ಕರ್ನಾಟಕ

karnataka

ETV Bharat / state

ಗೋಡೆ, ಶೆಟರ್​ ಮೇಲೆ ಬರೆದು ವಿಕೃತಿ... ಬೆಂಗಳೂರಲ್ಲಿ ವಿದ್ಯಾರ್ಥಿಗಳಿಬ್ಬರ ಬಂಧನ - ಬೆಂಗಳೂರು ಗೋಡೆಗಳ ವಿರೂಪ ಸುದ್ದಿ

ಬೆಂಗಳೂರಿನ ಅಂಡರ್​ಪಾಸ್​ಗಳ ಗೋಡೆಗಳು, ಅಂಗಡಿಗಳ ಶೆಟರ್​​ಗಳ ಮೇಲೆ ಬರೆಯುವುದು, ಅನಗತ್ಯ ಹಾಗೂ ಅಶ್ಲೀಲ ಚಿತ್ರ ಬಿಡಿಸುತ್ತಿದ್ದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

banglore
ಗೋಡೆ, ಶೆಟರ್​ಗಳ ವಿಕೃತಿವಾಗಿ ಚಿತ್ರ

By

Published : Dec 17, 2019, 2:28 AM IST

ಬೆಂಗಳೂರು:ಅಂಡರ್​ಪಾಸ್​ಗಳ ಗೋಡೆಗಳು, ಅಂಗಡಿಗಳ ಶೆಟರ್​​ಗಳ ಮೇಲೆ ಬರೆಯುವುದು, ಅನಗತ್ಯ ಹಾಗೂ ಅಶ್ಲೀಲ ಚಿತ್ರ ಬಿಡಿಸುತ್ತಿದ್ದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ನಗರ ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಬಂಧಿತರು ವಿದ್ಯಾರ್ಥಿಗಳಾಗಿರುವುದರಿಂದ ಭವಿಷ್ಯದ ದೃಷ್ಟಿಯಿಂದ ಅವರ ಬಗ್ಗೆ ಹೆಚ್ಚಿನ‌ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಚೇತನ್ ಸಿಂಗ್ ರಾಥೋಡ್, ನಗರ ಕೇಂದ್ರ ವಿಭಾಗದ ಡಿಸಿಪಿ

ಈ ಬಗ್ಗೆ ಮಾಹಿತಿ ನೀಡಿರುವ ನಗರ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್, ನಗರದ ವಿವಿಧೆಡೆ್ಗಳಲ್ಲಿ ರಾತ್ರಿ ವೇಳೆ ಗೋಡೆಗಳು ಹಾಗೂ ಅಂಗಡಿ ಶೆಟರ್​​ಗಳ‌ ಮೇಲೆ ಬರೆದು ವಿಕೃತಿ‌ ಮೆರೆಯಲಾಗುತ್ತಿದೆ. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಹೀಗೆ ಇಂತಹ ಕೃತ್ಯವೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಬಗ್ಗೆ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ತಂದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details