ಕರ್ನಾಟಕ

karnataka

ETV Bharat / state

ರೈತರ ಹೆಸರಲ್ಲಿ ಸಂಘಟಿತ ದಲ್ಲಾಳಿಗಳು ನಡೆಸುತ್ತಿರುವ ಹೋರಾಟ ಇದು : ಸಿ ಟಿ ರವಿ - Delhi Farmer protest News

ರಾಜಕೀಯ ದುರುದ್ದೇಶಕ್ಕೆ ದಿಕ್ಕು ತಪ್ಪಿಸುತ್ತಿದ್ದಾರೆ. ಬಿಜೆಪಿ ವಿರೋಧಿ ಮನೋಭಾವದಿಂದ ಕೆಲಸ ಮಾಡ್ತಿದ್ದಾರೆ. ಇದಕ್ಕೆ ಪ್ರತ್ಯೇಕವಾದಿ ಶಕ್ತಿಗಳೂ ಕೈ ಜೋಡಿಸಿವೆ. ಕೃಷಿ ಮಸೂದೆ ರೈತನ ಒಳಿತಿಗೆ ಹೊರತು ರೈತರರನ್ನು ಮುಗಿಸಲು ತಂದ ಕಾಯ್ದೆ ಅಲ್ಲ. ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದವರು ಪ್ರಧಾನಿ..

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

By

Published : Dec 8, 2020, 4:55 PM IST

ಬೆಂಗಳೂರು :ಕೃಷಿ ಸುಧಾರಣಾ ಮಸೂದೆ ರೈತರ ಬದುಕಿಗೆ ನರವು ನೀಡಲಿದೆ. ಪ್ರಧಾನಿ ಮೋದಿಯವರನ್ನು ರೈತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ

ವಿಧಾನಸೌಧದಲ್ಲಿ ಸಚಿವರಾದ ಬಿ ಸಿ ಪಾಟೀಲ್, ಎಸ್ ಟಿ ಸೋಮಶೇಖರ್, ಶಾಸಕರಾದ ರವಿಕುಮಾರ್, ಬಸವರಾಜ್ ದಡೆಸಗೂರ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಬೆಳೆ ಎಪಿಎಂಸಿಯಲ್ಲೇ ಮಾರಾಟ ಮಾಡಿ ಅಂತಾ ಯಾಕೆ ಹೇಳ್ತೀರಿ? ಎಪಿಎಂಸಿಯಲ್ಲಿ ಮಧ್ಯವರ್ತಿಗಳು ನಿಗದಿತ ಬೆಲೆ ಕೊಟ್ಟಿದ್ರೆ ಯಾಕೆ ತೊಂದರೆಯಾಗ್ತಿತ್ತು?

ಇಲ್ಲಿ ಯಾಕೆ ನೀವು ಸ್ಪರ್ಧೆ ಬಯಸುತ್ತಿಲ್ಲ? ಎಪಿಎಂಸಿಯಲ್ಲಿ ಸಮಸ್ಯೆ ಇಲ್ಲ ಅಂದ್ರೆ ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ? ಈ ಪ್ರಶ್ನೆಗಳಿಗೆ ಬಂದ್ ಮಾಡುವವರು ಉತ್ತರ ನೀಡಲಿ. ಈ ಮಸೂದೆಗಳನ್ನ ಏಕಾಏಕಿ ಜಾರಿ ಮಾಡಿಲ್ಲ ಎಂದರು.

ಓದಿ: ರಸ್ತೆಯುದ್ದಕ್ಕೂ ಕುಣಿದು ರೈತ ಮಹಿಳೆಯಿಂದ ವಿಭಿನ್ನ ಹೋರಾಟ: ವಿಡಿಯೋ

ಕಿಸಾನ್ ಸಮ್ಮಾನ್ ಯೋಜನೆಯಡಿ 10 ಕೋಟಿ ರೈತರ ಖಾತೆಗೆ ಹಣ ಹಾಕಿದ್ದೇವೆ. ಪ್ರತಿ ನಾಲ್ಕು ತಿಂಗಳಿಗೆ ಎರಡು ಸಾವಿರ ಹಣ ನೀಡ್ತಿದ್ದಾರೆ. ರಾಜ್ಯದಲ್ಲೂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೆರವು ನೀಡಿದ್ದೇವೆ. 58 ಲಕ್ಷ ರಾಜ್ಯದ ರೈತರಿಗೆ 4 ಸಾವಿರ ನೆರವು ನೀಡಲಾಗ್ತಿದೆ. ಸ್ವಾಮಿನಾಥನ್ ವರದಿಯಿಂದ, ರೈತರ 22 ಬೆಲೆಗಳಿಗೆ ಬೆಂಬಲ ಬೆಲೆ ಹೆಚ್ಚಳವಾಗಿದೆ.

