ಕರ್ನಾಟಕ

karnataka

ETV Bharat / state

'ನನ್ನ ಸಿ.ಟಿ.ರವಿ ಲೂಟಿ ರವಿ ಅಂದರೆ ನಾನು ಸಿದ್ದ ಪೆದ್ದ ಅನ್ನಬಹುದಲ್ವಾ?' - ಕೆಂಪಣ್ಣನವರ ಆಯೋಗ

ಕೆಂಪಣ್ಣನವರ ಆಯೋಗ ಸತ್ಯಾಸತ್ಯತೆಯನ್ನು ಹೊರತರಲು ರಚನೆ ಮಾಡಿದ್ದು. ಟಿಎ, ಡಿಎ ತೆಗೆದುಕೊಳ್ಳಲು ಆಯೋಗ ರಚಿಸಿಲ್ಲ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

C T Ravi
ಸಿ ಟಿ ರವಿ

By

Published : Sep 12, 2022, 1:04 PM IST

ಬೆಂಗಳೂರು: ನನ್ನನ್ನು ಸಿ.ಟಿ.ರವಿ ಲೂಟಿ ರವಿ ಅಂದ್ರೆ ನಾನು ಸಿದ್ದ ಪೆದ್ದ ಅನ್ನಬಹುದಲ್ಲವಾ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರಾಸಬದ್ದವಾಗಿ ಸಿಟಿನ ಲೂಟಿ ಅನ್ನುವುದಾದರೆ ಸಿದ್ದುನ ಪೆದ್ದ ಅನ್ನಬಹುದು. ಇನ್ನು, ಕೆಂಪಣ್ಣನವರ ಆಯೋಗ ಸತ್ಯಾಸತ್ಯತೆಯನ್ನು ಹೊರಗೆ ತರಲು ರಚನೆ ಮಾಡಿದ್ದು. ಟಿಎ, ಡಿಎ ತೆಗೆದುಕೊಳ್ಳಲು ಅಲ್ಲ. ಸಿಟಿನ ಲೂಟಿ ಅನ್ಬೇಕಾದ್ರೆ, ಇವರನ್ನು ಏನೆಂದು ಕರೆಯಬೇಕು? ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ? ಟೇಬಲ್ ಗುದ್ದಿ ಕೇಳ್ತಿದ್ರು. ನಾನು ಏನು ಹೇಳಬೇಕೋ ಅದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ. ನನಗೆ ಕೇಳಿದಂತೆ ಇತರರಿಗೂ ಅಷ್ಟೇ ಗಟ್ಟಿಯಾಗಿ ಪ್ರಶ್ನೆ ಕೇಳಿ. ಸಮಾಜವಾದಿಗಳ ಮಜವಾದಿತನ ನೋಡ್ತಿದ್ದೇನೆ‌. ಸೆಂಟ್ ಹೊಡೆದುಕೊಂಡು ವಾಸನೆ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.

ಸಿ.ಟಿ.ರವಿ ಮಾಧ್ಯಮದೊಂದಿಗೆ ಮಾತನಾಡಿದರು.

ಕೋಲ್ ಸ್ಕ್ಯಾಮ್ ಹೇಳಿಕೆಗೆ ನಾನು ಈಗಲೂ ಬದ್ಧ. ಜನಸ್ಪಂದನ ಸಮಾವೇಶದ ವೇದಿಕೆ ಹಿಂದೆ ಮಾಧ್ಯಮಕ್ಕೆ ಸೂಕ್ಷ್ಮವಾಗಿ ಹೇಳಿದ್ದೇನೆ. ಮುಖ್ಯಮಂತ್ರಿಗಳ‌ ಸಮ್ಮುಖದಲ್ಲಿ ನಾನು ಆ ಹೇಳಿಕೆ ನೀಡಿದ್ದೇನೆ ಎಂದರೆ, ಆ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದೇ ಅರ್ಥ ಎಂದರು.

ಸಿದ್ದರಾಮಯ್ಯ ವಿರುದ್ಧ ಕಚ್ಚೆಹರುಕ ಪದ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಈಗಾಗಲೇ ಸಾರ್ವಜನಿಕ ಚರ್ಚೆಗೆ ಬಿಟ್ಟಿದ್ದೇನೆ. ಇಷ್ಟು ವರ್ಷಗಳ ಅನುಭವದಲ್ಲಿ ನಾನು ಹೇಳಿಯೇ ಇಲ್ಲ ಅಂತಾ ಹಿಂದೆ ಸರಿದಿಲ್ಲ. ಕಚ್ಚೆ ಹರುಕ ವಿಚಾರ ನನ್ನ ಮಾತಲ್ಲ. ಮೈಸೂರಿನ ಮಾತು ಅದು, ಲೋಕಲ್ ನ್ಯೂಸ್. ಆ ಬಗ್ಗೆ ವಿಶ್ವನಾಥ್ ಅವರಿಗೆ ಕೇಳಿ, ಅವರಿಬ್ಬರದ್ದು ಒಂದೇ ಬ್ಲಡ್. ನಾನು ಹೇಳಿಲ್ಲ ಎಂದು ಹೇಳಿಲ್ಲ, ನಿಮಗೂ ಜವಾಬ್ದಾರಿ ಇದೆ. ಉತ್ತರ ಕೊಡುವವರು ಏನು ಕೊಡ್ತಾರೆ ನೋಡೋಣ ಎಂದು ಹೇಳಿದರು.

ಇದನ್ನೂ ಓದಿ:ರಾಜ್ಯ ಸರ್ಕಾರದ ವೈಫಲ್ಯ ವಿರುದ್ಧ ಉಭಯ ಸದನಗಳಲ್ಲೂ ಹೋರಾಟ: ಬಿ ಕೆ ಹರಿಪ್ರಸಾದ್

ABOUT THE AUTHOR

...view details