ಕರ್ನಾಟಕ

karnataka

ETV Bharat / state

ವರದಕ್ಷಿಣೆ ದಾಹ: ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿ ಪತಿಯ ಕ್ರೌರ್ಯ - Fire to wife for dowry

ವರದಕ್ಷಿಣೆಗೆ ಪೀಡಿಸುತ್ತಿದ್ದ ಪತಿ ಹಾಗೂ ಅತ್ತೆ-ಮಾವ ಯುವತಿಯ ಗುಪ್ತಾಂಗಕ್ಕೆ ಬೆಂಕಿ ಇಟ್ಟಿರುವ ಅಮಾನವೀಯ ಕೃತ್ಯ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಸಿ.ಪಾಳ್ಯದ ಬಳಿ ಜರುಗಿದೆ.

ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಕಿರಾತಕ
ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಕಿರಾತಕ

By

Published : Oct 10, 2020, 10:21 AM IST

ಬೆಂಗಳೂರು:ಮಗಳು ಸುಖವಾಗಿ ಬದುಕಲೆಂದು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ ತಂದೆ-ತಾಯಿ ಇಂದು ಮಗಳ ಪರಿಸ್ಥಿತಿ ಕಂಡು ಮರುಗುವಂತಾಗಿದೆ. ಈ ನರರಾಕ್ಷಸನ ಕೃತ್ಯಕ್ಕೆ ಮಾನವೀಯ ಸಮಾಜ ತಲೆತಗ್ಗಿಸುವಂತಾಗಿದೆ.

ಸುಟ್ಟಗಾಯಗಳಿಂದ ಬಳಲುತ್ತಿರುವ ಪತ್ನಿ

ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಸಿ.ಪಾಳ್ಯದ ಬಳಿ ವಾಸವಿರುವ ಸೂರಜ್ ಸಿಂಗ್ ಕಳೆದೊಂದು ವರ್ಷದ ಹಿಂದೆ ಯುವತಿಯೋರ್ವಳನ್ನು ವರಿಸಿದ್ದ. ಮದುವೆ ಆದಾಗಿನಿಂದಲೂ ಸಹ ವರದಕ್ಷಿಣೆಗಾಗಿ ಪೀಡಿಸುತ್ತಿದ್ದನಂತೆ. ಆದರೆ ಯುವತಿಯ ತಂದೆ-ತಾಯಿ 15 ಲಕ್ಷ ರೂಪಾಯಿ ಖರ್ಚು ಮಾಡಿ ವಿವಾಹ ಮಾಡಿದ್ದರು. ಆದರೂ ಪದೇ ಪದೆ ಹಣಕ್ಕಾಗಿ ಪೀಡಿಸುತ್ತಿದ್ದನಂತೆ.

ಪತಿ ಸೂರಜ್ ಸಿಂಗ್ ನಿನ್ನೆ ಮನೆಯಲ್ಲಿ ಸೈಟ್ ಕೊಡಿಸುವಂತೆ ಕೇಳಿದ್ದಾನಂತೆ. ಆಗಲ್ಲ ಎಂದಿದ್ದಕ್ಕೆ ಗಲಾಟೆ ಮಾಡಿದ್ದು, ಜಗಳ ತಾರಕಕ್ಕೇರಿ ಪತಿ ಹಾಗೂ ಅತ್ತೆ-ಮಾವ ಮೂವರು ಪತ್ನಿಗೆ ಪೆಟ್ರೋಲ್ ಸುರಿದು ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ್ದಾರೆಂದು ತಿಳಿದುಬಂದಿದೆ.

ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಕಿರಾತಕ ಪತಿ ಸೂರಜ್‌ ಸಿಂಗ್‌

ಸದ್ಯ ಸುಟ್ಟ ಗಾಯಗಳಿಂದಾಗಿ ಯುವತಿಯು ಜೀವನ್ಮರಣ ಹೋರಾಟವನ್ನು ನಡೆಸುತ್ತಿದ್ದಾರೆ. ಈ ಸಂಬಂಧ ರಾಮಮೂರ್ತಿನಗರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

ABOUT THE AUTHOR

...view details