ರಾಜಕೀಯ ದುರುದ್ದೇಶಕ್ಕೆ ದಿಕ್ಕು ತಪ್ಪಿಸುತ್ತಿದ್ದಾರೆ. ಬಿಜೆಪಿ ವಿರೋಧಿ ಮನೋಭಾವದಿಂದ ಕೆಲಸ ಮಾಡ್ತಿದ್ದಾರೆ. ಇದಕ್ಕೆ ಪ್ರತ್ಯೇಕವಾದಿ ಶಕ್ತಿಗಳೂ ಕೈ ಜೋಡಿಸಿವೆ. ಕೃಷಿ ಮಸೂದೆ ರೈತನ ಒಳಿತಿಗೆ ಹೊರತು ರೈತರರನ್ನು ಮುಗಿಸಲು ತಂದ ಕಾಯ್ದೆ ಅಲ್ಲ. ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದವರು ಪ್ರಧಾನಿ ಎಂದರು.

ನಿಗದಿ ಮಾಡಿದ ದರ ರೈತನಿಗೆ ನೀಡದೆ ಹೋದರೆ ಕಂಪನಿಗಳ ಮೇಲೆ ದಂಡ ಹಾಕಲಾಗುತ್ತದೆ. ಭೂಮಿ ಕಂಪನಿಗಳ ಪರ ಆಗಲಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಮಸೂದೆಯಿಂದ ರೈತರಿಗೆ ಅನುಕೂಲ ಆಗಲಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಆಗಲಿದೆ. ಕಮ್ಯೂನಿಸ್ಟರು ಈ ಪ್ರತಿಭಟನೆಗೆ ಬೆಂಬಲ ಕೊಟ್ಟಿವೆ. ಕೇರಳದಲ್ಲಿ ಎಪಿಎಂಸಿಯೇ ಇಲ್ಲ. ಇದರಲ್ಲೇ ಗೊತ್ತಾಗತ್ತೆ ಇವರ ಪ್ರತಿಭಟನೆಯ ಕಾರಣ ಎಂದು ಹೇಳಿದರು.

ರೈತಪರವಾಗಿರುವ ಕಾಯ್ದೆಗಳು ಜಾರಿಗೆ ಬಂದರೆ ದಲ್ಲಾಳಿಗಳಿಗೆ ನಷ್ಟ. ವ್ಯವಸ್ಥಿತವಾಗಿ ದಲ್ಲಾಳಿಗಳಿಗೆ ನಷ್ಟವಾಗಲಿದೆ. ದಲ್ಲಾಳಿಗಳು ಸಂಘಟಿತರು. ರೈತರು ಅಸಂಘಟಿತರು. ಇದರಿಂದ ಈ ಕಾಯ್ದೆ ಜಾರಿಗೆ ಬಂದರೆ ದಲ್ಲಾಳಿಗಳಿಗೆ ನಷ್ಟವಾಗಲಿದೆ. ಪೌರತ್ವ ಕಾಯಿದೆಯಲ್ಲಿ ಸುಳ್ಳು ಆರೋಪ ಮಾಡಿ ಬೀದಿಗೆ ಇಳಿಸಿದರೂ. ಆದರೂ ಚುನಾವಣಾ ಸೋತಿದ್ದಾರೆ.

ಚುನಾವಣಾ ಸೋಲಿನಿಂದಾಗಿ ಈಗ ಪ್ರತಿಭಟನೆ ಮಾಡ್ತಿದ್ದಾರೆ. ರೈತರ ಹೆಸರಲ್ಲಿ ಸಂಘಟಿತ ದಲ್ಲಾಳಿಗಳು ನಡೆಸುತ್ತಿರುವ ಹೋರಾಟ ಇದು. ಇದಕ್ಕೆ ರೈತರು ಬಲಿಯಾಗಬಾರದು. ಇನ್ನು ಎಷ್ಟು ವರ್ಷಗಳ ಕಾಲ ರೈತರು ಕಷ್ಟದಲ್ಲಿ ಸಿಲುಕಬೇಕು? ಒಂದು ವೇಳೆ ನಾವು ತಂದ ಕಾಯಿದೆ ರೈತರಿಗೆ ತೊಂದರೆ ಆಗಬಹುದು ಎನ್ನುವ ಅನುಭವ ಬಂದರೆ, ಕಾಯ್ದೆ ಬಗ್ಗೆ ಯಾವಾಗ ಬೇಕಾದ್ರೂ ಪರಾಮರ್ಶೆ ಮಾಡೋಕೆ ಅವಕಾಶ ಇದೆ. ರೈತರು ಈಗಲೂ ನಮ್ಮ‌ ಜೊತೆ ಇದ್ದಾರೆ ಎಂದರು.

ABOUT THE AUTHOR

...view details