ದೊಡಬಳ್ಳಾಪುರ : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ಕೇಂದ್ರ ಸರ್ಕಾರದ ಆದೇಶದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೇ 24 ಮತ್ತು 31ರ ಭಾನುವಾರ ಕರ್ಫ್ಯೂ ಜಾರಿಯಲ್ಲಿದ್ದು ದೊಡಬಳ್ಳಾಪುರ ನಗರ ಸಂಪೂರ್ಣವಾಗಿ ಸ್ತಬ್ಧವಾಗಿದೆ.
ಲಾಕ್ ಡೌನ್ ಕರ್ಫ್ಯೂ: ದೊಡಬಳ್ಳಾಪುರ ಸಂಪೂರ್ಣ ಸ್ತಬ್ಧ - ದೊಡ್ಡಬಳ್ಳಾಪುರ ಕರ್ಪ್ಯೂ ಸುದ್ದಿ
ಕರುನಾಡಲ್ಲಿ ಕೊರೊನಾ ಕರ್ಪ್ಯೂ ಹೇರಲಾಗಿದ್ದು, ದೊಡ್ಡಬಳ್ಳಾಪುರ ನಗರ ಸಂಪೂರ್ಣ ಸ್ತಬ್ದವಾಗಿದೆ. ಮುಂಜಾನೆಯಿಂದಲೆ ವಾಹನ ಸಂಚಾರ ಸೇರಿದಂತೆ ನಗರದ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಲಾಗಿದೆ. ಮುಂಜಾಗೃತ ಕ್ರಮವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ತೆ ಮಾಡಲಾಗಿದೆ.
ಲಾಕ್ ಡೌನ್ ಕರ್ಫ್ಯೂ
ನಿನ್ನೆ ಸಂಜೆಯಿಂದ ನಗರದಲ್ಲಿ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದು, ಜನರ ಓಡಾಟ ವಿರಳವಾಗಿದೆ. ಇಂದು ಬೆಳಗ್ಗೆಯಿಂದ ವಾಹನಗಳ ಸಂಚಾರವಿಲ್ಲದೆ ರಸ್ತೆಗಳು ಬಣಗುಡುತ್ತಿವೆ. ಮಾರುಕಟ್ಟೆ ಸ್ಥಬ್ತವಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.