ಯಾಪ್​ಟಾಪ್ ತಂದಿದ್ದರು. ಕಸ್ಟಮ್ಸ್ ಅಧಿಕಾರಿಯಾಗಿದ್ದ ಶ್ರೀನಿವಾಸ್ ಪ್ರಸಾದ್ ಲ್ಯಾಪ್​ಟಾಪ್ ತೆಗೆದುಕೊಂಡು ಹೊರಹೋಗ್ಬೇಕಾದ್ರೆ 1.62 ಲಕ್ಷ ಕಸ್ಟಮ್ಸ್ ಡ್ಯೂಟಿ ಕಟ್ಟಬೇಕು. ಇಲ್ಲದಿದ್ದರೆ 1 ಲಕ್ಷ ಹಣ ಎರಡು ಲ್ಯಾಪ್‌ಟಾಪ್ ನೀಡಬೇಕೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಮಾತುಕತೆ ಬಳಿಕ 45 ಸಾವಿರಕ್ಕೆ ಒಪ್ಪಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಸಿಬಿಐ ಅಧಿಕಾರಿಗಳು 2015ರ ಅಕ್ಟೋಬರ್ ತಿಂಗಳಲ್ಲಿ ಇಬ್ಬರನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಕೆ ಎಸ್ ಹೇಮಾ ವಾದ ಮಂಡಿಸಿದರು.

ABOUT THE AUTHOR

...view details