ಕರ್ನಾಟಕ

karnataka

ETV Bharat / state

ಎನ್​ಡಿಎಗೆ ಮತ ಹಾಕುವಂತೆ ಕುಟುಂಬ ಸದಸ್ಯರ ಮನವೊಲಿಸಿ; ಬಿಹಾರಿಗಳಿಗೆ ಸಿಟಿ ರವಿ ಕರೆ - ಬಿಹಾರಿಗಳ ಭರವಸೆ

ಬಿಹಾರದ ಅಭಿವೃದ್ಧಿ ಎನ್​ಡಿಎ ಸರ್ಕಾರದಿಂದ ಮಾತ್ರ ಸಾಧ್ಯ, ಹಿಂದಿನ ಅಭಿವೃದ್ಧಿ ಕಾರ್ಯವನ್ನು ಗಮನಿಸಿ ಎನ್‌ಡಿಎಗೆ ಮತ ಚಲಾಯಿಸಲು ತಮ್ಮ ತಮ್ಮ ಕುಟುಂಬಸ್ಥರು, ಸ್ನೇಹಿತರು ಮತ್ತು ಸಂಬಂಧಿಕರ ಮನವೊಲಿಸುವಂತೆ ಸಿಟಿ ರವಿ ಮನವಿ ಮಾಡಿದರು.

CT Ravi Conversation with Bihar people in Bangakuru
ಬಿಹಾರದ ಜನರೊಂದಿಗೆ ಸಂವಾದ ನಡೆಸಿದ ಸಿಟಿ ರವಿ

By

Published : Oct 29, 2020, 11:47 PM IST

ಬೆಂಗಳೂರು: ಬಿಹಾರ ಚುನಾವಣೆಯಲ್ಲಿ ಎನ್​ಡಿಎ ಪರ ಮತ ಚಲಾಯಿಸುವಂತೆ ತಮ್ಮ ಕುಟುಂಬ ಸದಸ್ಯರ ಮನವೊಲಿಸುವಂತೆ ಬೆಂಗಳೂರಿನಲ್ಲಿ ನೆಲೆಸಿರುವ ಬಿಹಾರ ರಾಜ್ಯದ ಜನರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮನವಿ ಮಾಡಿದರು.

ನಗರದ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್​​ನಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಬಿಹಾರದ ನಮ್ಮ ಜನರೊಂದಿಗೆ ಸಿ.ಟಿ. ರವಿ ಸಂವಾದ ನಡೆಸಿದರು. 2014 ರಿಂದ ಭಾರತ ಮತ್ತು ಬಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಹಾರದ ಎನ್​ಡಿಎ ಸರ್ಕಾರ ನೀಡಿರುವ ಕೊಡುಗೆಗಳು, ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದರು.

ಬಿಹಾರದ ಅಭಿವೃದ್ಧಿ ಎನ್​ಡಿಎ ಸರ್ಕಾರದಿಂದ ಮಾತ್ರ ಸಾಧ್ಯ, ಹಿಂದಿನ ಅಭಿವೃದ್ಧಿ ಕಾರ್ಯವನ್ನು ಗಮನಿಸಿ ಎನ್‌ಡಿಎಗೆ ಮತ ಚಲಾಯಿಸಲು ತಮ್ಮ ತಮ್ಮ ಕುಟುಂಬಸ್ಥರು, ಸ್ನೇಹಿತರು ಮತ್ತು ಸಂಬಂಧಿಕರ ಮನವೊಲಿಸುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಬಿಹಾರಿಗಳು, ತಮ್ಮ ಕುಟುಂಬ ಸದಸ್ಯರ ಮೇಲೆ ಪ್ರಭಾವ ಬೀರುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details