ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಲವ್ ಜಿಹಾದ್ಗೆ ಕಾನೂನು ರೂಪಿಸುವ ಮೂಲಕ ನಿಯಂತ್ರಣ ಹೇರುವ ಕಾಯ್ದೆಗಳ ಜಾರಿ ಅಗತ್ಯವಿದ್ದು, ಮುಂಬರಲಿರುವ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ಜಾರಿಗೆ ತರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸೆವೆನ್ ಮಿನಿಸ್ಟರ್ ಕ್ವಾಟ್ರಸ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರೀತಿಯ ಮೂಲಕ ಮತಾಂತರ ಮಾಡುವ ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ಕೋರ್ ಕಮಿಟಿ ಸಹಮತ ವ್ಯಕ್ತಪಡಿಸಿದೆ. ಗೋಹತ್ಯೆ ನಿಷೇಧ ಕಾಯ್ದೆಯನ್ನ ತರಬೇಕು ಎನ್ನುವ ಕೂಗು ಜೋರಾಗಿದೆ. ಹಾಗಾಗಿ ಕಠಿಣವಾದ ಕಾಯ್ದೆ ತರುವ ಬಗ್ಗೆ ಚಿಂತನೆ ಇದೆ. ಇದಕ್ಕೂ ಕೋರ್ ಕಮಿಟಿ ಸಮ್ಮತಿ ಇದೆ. ನಾನು ಪಶು ಸಂಗೋಪನಾ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಮುಂಬರುವ ಅಧಿವೇಶನದಲ್ಲಿ ಈ ಎರಡು ಕಾಯ್ದೆಗಳನ್ನು ತರಬೇಕು. ರಾಜಕೀಯ ಕಾರಣಕ್ಕೆ ಗೋಹತ್ಯೆ ಕಾಯ್ದೆಯನ್ನು ಕಳೆದ ಸರ್ಕಾರದ ಅವಧಿಯಲ್ಲಿ ತಂದಿರಲಿಲ್ಲ.
ನೀವ್ಯಾಕೆ ಕಾಯ್ದೆಯನ್ನ ವಿರೋಧಿಸುತ್ತೀರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಸಿ.ಟಿ.ರವಿ ಪ್ರಶ್ನಿಸಿದರು. ನಾನು ಎಮ್ಮೆ, ಹಸು ಕಾಯುತ್ತಿದ್ದೆ ಅಂತಾ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಹಸು-ಎಮ್ಮೆ ಮೇಯಿಸಿದವರು ಅವುಗಳ ಹತ್ಯೆಯನ್ನು ಸಹಿಸಲ್ಲ ಎಂದು ಟಾಂಗ್ ನೀಡಿದರು. ಅದೇ ರೀತಿ ಮೋಸದ ಮತಾಂತರಕ್ಕಾಗಿ ಮಾಡಿದ ಲವ್ ಜಿಹಾದ್ ಬೇಡ. ಕಾನೂನಿನ ಮೂಲಕ ಇದನ್ನು ನಿಯಂತ್ರಣ ಮಾಡುವ ಕೆಲಸವಾಗಬೇಕಿದೆ ಎಂದರು.
ತಮಿಳುನಾಡಿಗೆ ನಡ್ಡಾ-ಶಾ ಭೇಟಿ, ರಜನಿಕಾಂತ್ ಭೇಟಿ ನಿಗದಿಯಿಲ್ಲ:
ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಮಿಳುನಾಡಿಗೆ ಬರುತ್ತಿದ್ದಾರೆ. ಆ ರಾಜ್ಯದ ವರಿಷ್ಠರ ಜೊತೆ ಸಮಾಲೋಚನೆ ನಡೆಸುತ್ತಾರೆ. 2021ರಲ್ಲಿ ಚುನಾವಣೆ ಇದೆ. ಇದರ ಕಾರ್ಯತಂತ್ರ ಕುರಿತು ನಾಳೆ ಸಭೆ ಮಾಡಲಿದ್ದೇವೆ ಎಂದರು.
ಅಮಿತ್ ಶಾ ಹಾಗೂ ರಜನಿಕಾಂತ್ ಭೇಟಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಈವರೆಗಿನ ಅಮಿತ್ ಶಾ ಅವರ ಕಾರ್ಯಕ್ರಮ ಪಟ್ಟಿಯಲ್ಲಿ ರಜನಿಕಾಂತ್ ಭೇಟಿ ನಿಗದಿ ಆಗಿಲ್ಲ. ರಜನಿಕಾಂತ್ ಪಕ್ಷಕ್ಕೆ ಬರ್ತಾರೆ ಅಂತ ಒಂದು ವರ್ಷದಿಂದ ಹೇಳಲಾಗುತ್ತಿದೆ. ಆದರೆ ಅಮಿತ್ ಶಾ ಪಕ್ಷದ ಕಾರ್ಯಕ್ರಮ ಮತ್ತು ಸರ್ಕಾರಿ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಯಾವುದೇ ಭೇಟಿಯ ಬಗ್ಗೆ ನಿರ್ಧಾರವಾಗಿಲ್ಲ. ಕಾರ್ಯಕ್ರಮ ಪಟ್ಟಿ ಬದಲಾದರೆ ಮಾತ್ರ ಆ ಸಾಧ್ಯತೆ ಇದೆ ಎಂದರು.
ಸಿಎಂ ಸಮರ್ಥರಿದ್ದಾರೆ: