ಬೆಂಗಳೂರು: ಇಷ್ಟು ದಿನ ರಸ್ತೆ ಮೇಲೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ಮಾತ್ರ ಟ್ರಾಫಿಕ್ ಪೊಲೀಸರು ಕೇಸ್ ಹಾಕುತ್ತಿದ್ದರು. ಆದರೆ, ಇನ್ಮುಂದೆ ಫುಟ್ಪಾತ್ ಅತಿಕ್ರಮಣ ಮಾಡಿದರೂ ಕೇಸ್ ಬೀಳೋದು ಖಚಿತವಾಗಿದೆ.
ಬೆಂಗಳೂರು ಸಂಚಾರ ಪೊಲೀಸರು ಸಿಆರ್ಪಿಸಿ 107 ಭದ್ರತಾ ಕಾಯ್ದೆಯಡಿ ಕೇಸ್ ದಾಖಲು ಮಾಡ್ತಿದ್ದಾರೆ. ಎಷ್ಟೇ ಹೇಳಿದ್ರೂ ಅಂಗಡಿ ಮುಂಗಟ್ಟುಗಳ ಮುಂದೆ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿ ವಾಹನ ಪಾರ್ಕ್ ಮಾಡೋದು ಜಾಸ್ತಿಯಾಗಿತ್ತು.