ಕರ್ನಾಟಕ

karnataka

ETV Bharat / state

ರಾಜೀನಾಮೆ ಕೊಡುವುದಕ್ಕೆ ಈಶ್ವರಪ್ಪ ಮಾಡಿದ ಅಪರಾಧವೇನು?: ಸಿ.ಟಿ ರವಿ - ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ

ಸಚಿವ ಕೆ.ಎಸ್ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರಾ?. ಕಾಂಗ್ರೆಸ್​ಗೆ ನೈತಿಕತೆ ಇಲ್ಲ. ಈಶ್ವರಪ್ಪ ಯಾಕೆ ರಾಜೀನಾಮೆ ಕೊಡಬೇಕು?, ಇಲ್ಲಿ ಆ ರೀತಿ ಏನು ಆಗಿದೆ?. ಮುಂದೊಂದು ದಿನ ಕೆಂಪುಕೋಟೆ ಮೇಲೆ ಕೇಸರಿ‌ಧ್ವಜ ಹಾರಾಡಲಿದೆ ಅಂತಾ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ, ಅದು ಅಪರಾಧವಾ?. ಕೋರ್ಟ್​ಗೆ ಹೋಗಲಿ, ಈಶ್ವರಪ್ಪ ಅವರ ಬಗ್ಗೆ ತೀರ್ಪು ಬರಲಿ..

ಸಿ.ಟಿ ರವಿ
ಸಿ.ಟಿ ರವಿ

By

Published : Feb 18, 2022, 2:04 PM IST

ಬೆಂಗಳೂರು: ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆ ಕೊಡಬೇಕು ಅಂತಾ ಬಯಸೋಕೆ ಅವರು ಮಾಡಿರೋ ಅಪರಾಧವಾದ್ರು ಏನು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರಾ?. ಕಾಂಗ್ರೆಸ್​ಗೆ ನೈತಿಕತೆ ಇಲ್ಲ. ಈಶ್ವರಪ್ಪ ಯಾಕೆ ರಾಜೀನಾಮೆ ಕೊಡಬೇಕು?, ಅವರಿಗೆ ಕೇಸರಿ ಬಗ್ಗೆ ಏನು ಗೊತ್ತು?, ಸ್ವಾತಂತ್ರ್ಯಕ್ಕೆ ಕೇಸರಿ ಕೊಡುಗೆ ಬಗ್ಗೆ ಗೊತ್ತಾ?. 1893ರಲ್ಲಿ ಸಾರ್ವಜನಿಕ ಗಣೇಶೋತ್ಸವ ಮೂಲಕ ಕೇಸರಿ ಹಿಡಿದು ಜನರನ್ನ ಸಂಘಟಿಸಿದ್ರು. ತ್ರಿವರ್ಣ ಧ್ವಜವನ್ನು ಎಲ್ಲರೂ ಗೌರವಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಬಿ.ಕೆ ಹರಿಪ್ರಸಾದ್ ಪ್ರಾಣ ಬೆದರಿಕೆ ವಿಚಾರ ಮಾತನಾಡಿ, ಒಂದು ಕಾಲದ ಕೊತ್ವಾಲ್ ಶಿಷ್ಯರೇ ಈಗ ಕಾಂಗ್ರೆಸ್​ನಲ್ಲಿದ್ದಾರೆ. ಅವರಿಗೆ ಯಾರಾದ್ರು ಪ್ರಾಣ ಬೆದರಿಕೆ ಒಡ್ಡಲು ಸಾಧ್ಯವಾ?. ಅವರೇ ತುಂಬಾ ಜನರಿಗೆ ಬೆದರಿಕೆ ಹಾಕಿದವರು. ಅವರನ್ನ ಹೆದರಿಸಿ ಉಳಿಯೋಕೆ ಆಗುತ್ತಾ?, ಬೇರೆಯವರನ್ನ ಹೆದರಿಸಿ ಬದುಕು ಕಟ್ಟಿಕೊಂಡವರು ಎಂದರು.

ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಅಹೋರಾತ್ರಿ ಪ್ರತಿಭಟನೆ ಮಾಡಿದ ವಿಚಾರ ಕುರಿತು ಮಾತನಾಡಿದ ಅವರು, ಜಾರ್ಜ್ ರಾಜೀನಾಮೆ ಕೇಳಿದಾಗ ಡೆತ್ ಸ್ಟೇಟ್ಮೆಂಟ್ ಕೊಟ್ಟಿದ್ರು. ಇಲ್ಲಿ ಆ ರೀತಿ ಏನು ಆಗಿದೆ?. ಮುಂದೊಂದು ದಿನ ಕೆಂಪುಕೋಟೆ ಮೇಲೆ ಕೇಸರಿ‌ಧ್ವಜ ಹಾರಾಡಲಿದೆ ಅಂತಾ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ, ಅದು ಅಪರಾಧವಾ?. ಕೋರ್ಟ್​ಗೆ ಹೋಗಲಿ, ಈಶ್ವರಪ್ಪ ಅವರ ಬಗ್ಗೆ ತೀರ್ಪು ಬರಲಿ ಎಂದರು.

ಸದನದ ಸಮಯ ವ್ಯರ್ಥ ಆಗುತ್ತಿರೋ ವಿಚಾರ ಮಾತನಾಡಿ, ವಿಷಯಾಂತರ ಆಗಿ ದಿಕ್ಕು ತಪ್ಪಿಸುತ್ತಿದ್ದಾರೆ. ಕೋವಿಡ್ ಬಂದಾಗ ವ್ಯಾಕ್ಸಿನ್ ಪಡೆದ್ರೆ ಸಾಯ್ತಾರೆ ಅಂತಾ ಅಪಪ್ರಚಾರ ಮಾಡಿದವರು ಅವರು. ಅವರಿಂದ ಏನು ನಿರೀಕ್ಷೆ ಸಾಧ್ಯ ಎಂದರು.

ABOUT THE AUTHOR

...view details