ಶಿವಮೊಗ್ಗ: ನಗರದಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ದೇಶಾದ್ಯಂತ ಸದ್ದು ಮಾಡ್ತಿದೆ. ಇದರ ಬೆನ್ನಲ್ಲೇ ಶಾಂತಿ ಸುವ್ಯವಸ್ಥೆ ಕಾಪಾಡಲು ಶುಕ್ರವಾರ ಬೆಳಗ್ಗೆವರೆಗೆ ಕರ್ಫ್ಯೂವನ್ನು ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಇಂದು ಮಾಧ್ಯಮಗೋಷ್ಟಿ ನಡೆಸಿದ ಅವರು, ಫೆಬ್ರವರಿ 25ರ ಶುಕ್ರವಾರದ ಬೆಳಗ್ಗೆ ತನಕ ನಗರದಲ್ಲಿ ಕರ್ಫ್ಯೂ ಮುಂದುವರಿಯಲಿದೆ ಎಂದು ಡಿಸಿ ತಿಳಿಸಿದರು.
ಮತ್ತೆ ನಾಲ್ವರ ಬಂಧನ: ಎಸ್ಪಿ ಲಕ್ಷ್ಮಿ ಪ್ರಸಾದ್
ಹರ್ಷ ಕೊಲೆ ಪ್ರಕರಣದಲ್ಲಿ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಹರ್ಷನನ್ನು ಫೆಬ್ರವರಿ 20 ರ ರಾತ್ರಿ 9 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಿನ್ನೆ ಮಹಮ್ಮದ್ ಖಾಸಿಫ್ ಹಾಗೂ ಸೈಯದ್ ನದೀಮ್ ಬಂಧಿಸಲಾಗಿತ್ತು. ಇಂದು ಆಸಿವುಲ್ಲಾ ಖಾನ್, ರಿಹಾನ್ ಶರೀಫ್, ನಿಹಾನ್ ಹಾಗೂ ಆಫ್ನಾನ್ ಎಂಬುವರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದರಲ್ಲಿ ಎ-1 ಖಾಸಿಫ್ ಖಾನ್ ಗೆ ಮಾತ್ರ 30 ವರ್ಷವಾಗಿದ್ದು, ಉಳಿದವರು 21-22 ವರ್ಷದವರಾಗಿದ್ದಾರೆ. ಇವರೆಲ್ಲಾ ಮುಂಚೆ ಕ್ಲಾರ್ಕ್ ಪೇಟೆಯಲ್ಲಿಯೇ ವಾಸವಾಗಿದ್ದವರು. ಸದ್ಯ ಖಾಸೀಪ್ ಬಿಟ್ಟು ಉಳಿದರು ಬೇರೆ ಬೇರೆ ಕಡೆ ವಾಸವಾಗಿದ್ದಾರೆ. ಈ ಹಿಂದೆ ಇವರೆಲ್ಲರು ಸಹ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರೇ ಆಗಿದ್ದಾರೆ.
ಈ ಕೊಲೆ ಸಂಬಂಧ ಒಂದೇ ಕೇಸು ದಾಖಲಾಗಿದ್ದು, ಇದರಲ್ಲಿ ಆರು ಜನರ ಬಂಧನವಾಗಿದೆ. ಕೇಸ್ನಲ್ಲಿ ಇನ್ನಷ್ಟು ಜನ ಇರುವ ಸಾಧ್ಯತೆ ಇರುವುದರಿಂದ ತನಿಖೆ ಮುಂದುವರೆದಿದೆ. ಪ್ರಕರಣ ಸಂಬಂಧ ಒಟ್ಟು 12 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಇದರಲ್ಲಿ ಆರು ಜನ ಮಾತ್ರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಮೊದಲು ಬಂಧಿತರಾದ ಇಬ್ಬರನ್ನು ಶಿವಮೊಗ್ಗದಲ್ಲಿಯೇ ಬಂಧಿಸಲಾಗಿದೆ ಎಂದು ವಿವರಿಸಿದರು.
ಬಂಧಿತರ ವಿವರ: