ಕರ್ನಾಟಕ

karnataka

ETV Bharat / state

ಸ್ಪೀಕರ್‌ ವಿರುದ್ಧ ಸಿದ್ದರಾಮಯ್ಯ ಏಕ ವಚನ ಪ್ರಯೋಗ.. ಕ್ಷಮೆಗೆ ಆಗ್ರಹಿಸಿದ ಸಚಿವ ಸಿ ಟಿ ರವಿ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ನೀವೂ ಸಿಎಂ ಆಗಿದ್ದವರು. ವಿಪಕ್ಷನಾಯಕರಾಗಿ ಕೆಲಸ ಮಾಡುತ್ತಿರುವವರು. ನೀವು ಮಾತನಾಡಿದ್ದು ನಿಮಗೇ ಗೌರವ ತಂದುಕೊಡುತ್ತಾ? ನಿಮ್ಮನ್ನ ಆರಿಸಿದವರಿಗೆ ಗೌರವ ತಂದುಕೊಡುತ್ತಾ? ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಎಲ್ಲರಿಗೂ ಪಾಠ ಹೇಳಿಕೊಡುವ ನೀವು ಸ್ವಲ್ಪ ಸುಸಂಸ್ಕೃತ ಪಾಠ ಕಲಿಯುವ ಅವಶ್ಯಕತೆ ಇದೆ ಎಂದು ಸಿದ್ದರಾಮಯ್ಯನವರ ವಿರುದ್ಧ ಸಚಿವ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಸಿ.ಟಿ ರವಿ

By

Published : Oct 25, 2019, 4:48 PM IST

ಬೆಂಗಳೂರು:ವಿಧಾನಸಭೆ ಅಧ್ಯಕ್ಷ ಸ್ಥಾನಕ್ಕೂ ಗೌರವ ನೀಡದಂತೆ ಏಕವಚನ ಪದ ಪ್ರಯೋಗ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಸಚಿವ ಸಿ ಟಿ ರವಿ ಆಗ್ರಹಿಸಿದ್ದಾರೆ.

ಪ್ರವಾಸೋದ್ಯೋಮ ಸಚಿವ ಸಿ ಟಿ ರವಿ

ಶಕ್ತಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾಧ್ಯಕ್ಷರ ಸ್ಥಾನದ ಗೌರವವನ್ನೂ ಮರೆತು ನಿಂದನೆ ರೀತಿ ಮಾತನಾಡಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೂಡ 6 ಬಾರಿ ಶಾಸಕರಾಗಿರುವವರು. ಸಭಾಧ್ಯಕ್ಷರ ಬಗ್ಗೆ ಲಘುವಾಗಿ ಮಾತನಾಡುವುದು ಸುಸಂಸ್ಕೃತ ನಡವಳಿಕೆ ಅಲ್ಲ. ಬೇರೆ ಎಲ್ಲದರ ಬಗ್ಗೆ ಪಾಠ ಹೇಳುವ ಮೇಷ್ಟ್ರಾಗ್ತಾರೆ, ವ್ಯಾಕರಣ ಹೇಳ್ತಾರೆ. ಈ ರೀತಿ ಎಲ್ಲದಕ್ಕೂ ಮೇಷ್ಟ್ರಾಗುವ ಸಿದ್ದರಾಮಯ್ಯನವರಿಗೆ ಸುಸಂಸ್ಕೃತ ನಡವಳಿಕೆಯನ್ನ ನಿಮ್ಮ ಮೇಷ್ಟ್ರು ಕಲಿಸಲಿಲ್ವಾ ಅಥವಾ ನೀವೇ ಕಲಿಯಲಿಲ್ವಾ ಎಂದು ಕಾಲೆಳೆದರು.

ನೀವು ಸಿಎಂ ಆಗಿದ್ದವರು. ವಿಪಕ್ಷನಾಯಕರಾಗಿ ಕೆಲಸ ಮಾಡುತ್ತಿರುವವರು. ನೀವು ಮಾತನಾಡಿದ್ದು ನಿಮಗೇ ಗೌರವ ತಂದುಕೊಡುತ್ತಾ? ನಿಮ್ಮನ್ನ ಆರಿಸಿದವರಿಗೆ ಗೌರವ ತಂದುಕೊಡುತ್ತಾ? ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಎಲ್ಲರಿಗೂ ಪಾಠ ಹೇಳಿಕೊಡುವ ನೀವು ಸ್ವಲ್ಪ ಸುಸಂಸ್ಕೃತ ಪಾಠ ಕಲಿಯುವ ಅವಶ್ಯಕತೆ ಇದೆ ಎಂದು ಸಿದ್ದರಾಮಯ್ಯನವರ ವಿರುದ್ಧ ಸಚಿವ ಸಿ ಟಿ ರವಿ ವಾಗ್ದಾಳಿ ನಡೆಸಿದರು.

ಮಹಾರಾಷ್ಟ್ರ, ಹರಿಯಾಣ ರಾಜ್ಯಗಳ ಫಲಿತಾಂಶ ಸಮಾಧಾನ ತಂದಿದೆ. ಆದರೆ. ತೃಪ್ತಿ ತಂದಿಲ್ಲ, ಇನ್ನೂ ಹೆಚ್ಚಿನ ಸ್ಥಾನಗಳ ನಿರೀಕ್ಷೆಯಲ್ಲಿ ಇದ್ದೆವು. ನಮಗೆ ಚುನಾವಣಾ ಪೂರ್ವದ ವಾತಾವರಣ ಹೆಚ್ಚಿನ ಸ್ಥಾನಗಳು ಬರುತ್ತವೆ ಅಂತಾ ಇತ್ತು. ಏನಾಗಿದೆ ಅನ್ನೋದನ್ನ ಆಂತರಿಕವಾಗಿ ಚರ್ಚೆ ಮಾಡುತ್ತೇವೆ ಎಂದರು.

ಫಲಿತಾಂಶದಿಂದ ಮೋದಿ-ಶಾ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಸದ್ಯ ಇವಿಎಂ ಮೇಲೆ ಮತ್ತೆ ಆರೋಪ ಮಾಡಲಿಲ್ಲ. ಚುನಾವಣೆ ಪೂರ್ವದಲ್ಲಿ ಇವಿಎಂ ಅಂತಿದ್ರು ನಾವು ಭರ್ಜರಿ ವಿಕ್ಟರಿ ಸಾಧಿಸಿದ್ದರೂ ಇವಿಎಂ ಪ್ರಾಬ್ಲಂ ಅಂತಿದ್ರು. ಕಾಂಗ್ರೆಸ್‌ನವರಿಗೆ ಈಗಲಾದರೂ ಇವಿಎಂ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಬಂತಲ್ವಾ? ಮೋದಿ ಶಾ ಜನಪ್ರಿಯತೆ ಕಡಿಮೆಯಾಗಿದೆ ಅಥವಾ ಏನ್ ಬೇಕಾದರೂ ಅಂದುಕೊಳ್ಳಿ. ಆದರೆ, ಜನಪ್ರಿಯತೆಯನ್ನು ತಕ್ಕಂತೆ ಲೋಕಸಭೆ ಚುನಾವಣೆಯಲ್ಲಿ ತೋರಿಸಿದ್ದಾರೆ. ಯಾವಾಗಲೂ ಇವಿಎಂ ಮೇಲೆ ದೂರುತ್ತಿದ್ದರು, ಆ ಮಾನಸಿಕ ಕಾಯಿಲೆ ಬಡಿದಿತ್ತು. ಈಗ ಇವಿಎಂ ರೋಗದಿಂದ ಹೊರ ಬಂದಿದ್ದಾರೆ. ಇದು ಪ್ರಜಾಪ್ರಭುತ್ವದ ಉತ್ತಮ ಬೆಳವಣಿಗೆ ಎಂದು ಕಾಂಗ್ರೆಸ್ ಬಗ್ಗೆ ಸಿಟಿ ರವಿ ಲೇವಡಿ ಮಾಡಿದ್ದಾರೆ.

ABOUT THE AUTHOR

...view details