ಕರ್ನಾಟಕ

karnataka

ETV Bharat / state

ಕ್ರೀಡಾಪಟುಗಳು ತಮ್ಮ ಸುರಕ್ಷತೆ ಗಮನದಲ್ಲಿರಿಸಿ ಈಜುಕೊಳಗಳಿಗೆ ಬರಲಿ : ಸಚಿವ ಸಿ.ಟಿ.ರವಿ

ಅನ್​​​​​ಲಾಕ್ 5 ಮಾರ್ಗ ಸೂಚಿಯಂತೆ ಸಿನಿಮಾ ಪ್ರದರ್ಶನ ಮತ್ತು ಸ್ವಿಮ್ಮಿಂಗ್​ ಪೂಲ್​ಗಳ ತೆರವಿಗೆ ಅವಕಾಶ ಕಲ್ಪಿಸಲಾಗಿದೆ. ಆದ್ರೆ ಕ್ರೀಡಾಪಟುಗಳು ಕೊರೊನಾ ಮುಂಜಾಗ್ರತೆಯಿಂದ ಇರಬೇಕು ಎಂದು ಸಿಟಿ ರವಿ ತಿಳಿಸಿದ್ದಾರೆ.

By

Published : Oct 1, 2020, 3:50 PM IST

CT Ravi says Athletes are come with  Corona Safety Measures to swimming pools
ಕ್ರೀಡಾಪಟುಗಳು ತಮ್ಮ ಸುರಕ್ಷತೆ ಗಮನದಲ್ಲಿರಿಸಿ ಈಜುಕೊಳಗಳಿಗೆ ಬರಲಿ : ಸಚಿವ ಸಿ.ಟಿ.ರವಿ

ಬೆಂಗಳೂರು: ಕ್ರೀಡಾಪಟುಗಳು ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈಜುಕೊಳಗಳಿಗೆ ಬರಲಿ ಎಂದು ಕ್ರೀಡಾ ಸಚಿವ ಸಿ.ಟಿ.ರವಿ ತಿಳಿಸಿದರು.

ಅನ್ ಲಾಕ್ 5 ಮಾರ್ಗ ಸೂಚಿ ಬಗ್ಗೆ ಸಿಟಿ ರವಿ ಮಾತನಾಡಿದ್ದಾರೆ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅನ್​​​ಲಾಕ್ 5 ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಸ್ವಿಮ್ಮಿಂಗ್ ಪೂಲ್​​ಗಳಿಗೂ ಅವಕಾಶ ಮಾಡಿಕೊಟ್ಟಿದೆ. ಯಾರಿಗೆ ಸೋಂಕು ಇದೆಯೋ ಅವರು ಈಜುಕೊಳಗಳಿಗೆ ಬರದೇ ಇರುವುದು ಉತ್ತಮ ಎಂದು ಮನವಿ ಮಾಡಿದರು.

ಅನ್ ಲಾಕ್ 5 ಮಾರ್ಗ ಸೂಚಿಯಲ್ಲಿ ಸಿನಿಮಾ ಪ್ರದರ್ಶನಕ್ಕೂ ಅವಕಾಶ ಮಾಡಿ ಕೊಡಲಾಗಿದೆ. ಇಲ್ಲಿ ಕೂಡ ಸೂಕ್ತ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿ ಸಿನೆಮಾ ಥಿಯೇಟರ್​​​​ ಆರಂಭಿಸಲು ಅನುಮತಿ ನೀಡಲಾಗಿದೆ. ಇದನ್ನೂ ಕೂಡ ನಾನು ಸ್ವಾಗತಿಸುತ್ತೇನೆ ಎಂದರು.

For All Latest Updates

ABOUT THE AUTHOR

...view details